Subscribe to Gizbot

ಸ್ಮಾರ್ಟ್‌ಫೋನಿನಲ್ಲಿ ಲೈವ್ ಕ್ರಿಕೆಟ್ ಮ್ಯಾಚ್: ಜಿಯೋ TV ಆಪ್‌ನಲ್ಲಿರುವ ಈ ಆಯ್ಕೆ ಬಗ್ಗೆ ನಿಮಗೆ ತಿಳಿದಿಲ್ಲ..!

Written By:

ಭಾರತೀಯ ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಹೊಸ ಭಾಷ್ಯ ಬರೆಯಲು ಮುಂದಾಗಿದರು ರಿಲಯನ್ಸ್ ಮಾಲೀಕತ್ವದ ಜಿಯೋ, ತನ್ನ ಜಿಯೋ ಟಿವಿ ಆಪ್‌ನಲ್ಲಿ ಬಳಕೆದಾರರಿಗೆ ಇಂಟರ್ ಆಕ್ಟೀವ್ ಸ್ಪೋಡ್ಸ್ ಎಕ್ಸಪೀರಿಯನ್ಸ್ ಸೇವೆಯನ್ನು ನೀಡಲು ಮುಂದಾಗಿದೆ. ಜಿಯೋ ಟಿವಿ ಆಪ್‌ನಲ್ಲಿ ನಿಮಗೆ ಬೇಕಾದ ಕ್ಯಾಮೆರಾದಲ್ಲಿ ಇಂಡೋ-ಲಂಕಾ ಲೈವ್ ಮ್ಯಾಚ್ ನೋಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಜಿಯೋ TV ಆಪ್‌ನಲ್ಲಿರುವ ಈ ಆಯ್ಕೆ ಬಗ್ಗೆ ನಿಮಗೆ ತಿಳಿದಿಲ್ಲ..!

ಜಿಯೋ ತನ್ನ ಬಳಕೆದಾರರಿಗೆ ಇತಿಹಾಸದಲ್ಲಿ ಯಾರು ನೀಡಿರದಂತಹ ಆಫರ್ ವೊಂದನ್ನು ನೀಡಲು ಮುಂದಾಗಿದೆ. ತನ್ನ ಜಿಯೋ ಟಿವಿ ಆಪ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಟಿವಿ ಆಪ್ ಇತಿಹಾಸದಲ್ಲಿಯೇ ಮೈಲುಗಲ್ಲಾಗುವ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಜಿಯೋ ಟಿವಿ ಆಪ್ ಬಳಕೆದಾರರು ತಮಗೆ ಬೇಕಾದ ಹಾಗೆ ಲೈವ್ ಸ್ಪೋಡ್ಸ್ ಚಾನಲ್ ನೋಡುವ ಅವಕಾಶವನ್ನು ಜಿಯೋ ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತ್ರಿಕೋನ ಸರಣಿ:

ತ್ರಿಕೋನ ಸರಣಿ:

ಸದ್ಯ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್ ಸರಣಿಯನ್ನು ಜಿಯೋ ಟಿವಿ ಆಪ್ ಬಳಕೆದಾರರು ನೇರವಾಗಿ ನೋಡಬಹುದಾಗಿದೆ. ಅಲ್ಲದೇ ಇದು ಲೈವ್ ಟಿವಿ ಆಪ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ ಎನ್ನಲಾಗಿದೆ. ಭಾರತ-ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿಯನ್ನು ಮೊಬೈಲ್‌ನಲ್ಲಿಯೇ ನೋಡಬಹುದಾಗಿದೆ. ಅದುವೇ ಹೊಸ ಮಾದರಿಯಲ್ಲಿ.

5 ಕ್ಯಾಮೆರಾ ಮಾದರಿಯಲ್ಲಿ ನೋಡಬಹುದು:

5 ಕ್ಯಾಮೆರಾ ಮಾದರಿಯಲ್ಲಿ ನೋಡಬಹುದು:

ಜಿಯೋ ಟಿವಿ ಆಪ್ ಬಳಕೆದಾರರು ಇಂಟರ್ ಆಕ್ಟೀವ್ ಸ್ಪೋಡ್ಸ್ ಎಕ್ ಪೀರಿಯನ್ಸ್ ಪಡೆಯಬಹುದಾಗಿದೆ. ಇದರಲ್ಲಿ ಬಳಕೆದಾರರು ಒಟ್ಟು 5 ಕ್ಯಾಮೆರಾ ಅಂಗಲ್ ನಲ್ಲಿ ಕ್ರಿಕಟ್ ಅನ್ನು ನೋಡಬಹುದಾಗಿದೆ.

ಸ್ಟೇಡಿಯಂನಲ್ಲಿದ್ದ ಅನುಭವ:

ಸ್ಟೇಡಿಯಂನಲ್ಲಿದ್ದ ಅನುಭವ:

ಇದಲ್ಲದೇ ಸ್ಟಂಪ್ ಮೈಕ್ ಮತ್ತು ಸ್ಟೇಡಿಯಂನಲ್ಲಿ ಪ್ರೇಕ್ಷಕರ ಕಿರುಚಾಟವನ್ನು ತಮ್ಮ ಮೊಬೈಲ್ ಫೋನಿನಲ್ಲಿಯೇ ಕೇಳಬಹುದಾಗಿದೆ. ಇದು ಸ್ಟೇಡಿಎಂನಲ್ಲಿ ಇದ್ದ ಅನುಭವವನ್ನು ಪಡೆಯಬಹುದಾಗಿದೆ.

ಕಾಮೆಂಟ್ರಿ ನಿಮ್ಮ ಭಾಷೆಯಲ್ಲಿ:

ಕಾಮೆಂಟ್ರಿ ನಿಮ್ಮ ಭಾಷೆಯಲ್ಲಿ:

ಇದಲ್ಲದೇ ಜಿಯೋ ಟಿವಿ ಆಪ್ ನಲ್ಲಿ ನೀವು ನಿಮ್ಮ ಭಾಷೆಯಲ್ಲಿ ಕಾಮೆಂಟ್ರಿಯನ್ನು ಪಡೆಯಬಹುದಾಗಿದೆ. ಹಿಂದಿ, ಇಂಗ್ಲಿಷ್, ತಮಿಳ್, ತೆಲಗು ಮತ್ತು ಕನ್ನಡದಲ್ಲಿ ನೀವು ವಿಕ್ಷಕ ವಿವರಣೆಯನ್ನು ಪಡೆಯಬಹುದು.

ಅಲ್ಲದೇ ನಿಮ್ಮ ನೆಚ್ಚಿನ ಆಟಗಾರ ಕಾಮೆಂಟ್ರಿ:

ಅಲ್ಲದೇ ನಿಮ್ಮ ನೆಚ್ಚಿನ ಆಟಗಾರ ಕಾಮೆಂಟ್ರಿ:

ಇದಲ್ಲದೇ ನೀವು ನಿಮಗೆ ಬೇಕಾದ ಮಾದರಿಯಲ್ಲಿ ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಗೌವರ್ ಕಪೂರ್ ದನಿಯಲ್ಲಿ ಕಾಮೆಂಟ್ರಿಯನ್ನು ನೀವು ಜಿಯೋ ಟಿವಿಯಲ್ಲಿ ಪಡೆಯಬಹುದು.

How to Activate UAN Number? KANNADA
ಒಂದೇ ಕ್ಲಿಕ್‌ನಲ್ಲಿ:

ಒಂದೇ ಕ್ಲಿಕ್‌ನಲ್ಲಿ:

ಇದಲ್ಲದೇ ನೀವು ಜಿಯೋ ಟಿವಿ ಆಪ್ ನಲ್ಲಿ ನೀವು ಒಂದೇ ಕ್ಲಿಕ್‌ನಲ್ಲಿ ನೀವು ಈ ಕ್ರಿಕೆಟ್ ಸರಣಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
JIO TV announces India's FIRST interactive sports experience. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot