Subscribe to Gizbot

ಮಾರ್ಚ್ 31ಕ್ಕಿಂತಲೂ ಮುಂಚೆಯೇ ಜಿಯೋ ಹೊಸ ಸೇವೆ ಮಾಹಿತಿ ಲೀಕ್..!!

Written By:

ಜಿಯೋ ಹೊಸ ಮಾದರಿಯ ಸೇವೆಯೊಂದನ್ನು ಆರಂಭಿಸಲು ಮುಂದಾಗಿದೆ. ಹೆಚ್ಚಾಗಿ ಜಿಯೋ ಸಿಮ್ ಅನ್ನು 4G VoLTE ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಬಳಕೆದಾರರಿಗೆ ಬ್ಯಾಟರಿ ಸಮಸ್ಯೆಯೂ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಹಾಯಕ್ಕಾಗಿ ಹೊಸದೊಂದು ಆಪ್‌ ಅನ್ನು೦ ಆರಂಭಿಸಲು ಮುಂದಾಗಿದ್ದು, ಇದಕ್ಕೆ ಜಿಯೋ ಜ್ಯೂಸ್ ಎನ್ನುವ ಹೆಸರನ್ನು ಇಟ್ಟಿದೆ ಎನ್ನಲಾಗಿದೆ.

ಮಾರ್ಚ್ 31ಕ್ಕಿಂತಲೂ ಮುಂಚೆಯೇ ಜಿಯೋ ಹೊಸ ಸೇವೆ ಮಾಹಿತಿ ಲೀಕ್..!!

ಸಾಮಾಜಿಕ ಜಾಲತಾಣಗಳಲ್ಲಿ ಜಿಯೋ ಹೊಸ ಮಾದರಿಯ ಆಪ್ ಸೇವೆಯ ಟೀಸರ್ ಕಾಣಿಸಿಕೊಂಡಿದ್ದು, ಜಿಯೋ ಜ್ಯೂಸ್ ಫೋಟೋವನ್ನು ನೋಡಿದರೆ ಬ್ಯಾಟರಿ ಸೇವಿಂಗ್ ಆಪ್ ಮಾದರಿಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸದ್ಯ ಈ ಆಪ್ ಟೆಸ್ಟಿಂಗ್ ನಲ್ಲಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಈ ಆಪ್ ಬಗ್ಗೆ ಯಾವುದೇ ಮಾಹಿತಿಯನ್ನು ಜಿಯೋ ಬಿಟ್ಟುಕೊಟ್ಟಿಲ್ಲ.

ಜಿಯೋ ಬಳಕೆದಾರರು ಪ್ರೈಮ್ ಸದಸ್ಯತ್ವವೂ ಇದೇ ತಿಂಗಳ ಅಂತ್ಯಕ್ಕೆ ಕೊನೆಯಾಗಲಿದ್ದು, ಈ ಹಿನ್ನಲೆಯಲ್ಲಿ ಹೊಸ ಆಫರ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಸಂದರ್ಭದಲ್ಲಿ ಈ ಆಪ್ ಬಗ್ಗೆ ಮಾಹಿತಿಯೂ ಲಭ್ಯವಾಗಿದೆ. ಈ ಹೊಸ ಆಪ್ ಮಾರುಕಟ್ಟೆಯಲ್ಲಿ ಹೊಸ ಆಫರ್ ನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಮಾರ್ಚ್ 31ಕ್ಕಿಂತಲೂ ಮುಂಚೆಯೇ ಜಿಯೋ ಹೊಸ ಸೇವೆ ಮಾಹಿತಿ ಲೀಕ್..!!

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಆಪ್‌ಗಳನ್ನು ಜಿಯೋ ಲಾಂಚ್ ಮಾಡಿದೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಹೊಸ ಸ್ಮಾರ್ಟ್‌ಫೋನ್ ಬ್ಯಾಟರಿ ಸೇವ್ ಮಾಡುವಂತ ಆಪ್‌ವೊಂದನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಇದು ಬೀಟಾ ಹಂತದಲ್ಲಿದೆ ಎನ್ನುವ ಮಾಹಿತಿ ಇದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?

ಮಾರುಕಟ್ಟೆಯಲ್ಲಿ ಜಿಯೋ ನೀಡುವ ಹೊಸ ಆಪರ್ ನಿರೀಕ್ಷೆ ಹೆಚ್ಚಾಗಿದ್ದು, ಪ್ರೈಮ್ ಸದಸ್ಯರು ಜಿಯೋ ನಡೆಯನ್ನು ಗಮನಿಸುತ್ತಿದ್ದು, ಅಂಬಾನಿ ಹೊಸ ಆಫರ್ ವೊಂದನ್ನು ನೀಡುವ ಸಾಧ್ಯತೆ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೊಸ ಪ್ಲಾನ್ ಇಲ್ಲವೇ ಪ್ರೈಮ್ ಸದಸ್ಯತ್ವವನ್ನು ಮುಂದುವರೆಸುವ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ.

English summary
Jio Juice Teased, May Be a Battery Saver App. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot