'ಗೂಗಲ್‌ ಮ್ಯಾಪ್‌'ಗೆ ಸೆಡ್ಡು ಹೊಡೆಯಲು ಮತ್ತೆ ಬಂತು 'ಆಪಲ್ ಮ್ಯಾಪ್'!

|

ಆಪಲ್ ಐಫೋನ್ ಬಳಕೆದಾರರಿಗೆ ಇನ್ಮುಂದೆ 'ಗೂಗಲ್ ಮ್ಯಾಪ್ಸ್' ಬಳಕೆ ಸಿಗುವುದಿಲ್ಲ ಅಥವಾ ಐಫೋನ್ ಮತ್ತು ಐಪಾಡ್‌ ಬಳಕೆದಾರರು ಗೂಗಲ್‌ ಮ್ಯಾಪ್‌ ಬಳಸುವ ಅಗತ್ಯ ಕೂಡ ಇಲ್ಲ ಎಂಬುದು ನಿಮಗೆ ಗೊತ್ತಾ.? ಹೌದು, 'ಗೂಗಲ್ ಮ್ಯಾಪ್ಸ್'ಗಿಂತಲೂ ಉತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿರುವ ತನ್ನದೇ ಪೂರ್ಣ ಪ್ರಮಾಣದ ಮ್ಯಾಪ್‌ ಅನ್ನು ಆಪಲ್ ಪರಿಚಯಿಸಿದೆ. ನಿರಂತರ ಪ್ರಯೋಗ ಮತ್ತು ಪರಿಶೀಲನೆಯ ಬಳಿಕ ಆಪಲ್‌ ಐಒಎಸ್ 13ನಲ್ಲಿ ತನ್ನದೇ ಮ್ಯಾಪ್‌ ಅಪ್‌ಡೇಟ್ ಅನ್ನು ಆಪಲ್ ತಂದಿದೆ.

ಆಪಲ್ ಕಂಪೆನಿ ತನ್ನದೇ ಪೂರ್ಣ ಪ್ರಮಾಣದ ಆಪಲ್ ಮ್ಯಾಪ್‌ ಅನ್ನು ಇದೀಗ ಪರಿಚಯಿಸಿದೆ. 2012ರಲ್ಲಿಯೇ ಗೂಗಲ್‌ ಮ್ಯಾಪ್‌ಗೆ ಪರ್ಯಾಯವನ್ನು ಬಿಡುಗಡೆ ಮಾಡಿ ಸೋತ್ತಿದ್ದ ಆಪಲ್ ಕಂಪನಿ ಈ ಬಾರಿ ತನ್ನ ಮ್ಯಾಪ್‌ನಲ್ಲಿ ಹೊಸ ಹೊಸ ಅಪ್‌ಡೇಟ್‌ಗಳನ್ನು ಅಳವಡಿಸಿಕೊಂಡು ಬಂದಿದೆ. ಸಾರ್ವಜನಿಕ ಸ್ಥಳಗಳ ವಿಸ್ತೃತ ಮಾಹಿತಿ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ತನ್ನ ಮ್ಯಾಪ್‌ನ ಕೆಲವು ವೈಶಿಷ್ಟ್ಯಗಳು ಗೂಗಲ್‌ ಮ್ಯಾಪ್‌ಗಿಂತಲೂ ಉತ್ತಮವಾಗಿರಲಿವೆ ಎಂದು ಕಂಪೆನಿ ಹೇಳಿಕೊಂಡಿದೆ.

'ಗೂಗಲ್‌ ಮ್ಯಾಪ್‌'ಗೆ ಸೆಡ್ಡು ಹೊಡೆಯಲು ಮತ್ತೆ ಬಂತು 'ಆಪಲ್ ಮ್ಯಾಪ್'!

ತನ್ನ ಗ್ರಾಹಕರ ಸುರಕ್ಷತೆ ಮತ್ತು ಡೇಟಾ ರಕ್ಷಣೆಯಲ್ಲಿ ಯಾವಾಗಲೂ ಮುಂದಿರುವ ಆಪಲ್ ಈ ಬಾರಿ ಗೂಗಲ್‌ಗೆ ಸೆಡ್ಡು ಹೊಡೆದುನಿಂತಿದೆ. ಗೂಗಲ್‌ ಕೇಳುವ ಮಾಹಿತಿಗಳನ್ನು ನೀಡಿ ಅದಕ್ಕೆ ಮಣಿಯಲು ಸಿದ್ಧವಿಲ್ಲದಿರುವುದರಿಂದ, ಗೂಗಲ್‌ ಮ್ಯಾಪ್‌ಗೆ ಗುಡ್‌ ಬೈ ಹೇಳಿ ತನ್ನದೇ ಆದ 'ಆಪಲ್‌ ಮ್ಯಾಪ್‌' ಬಂದಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಗೂಗಲ್‌ ಮ್ಯಾಪ್ಸ್‌ಗೆ ಪರ್ಯಾಯವಾಗಿ ಬಂದಿರುವ ಆಪಲ್‌ ಮ್ಯಾಪ್‌ ಹೇಗಿದೆ?, ಗೂಗಲ್‌ ಮ್ಯಾಪ್‌ಗೆ ಇದು ಸಾಟಿಯಾಗಬಹುದೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಐಒಎಸ್ 13ನಲ್ಲಿ ಬಂದಿದೆ ಆಪಲ್‌ ಮ್ಯಾಪ್‌!

ಐಒಎಸ್ 13ನಲ್ಲಿ ಬಂದಿದೆ ಆಪಲ್‌ ಮ್ಯಾಪ್‌!

ಗೂಗಲ್‌ಗೆ ಮಣಿಯಲು ಸಿದ್ದವಿರದ ಆಪಲ್ ಸಂಸ್ಥೆ ಗೂಗಲ್‌ ಮ್ಯಾಪ್‌ಗೆ ಗುಡ್‌ ಬೈ ಹೇಳಿ ತನ್ನದೇ ಆದ ಆಪಲ್‌ ಮ್ಯಾಪ್‌ ಅನ್ನು ಐಒಎಸ್ 13ನಲ್ಲಿ ಬಿಡುಗಡೆ ಮಾಡಿದೆ. ಈಗ ಒಟ್ಟಾರೆ ಐಫೋನ್ ಬಳಕೆದಾರರಲ್ಲಿ ಗೂಗಲ್‌ ಮ್ಯಾಪ್‌ ಬಳಕೆಯನ್ನು ಬಿಟ್ಟು ಆಪಲ್‌ ಮ್ಯಾಪ್‌ ಬಳಕೆ ಆರಂಭಿಸಿರುವವರ ಸಂಖ್ಯೆ 2.3 ಕೋಟಿಗೆ ಬಂದಿದೆ. ಆಪಲ್‌ ಮ್ಯಾಪ್‌ನಲ್ಲಿರುವ ಕೆಲವು ವೈಶಿಷ್ಟ್ಯಗಳು ಗೂಗಲ್‌ ಮ್ಯಾಪ್‌ಗಿಂತಲೂ ಉತ್ತಮವಾಗಿರಲಿವೆ ಎಂದು ಆಪಲ್ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಗೂಗಲ್‌ಗೆ ಮ್ಯಾಪ್‌ಗೆ ಸೆಡ್ಡು ಹೊಡೆದ ಆಪಲ್!

ಗೂಗಲ್‌ಗೆ ಮ್ಯಾಪ್‌ಗೆ ಸೆಡ್ಡು ಹೊಡೆದ ಆಪಲ್!

ಟೆಕ್ ಜಗತ್ತಿನಲ್ಲಿ ಗೂಗಲ್ ಮತ್ತು ಆಪಲ್‌ ಕಂಪೆನಿಗಳಿಗೆ ಗೆ ಭಾರೀ ಪೈಪೋಟಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಮ್ಯಾಪ್ ವಿಷಯದಲ್ಲಿ ಆಪಲ್ ಗೂಗಲ್ ಮ್ಯಾಪ್ಸ್ ಅನ್ನು ಅವಲಂಬಿಸಬೇಕಿತ್ತು. ತನ್ನದೇ ಮ್ಯಾಪ್‌ ಆಯ್ಕೆಯನ್ನು ಆಪಲ್ ಐಒಎಸ್ 6ನಲ್ಲೇ ನೀಡಿದರೂ ಸಹ, ಮ್ಯಾಪ್‌ನಲ್ಲಿ ಮಾಹಿತಿಯ ಕೊರತೆ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಸಿಇಒ ಟಿಮ್‌ ಕುಕ್‌ ಅವರು ಈ ಬಗ್ಗೆ ಕ್ಷಮೆಯನ್ನೂ ಕೇಳಿದ ನಂತರ ಗೂಗಲ್‌ ಮ್ಯಾಪ್‌ ಬಳಕೆಗೆ ಆಪಲ್ ಮನಸ್ಸು ಮಾಡಿತ್ತು.

ನಂತರ ಗೂಗಲ್‌ ಮತ್ತು ಆಪಲ್‌ ಮಧ್ಯೆ ಒಪ್ಪಂದ

ನಂತರ ಗೂಗಲ್‌ ಮತ್ತು ಆಪಲ್‌ ಮಧ್ಯೆ ಒಪ್ಪಂದ

ಇದಾದ ನಂತರ ಐಫೋನ್‌ನಲ್ಲಿ ಗೂಗಲ್ ಮ್ಯಾಪ್‌ ಬಳಸಲು ಗೂಗಲ್‌ ಮತ್ತು ಆಪಲ್‌ ಮಧ್ಯೆ ಒಪ್ಪಂದ ಆಗಿತ್ತು. ಅದರಂತೆ, ಐಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಬಳಸಬಹುದಾಗಿತ್ತು. ಆದರೆ, ಇಲ್ಲಿ ತಕರಾರುಗಳು ಇದ್ದವು. ಐಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಬಳಸುವವರ ಕೆಲವೇ ಕೆಲವು ಮಾಹಿತಿಗಳನ್ನು ಮಾತ್ರವೇ ಪಡೆಯಲು ಗೂಗಲ್‌ಗೆ ಅನುಮತಿ ಇದ್ದುದರಿಂದ ಐಫೋನ್ ಬಳಕೆದಾರರಿಗೆ ಗೂಗಲ್‌ ತನ್ನ ವೈಶಿಷ್ಟ್ಯಗಳನ್ನು ನೀಡುತ್ತಿರಲಿಲ್ಲ. ನೀಡಬೇಕು ಎಂದರೆ ಇದಕ್ಕೆ ಆಪಲ್ ಸಂಸ್ಥೆ ಹಣಪಾವತಿಸಬೇಕಿತ್ತು.

ತನ್ನದೇ ಮ್ಯಾಪ್‌ಗಾಗಿ ಆಪಲ್‌ನಿಂದ ಹೂಡಿಕೆ!

ತನ್ನದೇ ಮ್ಯಾಪ್‌ಗಾಗಿ ಆಪಲ್‌ನಿಂದ ಹೂಡಿಕೆ!

ಆಪಲ್‌ ತನ್ನ ಗ್ರಾಹಕರ ಮಾಹಿತಿಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲ ಎನ್ನುವ ಕಾರಣಕ್ಕೆ ಗೂಗಲ್‌ ತನ್ನ ವೈಶಿಷ್ಟ್ಯಗಳನ್ನು ನೀಡುತ್ತಿರಲಿಲ್ಲ. ಇದರಿಂದ ಗೂಗಲ್‌ಗೆ ಜಾಹೀರಾತಿನಿಂದ ಬರುವ ವರಮಾನ ಕಡಿಮೆಯಾದರೆ, ಆಪಲ್‌ಗೆ ತನ್ನ ಗ್ರಾಹಕರಿಗೆ ಗೂಗಲ್‌ ಮ್ಯಾಪ್‌ ಸೌಲಭ್ಯ ನೀಡುವುದಕ್ಕಾಗಿ ಗೂಗಲ್‌ಗೆ ಹಣ ಕೊಡಬೇಕಾಗಿತ್ತು. ಹಾಗಾಗಿ, ಗೂಗಲ್ ಮೇಲೆ ಅವಲಂಬನೆಯಾಗದೇ ತನ್ನದೇ ಅತ್ಯುತ್ತಮ ಮ್ಯಾಪ್ ಬೇಕೆ ಬೇಕು ಎಂದು ಆಪಲ್ ಮುಂದಾಯಿತು. ಇದಕ್ಕಾಗಿ ಸಾವಿರಾರು ಕೋಟಿ ಹಣ ಸುರಿದು ಇದೀಗ ಹೊಸ ಮ್ಯಾಪ್ ತಂದಿದೆ.

ಇದೀಗ ಆಪಲ್‌ ಮ್ಯಾಪ್‌ ಮರುವಿನ್ಯಾಸ

ಇದೀಗ ಆಪಲ್‌ ಮ್ಯಾಪ್‌ ಮರುವಿನ್ಯಾಸ

ತನ್ನದೇ ಮ್ಯಾಪ್‌ಗಾಗಿ ಹೂಡಿಕೆಯನ್ನೂ ಮಾಡುತ್ತಾ ಬಂದಿರುವ ಆಪಲ್‌, ಇದೀಗ ಹೆಚ್ಚಿನ ಮಾಹಿತಿ ಮತ್ತು ನಿಖರವಾದ ಸ್ಥಳವನ್ನು ಗುರುತಿಸುವಂತೆ ಗಮನ ಕೇಂದ್ರೀಕರಿಸಿದೆ. ಗೂಗಲ್‌ ಸ್ಟ್ರೀಟ್ ವೀವ್‌ ಫೀಚರ್ ನಂತೆ ತನ್ನದೇ ‘ಲುಕ್‌ ಅರೌಂಡ್‌' ಸೇವೆ ನೀಡಲಿದೆ. ಇದರಿಂದ ಆಪಲ್‌ ಮ್ಯಾಪ್‌ನಲ್ಲೂ ಸ್ಥಳದ 360 ಡಿಗ್ರಿ ಫೋಟೊಗ್ರಾಫಿಕ್ ವೀವ್‌ ಸಿಗಲಿದೆ. ಬಳಕೆದಾರರ ಮೆಚ್ಚಿನ ಸ್ಥಳಗಳನ್ನು ಆಪ್‌ನ ಹೋಮ್‌ ಸ್ಕ್ರೀನ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ಕೆಲವು ನಿರ್ದಿಷ್ಟ ಸ್ಥಳಗಳನ್ನು ಹತ್ತಿರದ ಸದಸ್ಯರೊಂದಿಗೆ ಶೇರ್‌ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.

ಯಶಸ್ವಿಯಾಗುತ್ತಾ ಆಪಲ್‌ ಮ್ಯಾಪ್‌?

ಯಶಸ್ವಿಯಾಗುತ್ತಾ ಆಪಲ್‌ ಮ್ಯಾಪ್‌?

2012ರಲ್ಲಿಯೇ ಗೂಗಲ್‌ ಮ್ಯಾಪ್‌ಗೆ ಪರ್ಯಾಯವನ್ನು ಬಿಡುಗಡೆ ಮಾಡಿ ಸೋತ್ತಿದ್ದ ಆಪಲ್ ಕಂಪನಿ ಈ ಬಾರಿ ತನ್ನ ಮ್ಯಾಪ್‌ನಲ್ಲಿ ಹೊಸ ಹೊಸ ಅಪ್‌ಡೇಟ್‌ಗಳನ್ನು ಅಳವಡಿಸಿಕೊಂಡು ಬಂದಿದೆ. ಆದರೆ, ಇಂದು ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ಪೈಪೋಟಿ ನೀಡುವ ಮ್ಯಾಪ್‌ಗಳು ಇಲ್ಲವೇ ಇಲ್ಲ ಎನ್ನಬಹುದು. ಗೂಗಲ್‌ ಈಗಲೂ ಮ್ಯಾಪ್‌ನಲ್ಲಿ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇರುತ್ತದೆ. ಹೀಗಾಗಿ ಗೂಗಲ್‌ ಮ್ಯಾಪ್‌ಗೆ ಸರಿಸಾಟಿಯಾಗಲಾರದು ಎನ್ನುವ ಅಭಿಪ್ರಾಯಗಳು ಕೂಡ ಟೆಕ್ ವಲಯದಲ್ಲಿ ವ್ಯಕ್ತವಾಗುತ್ತಿವೆ.

Best Mobiles in India

English summary
In iOS 13, integrated into the Apple Maps app on your iPhone, you can you share your journey status with personal contacts in a feature called. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X