ವೈ-ಫೈ ಪಾಸ್‌ವರ್ಡ್ ಹ್ಯಾಕ್ ಮಾಡುವ "ಆಪ್" ಬಗ್ಗೆ ನಿಮಗೆಷ್ಟು ಗೊತ್ತು?

Written By:

ಕೆಲವು ದಿವಸಗಳಿಂದ ಪಬ್ಲಿಕ್ ವೈ-ಫೈ ಹ್ಯಾಕ್ ಮಾಡುವ ಹೊಸ ಆಪ್‌ ಬಿಡುಗಡೆಯಾಗಿದೆ ಎನ್ನುವ ಮಾಹಿತಿ ಹರಿದಾಡಿದೆ. WiFiMap-Free Passwords ಆಪ್‌ ಮೂಲಕ ಪಬ್ಲಿಕ್ ವೈ-ಫೈ ಪಾಸ್'ವರ್ಡ್ ಏನೆಂದು ಈ ಆಪ್‌ ಕಂಡುಹಿಡಿದು ಅವರಿಗೆ ತಿಳಿಯದ ಹಾಗೆ ನಾವು ಇಂಟರ್‌ನೆಟ್‌ ಬಳಸಬಹುದು ಎನ್ನುವ ಸುದ್ದಿ ಎಲ್ಲಡೇ ಹರಿದಾಡುತ್ತಿದೆ.!!

ಆದರೆ, ಸತ್ಯದ ಸುದ್ದಿ ಏನೆಂದರೆ ಯಾವುದೇ ಕಾರಣಕ್ಕೂ ಈ ಆಪ್‌ ಮೂಲಕ ಬೇರೆಯವರ ಪಾಸ್‌ವರ್ಡ್ ಮುರಿದು ಇಂಟರ್‌ನೆಟ್ ಉಪಯೋಗಿಸಲು ಸಾಧ್ಯವಿಲ್ಲಾ.!! ಸ್ಮಾರ್ಟ್‌ಫೋನ್‌ ಅಥವಾ ವೈಫೈ ರೂಟರ್‌ಗಳಲ್ಲಿ ಇರುವ ಸಾಫ್ಟವೇರ್‌ ಕ್ರಾಕ್‌ ಮಾಡಲು ಯಾವುದೇ ಡಿವೈಸ್‌ಗಳಿಂದ ಸಾಧ್ಯವಿಲ್ಲ. ಕೆಲವೊಂದು ಆಪ್‌ಗಳು ಇದರಲ್ಲಿ ಸ್ವಲ್ಪ ಯಶಸ್ವಿಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲಾ ಎನ್ನುತ್ತಾರೆ ನೆಟ್‌ ತಜ್ಞರು.

ವೈ-ಫೈ ಪಾಸ್‌ವರ್ಡ್ ಹ್ಯಾಕ್ ಮಾಡುವ

ಫ್ಲಾಶ್‌ ಸೇಲ್‌ನಲ್ಲಿ ಒಂದು ನಿಮಿಷಕ್ಕೆ "ನೋಕಿಯಾ 6" ಸೋಲ್ಡ್ ಔಟ್‌!!

WiFiMap-Free Passwords ಆಪ್‌ ಡೌನ್‌ಲೋಡ್ ಮಾಡಿ ಲೊಕೇಶನ್ ಹಾಕಿದ ನಂತರ ನೀವು ನಮೂದಿಸಿದ ಸ್ಥಳದ ಸುತ್ತಮುತ್ತಲು ಲಭ್ಯವಿರುವ ವೈ-ಫೈ ಸಿಗ್ನಲ್‌ಗಳ ಹೆಸರು ಹಾಗೂ ಪಾಸ್'ವರ್ಡ್ ಕಾಣಿಸಿಕೊಳ್ಳುತ್ತದೆ ಎನ್ನುವುದು ಸುಳ್ಳು ಮಾಹಿತಿ. ನಿಮ್ಮ ಬಳಿಯಲ್ಲಿನ ವೈ-ಫೈ ಸಿಗ್ನಲ್‌ಗಳನ್ನು ಮಾತ್ರ ಅದು ತೋರಿಸುತ್ತದೆ ಅಷ್ಟೆ.!!

ವೈ-ಫೈ ಪಾಸ್‌ವರ್ಡ್ ಹ್ಯಾಕ್ ಮಾಡುವ

ಇದಕ್ಕಿಂತಲೂ ಹೆಚ್ಚಿನದಾಗಿ ಯಾರದ್ದೊ ಸ್ವಂತ ವೈ-ಫೈ ಬಳಸಿದರೆ, ವೈ-ಫೈ ಮಾಲಿಕನಿಗೆ ಅದರ ಬಗ್ಗೆ ನೊಟಿಫಿಕೇಶನ್ ಹೋಗುತ್ತದೆ. ಇದರಿಂದ ಅವರು ಬೇರೆ ಡಿವೈಸ್‌ಗಳನ್ನು ಲಾಕ್‌ ಮಾಡಬಹುದಾಗಿದ್ದು, ಈ ಉಚಿತ ವೈ-ಫೈ ಆಪ್‌ಗಳು ಸ್ಮಾರ್ಟ್‌ಫೊನ್‌ ಜಾಗವನ್ನು ಹಾಳುಮಾಡುವುದಲ್ಲದೇ, ವೈ-ಫೈ ಹುಡುಕಲು ನಿಮ್ಮ ಸಮಯವನ್ನು ಹಾಳು ಮಾಡುತ್ತದೆ. ಹಾಗಾಗಿ, ಇಂತಹ ಆಪ್‌ಗಳನ್ನು ಅಪ್ರಯೋಜಕ ಆಪ್‌ಗಳು ಎನ್ನಬಹುದು.!English summary
users receive specific directions on where to sit to best access the WiFi connection.to know more visit to kannada.gizbot.com
Please Wait while comments are loading...
Opinion Poll

Social Counting