Subscribe to Gizbot

ಲಾಂಚ್ ಆಯ್ತ ಹೊಸ IRCTC ಬುಕಿಂಗ್ ಆಪ್: ರೈಲು ಪ್ರಯಾಣ ಇನಷ್ಟು ಸುಲಭ

Written By:

ಭಾರತದಲ್ಲಿ ರೈಲು ಪ್ರಯಾಣ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಈ ಪ್ರಯಾಣವನ್ನು ಸುಲಭ ಮತ್ತು ಸ್ವಚ್ಛಗೊಳಿಸಲು ಸಾಕಷ್ಟು ಶ್ರಮವಹಿಸುತ್ತಿದೆ. ಈ ಹಂತದಲ್ಲಿ ಹೊಸ ಬುಕಿಂಗ್ ಆಪ್ ಬಿಡುಗಡೆ ಮಾಡಲಾಗಿದೆ.

ಲಾಂಚ್ ಆಯ್ತ ಹೊಸ IRCTC ಬುಕಿಂಗ್ ಆಪ್: ರೈಲು ಪ್ರಯಾಣ ಇನಷ್ಟು ಸುಲಭ

ಜಿಯೋ ಹೊಡೆತಕ್ಕೆ ಶರಣಾದ ವೊಡೋಪೋನ್, ಐಡಿಯಾ ರಿಲಯನ್ಸ್ ತೆಕ್ಕೆಗೆ...?

'IRCTC Rail Connect app' ರೈಲ್ವೆ ಇಲಾಖೆ ಹೊಸದಾಗಿ ಪರಿಚಯಿಸಿರುವ ಆಪ್ ಆಗಿದ್ದು, ರೈಲ್ವೆ ಮಂತ್ರಿ ಸುರೇಶ್ ಪ್ರಭು ಈ ಆಪ್ ಅನ್ನು ಲಾಂಚ್ ಮಾಡಿದ್ದಾರೆ. ಪ್ರತಿ ನಿತ್ಯ ಸುಮಾರು 10 ಲಕ್ಷ ಮಂದಿ ಇ-ಟಿಕೇಟ್ ಪಡೆದು ಪ್ರಯಾಣಿಸುತ್ತಿದ್ದು, ಈ ಹಿನ್ನಲೆಯಲ್ಲಿ ಇ-ಟಿಕೇಟ್ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಲು ಈ ಆಪ್ ಸಹಾಯಕಾರಿಯಾಗಲಿದೆ ಎಂದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮುಂದಿನ ತಲೆಮಾರಿನ ಇ-ಟಿಕೇಟ್:

ಮುಂದಿನ ತಲೆಮಾರಿನ ಇ-ಟಿಕೇಟ್:

'IRCTC Rail Connect app' ಮುಂದಿನ ತಲೆಮಾರಿನ ಟಿಕೇಟಿಂಗ್ ಆಪ್ ಆಗಿದ್ದು, ಬಳಕೆದಾರರ ಸ್ನೇಹಿಯಾಗಿದೆ. ಈ ಹಿಂದಿನ ಆಪ್ ಗಳಂತೆ ಬಳಕೆದಾರರನ್ನು ಗೊಂದಲಪಡಿಸದೆ ಸುಲಭವಾಗಿ ಟಿಕೇಟ್ ಬುಕ್ ಮಾಡಲು ಈ ಆಪ್ ಸಹಾಯಕಾರಿಯಾಗಿದೆ. ಈ 'IRCTC Rail Connect app' ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರು ಈ ಆಪ್ ಬಳಸಿ ಟಿಕೇಟ್ ಬುಕ್ ಮಾಡುವ ಅವಕಾಶವನ್ನು ನೀಡಲಾಗಿದೆ.

ಸೆಕ್ಯೂರಿಟಿಗೆ ಹೆಚ್ಚಿನ ಆದ್ಯತೆ:

ಸೆಕ್ಯೂರಿಟಿಗೆ ಹೆಚ್ಚಿನ ಆದ್ಯತೆ:

'IRCTC Rail Connect app'ನಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ನಿಮ್ಮ ಹಳೇಯ ಯುಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಬಹುದು ಇಲ್ಲವೇ ಹೊಸದಾಗಿ ರಿಜಿಸ್ಟ್ರೆಷನ್ ಮಾಡಿಕೊಳ್ಳಬಹುದು. ಒಮ್ಮೆ ಲಾಗಿನ್ ಆದ ನಂತರ ನಾಲ್ಕು ಅಂಕೆಗಳ ಪಿನ್ ಕೊಡ್ ನೀಡಬೇಕು. ಮುಂದೆ ಮತ್ತೆ ಆಪ್ ಗೆ ಲಾಗ್ ಆಗುವ ಸಮಯದಲ್ಲಿ ಈ ಕೋಡ್ ನೀಡಿದರೆ ಸಾಕು.

ಪೇಮೆಂಟ್ ಮಾಡುವುದು ಸುಲಭ:

ಪೇಮೆಂಟ್ ಮಾಡುವುದು ಸುಲಭ:

ಈ ಹೊಸ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿದ ನಂತರ ವಿವಿಧ ಬ್ಯಾಂಕುಗಳಿಂದ ನೇರವಾಗಿ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡುವ ಅವಕಾಶ ಈ ಆಪ್ ನಲ್ಲಿದೆ. ಇದಲ್ಲದೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಈ ವಾಲೆಟ್ ಗಳಿಂದಲೂ ಹಣ ಪಾವತಿ ಮಾಡಬಹುದಾಗಿದೆ. ಪೇಟಿಮ್, ಪೇಯೂ, ಮೊಬಿಕ್ವಿಕ್ ಬಳಸಬಹುದಾಗಿದೆ. ಇದರೊಂದಿಗೆ IRCTC ಇ-ವಾಲೆಟ್ ಅನ್ನು ಪರಿಚಯಿಸಿದ್ದು, ಈ ಮೂಲಕ ಪ್ರಯಾಣಿಕರು IRCTC ಇ-ವಾಲೆಟ್‌ಗೆ ಹಣ ತುಂಬಿ ಮುಂದಿನ ದಿನದಲ್ಲಿ ಬಳಸಬಹುದಾಗಿದೆ.

ಏರ್ ಟಿಕೇಟ್, ಊಟವನ್ನು ಬುಕ್ ಮಾಡಬಹುದು:

ಏರ್ ಟಿಕೇಟ್, ಊಟವನ್ನು ಬುಕ್ ಮಾಡಬಹುದು:

'IRCTC Rail Connect app'ನಲ್ಲಿ ಏರ್ ಟಿಕೇಟ್ ಬುಕ್ ಮಾಡಬುಹುದಾಗಿದ್ದು, ರೈಲಿನಲ್ಲಿ ನಿಮಗೆ ಬೇಕಾದ ಊಟವನ್ನು ಬುಕ್ ಮಾಡಿಕೊಳ್ಳುವ ಅವಕಾಶ ಇದೆ. ಒಂದೇ ಆಪ್ ನಲ್ಲಿ ವಿವಿಧ ರೀತಿಯ ಅವಕಾಶಗಳನ್ನು ಒಳಗೊಂಡಿದೆ ಎನ್ನಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
ticketing through digital transactions, Railway Minister Suresh Prabhu on Tuesday released the new passenger mobile application named 'IRCTC Rail Connect app'. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot