Subscribe to Gizbot

ಆಂಡ್ರಾಯ್ಡ್ ಮಾಲ್ವೇರ್ ತಡೆಗೆ ಗೂಗಲ್ ನಿಂದ ಹೊಸ ಉಪಾಯ..!!

Written By: Lekhaka

ಗೂಗಲ್ ನ ಓಪನ್ ಪ್ಲಾಟ್ ಫಾರ್ಮ್ ಆಂಡ್ರಾಯ್ಡ್ ಯಾವಾಗಲು ಸೆಕ್ಯೂರಿಟಿ ಸಮಸ್ಯೆಯನ್ನು ಎದುರಿಸುತ್ತಿರುತ್ತದೆ. ಇದನ್ನು ನಿವಾರಿಸಲು ಗೂಗಲ್ ಪ್ರಯತ್ನಿಸುತ್ತಲೇ ಇರುತ್ತದೆ. ಮಾಲ್ ವೇರ್ ಗಳು ಹಾಗೂ ಸಂಶಯಾತ್ಮಕ ಆಪ್ ಗಳನ್ನು ಪ್ಲೇ ಸ್ಟೋರಿನಿಂದ ತೆಗೆದುಹಾಕುವ ಕಾರ್ಯವನ್ನು ಮಾಡುತ್ತದೆ. ಇದಕ್ಕಾಗಿಯೇ ಗೂಗಲ್ ಯಂತ್ರ ಕಲಿಕೆ ಮತ್ತು ಕೃತಕ ಬುದ್ದಿ ಮತ್ತೆಯ ಸಹಾಯವನ್ನು ಪಡೆಯುತ್ತದೆ.

ಆಂಡ್ರಾಯ್ಡ್ ಮಾಲ್ವೇರ್ ತಡೆಗೆ ಗೂಗಲ್ ನಿಂದ ಹೊಸ ಉಪಾಯ..!!

ಗೂಗಲ್ ಇಂದು ವ್ಯಾಪಕವಾಗಿ ಜನ ಪ್ರಿಯತೆಯನ್ನು ಗಳಿಸಿಕೊಳ್ಳುತ್ತಿರುವ ಕೃತಕ ಬುದ್ದಿ ಮತ್ತೆ ಮತ್ತು ಯಂತ್ರಕಲಿಕೆಯನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಆಂಡ್ರಾಯ್ಡ್ ಆಪ್ ಸ್ಟೋರ್ ಪ್ಲೇಸ್ಟೋರಿನಲ್ಲಿರುವ ಸಂಶಯಾತ್ಮಕ ಆಪ್ ಗಳನ್ನು ಪರೀಕ್ಷೆ ನಡೆಸುತ್ತಿದೆ.

ಇದಕ್ಕಾಗಿಯೇ ಗೂಗಲ್ ಪೀರ್ ಗ್ರೂಪಿಂಗ್ peer grouoing ಎನ್ನುವ ತಂತ್ರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಪೀರ್ ಗ್ರೂಪಿಂಗ್ ಮಾದರಿ ಆಪ್ ಗಳನ್ನು ತಾನೇ ಸೃಷ್ಟಿಸಲಿದ್ದು, ನಂತರ ಸಂಶಯವಿರುವ ಮಾದರಿಯಲ್ಲಿ ಬಳಕೆ ಮಾಡಲಿದೆ. ಒಮ್ಮೆ ಅದರಲ್ಲಿ ದೊಷ ಕಾಣಿಸಿಕೊಂಡರೆ ಅದನ್ನು ಪ್ಲೇ ಸ್ಟೋರಿನಿಂದ ತೆಗೆದು ಹಾಕಲಿದೆ.

ಈಗಾಲೇ ಆಂಡ್ರಾಯ್ಡ್ ಬಳಕೆ ದಾರರ ಸಂಖ್ಯೆಯೂ ಉಳಿದ ಓಎಸ್ ಬಳಕೆದಾರರಿಗಿಂತ ಅಧಿಕವಾಗಿ ಎಂದರೆ ತಪ್ಪಾಗುದಿಲ್ಲ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರ ಸೆಕ್ಯೂರಿಟಿಯನ್ನು ನೋಡಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ.

ಇದರಿಂದಾಗಿ ಇನ್ನು ಮುಂದೆ ಗೂಗಲ್ ಬಳಕೆಯ ಸಾಫ್ಟ್ ವೇರ್ ಗಳಲ್ಲಿ ಮಾಲ್ವೇರ್ ಕಾಣಿಸಿಕೊಳ್ಳುವುದು ಕಷ್ಟವೆನ್ನಲಾಗಿದೆ.

Read more about:
English summary
Google is using machine learning and AI to identify malware and suspicious apps on Play Store by grouping similar kinds of apps and running a check on them
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot