ಜಿಯೋ ಆಪ್‌ನಲ್ಲಿ 621 ಉಚಿತ ಲೈವ್ ಟಿವಿ ಚಾನಲ್‌ಗಳು!..ಡಿಟಿಹೆಚ್ ಪ್ಲೇಯರ್‌ಗಳಿಗೆ ಮುಖಭಂಗ!!

|

ರಿಲಯನ್ಸ್ ಜಿಯೋ ಸಂಪೂರ್ಣ ರಿಲಯನ್ಸ್ ಜಿಯೋ ಆಪ್ ಗಳನ್ನು ಆಫರ್ ಮಾಡುತ್ತಿದ್ದು ಅದರಲ್ಲಿ ಜಿಯೋ ಟಿವಿ, ಜಿಯೋ ಮೂವೀಸ್ ಮತ್ತು ಇತ್ಯಾದಿಗಳು ಸೇರಿವೆ. ಈ ಎಲ್ಲಾ ಸೇವೆಗಳು ರಿಲಯನ್ಸ್ ಜಿಯೋ ಚಂದಾದಾರರಿಗೆ ಉಚಿತವಾಗಿ ಲಭ್ಯವಾಗುತ್ತಿದೆ ಮತ್ತು ಇದು ರಿಲಯನ್ಸ್ ಜಿಯೋ ಪ್ರಾರಂಭವಾದಾಗಿನಿಂದಲೂ ದೂರಸಂಪರ್ಕ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

621 ಚಾನಲ್ ಗಳನ್ನು ನೀಡಲಿರುವ ಜಿಯೋ ಟಿವಿ:

621 ಚಾನಲ್ ಗಳನ್ನು ನೀಡಲಿರುವ ಜಿಯೋ ಟಿವಿ:

ಇದೀಗ ಪ್ರಮುಖ ಬೆಳವಣಿಗೆಯೊಂದರಲ್ಲಿ ಜಿಯೋ ಟಿವಿ ಆಪ್ 621 ಲೈವ್ ಟಿವಿ ಚಾನಲ್ ಗಳನ್ನು ಸ್ಟ್ರೀಮ್ ಮಾಡಲಿದೆ ಮತ್ತು ಇತರೆ ಪ್ರಮುಖ ಫ್ಲ್ಯಾಟ್ ಫಾರ್ಮ್ ನ ಜೊತೆಗೆ ನೇರ ಸ್ಪರ್ಧೆಯಲ್ಲಿದೆ.

ಕೆಲವು ಡಿಟಿಎಚ್ ಸೇವಾ ನಿರತರು ನೀಡುವುದಕ್ಕಿಂತ ಅಧಿಕ ಚಾನಲ್ ಗಳನ್ನು ಇದೀಗ ಜಿಯೋ ಟಿವಿ ಆಪ್ ಸ್ಟ್ರೀಮ್ ಮಾಡಲಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ ಜಿಯೋ ಟಿವಿ ಆಪ್ ಚಂದಾದಾರರಿಗೆ ಪ್ರೀಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ರೀಚಾರ್ಜ್ ಮಾಡಿದಾಗ ಲಭ್ಯವಾಗುವ ಕಾಂಪ್ಲಿಮೆಂಟರಿ ಆಕ್ಸಿಸ್ ಆಗಿರುವುದರಿಂದಾಗಿ ಗ್ರಾಹಕರಿಗೆ ಬಹಳಷ್ಟು ಲಾಭದಾಯಕವಾಗಿರುತ್ತದೆ.

ಯಾವ ಯಾವ ಚಾನಲ್ ಗಳು ಎಷ್ಟೆಷ್ಟು?

ಯಾವ ಯಾವ ಚಾನಲ್ ಗಳು ಎಷ್ಟೆಷ್ಟು?

ಇದರ ಜೊತೆಗೆ ಜಿಯೋ ಟಿವಿ ಆಪ್ ಇದೀಗ ಅತೀ ಹೆಚ್ಚು ಸುದ್ದಿ ಚಾನಲ್ ಗಳು(193) ಜೊತೆಗೆ ಮನರಂಜನೀಯ ಚಾನಲ್ ಗಳು (122) ಗಳನ್ನು ಸ್ಟ್ರೀಮ್ ಮಾಡುತ್ತದೆ. ಇನ್ನು 50 ಧಾರ್ಮಿಕ ಚಾನಲ್ ಗಳು 49 ಎಜುಕೇಷನಲ್ ಚಾನಲ್ ಗಳನ್ನು ಚಂದಾದಾರರಿಗೆ ನೀಡುತ್ತದೆ. ಅಷ್ಟೇ ಅಲ್ಲ 35 ಮಾಹಿತಿ ಪ್ರಸಾರದ ಚಾನಲ್ ಗಳು, 27 ಮಕ್ಕಳ ಚಾನಲ್ ಗಳು, 8 ಬ್ಯುಸಿನೆಸ್ ಚಾನಲ್ ಗಳು ಮತ್ತು 10 ಲೈಫ್ ಸ್ಟೈಲ್ ಚಾನಲ್ ಗಳನ್ನು ಜಿಯೋ ಟಿವಿ ನೀಡುತ್ತದೆ. ಜಿಯೋ ಟಿವಿ ಆಪ್ ನಲ್ಲಿ ಇದೀಗ ಒಟ್ಟು 621 ಚಾನಲ್ ಗಳನ್ನು ವೀಕ್ಷಕರು ವೀಕ್ಷಿಸಲು ಅವಕಾಶವಿದೆ.

ವಿಭಿನ್ನ ಭಾಷೆಯಲ್ಲಿ ಟಿವಿ ಚಾನಲ್ ಗಳು:

ವಿಭಿನ್ನ ಭಾಷೆಯಲ್ಲಿ ಟಿವಿ ಚಾನಲ್ ಗಳು:

ಜಿಯೋ ಟಿವಿ ಆಪ್ ಯಾವುದೇ ಒಂದು ಭಾಷೆಗೆ ಸೀಮಿತವಾಗಿರುವುದಲ್ಲ. ಹಿಂದಿ, ಇಂಗ್ಲೀಷ್, ಕನ್ನಡ, ಗುಜರಾತಿ, ಮರಾಠಿ, ಪಂಜಾಬಿ, ತೆಲುಗು, ತಮಿಳು, ಮಳಯಾಳಂ, ಅಸ್ಸಾಮೀಸ್, ಓಡಿಸ್ಸಾ, ಭೋಜ್ ಪುರಿ, ಉರ್ದು, ಬೆಂಗಾಲಿ ಮತ್ತು ಫ್ರೆಂಚ್ ಭಾಷೆಗಳಲ್ಲಿ ಲಭ್ಯವಿದೆ. ಅದರಲ್ಲಿ 32 ಹಿಂದಿ ಹೆಚ್ ಡಿ ಚಾನಲ್ ಗಳು ಮತ್ತು 46 ಇಂಗ್ಲೀಷ್ ಹೆಚ್ ಡಿ ಚಾನಲ್ ಗಳು ಜಿಯೋ ಟಿವಿ ಆಪ್ ನಲ್ಲಿ ರಿಲಯನ್ಸ್ ಜಿಯೋ ನೀಡುತ್ತಿದೆ.

ಏರ್ ಟೆಲ್ ಟಿವಿಗೆ ಹೋಲಿಕೆ ಮಾಡಿ ಹೇಳುವುದಾದರೆ 375+ ಟಿವಿ ಚಾನಲ್ ಗಳು ಜೊತೆಗೆ 10,000+ ಮೂವಿಗಳು ಮತ್ತು ಪಾಪುಲರ್ ಟಿವಿ ಶೋ ಗಳು ರಿಲಯನ್ಸ್ ಜಿಯೋ ನಲ್ಲಿ ಲಭ್ಯವಿದೆ. ಹಾಟ್ ಸ್ಟರ್, ಅಮೇಜಾನ್, ಯ್ಯೂರೋಸ್ ನೌ ಮತ್ತು ಸೋನಿ ಲೈವ್ ನಿಂದ ಎಕ್ಸ್ ಕ್ಲೂಸೀವ್ ಕವರೇಜ್ ಕೂಡ ಚಂದಾದಾರರಿಗೆ ಲಭ್ಯವಾಗುತ್ತದೆ. ಇನ್ನೊಂದೆಡೆ ವಡಾಫೋನ್ ಪ್ಲೇ ಆಪ್ 5000 ಮೂವಿಗಳನ್ನು ತಮ್ಮ ಚಂದಾದಾರರಿಗೆ ಆಫರ್ ಮಾಡುತ್ತದೆ.

ಒಟ್ಟಾರೆ ಹೇಳುವುದಾದರೆ ರಿಲಯನ್ಸ್ ಜಿಯೋ ಆಪ್ ಗ್ರಾಹಕರಿಗೆ ಬಹಳ ಲಾಭದಾಯವಾಗಿರುತ್ತದೆ.

Best Mobiles in India

Read more about:
English summary
JioTV App now has 621 Live TV channels for free, puts major DTH players to shame

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X