ಆಫ್‌ಲೈನ್‌ನಲ್ಲಿ ವರ್ಕ್‌ ಆಗುವ, ಡೌನ್‌ಲೋಡ್‌ ಮಾಡಿಕೊಳ್ಳಲೇಬೇಕಾದ ಟಾಪ್‌ 5 ಆಪ್‌ಗಳು!

By Suneel
|

ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಅಸಂಖ್ಯಾತ ಆಪ್‌ಗಳು ಲಭ್ಯವಿವೆ. ಪ್ರತಿಯೊಂದು ಆಪ್‌ಗಳು ಸಹ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆದಾರರ ದೈನಂದಿನ ಚಟುವಟಿಕೆಗಳನ್ನು ಸುಲಭಗೊಳಿಸುತ್ತವೆ. ಆದರೇ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಲು ಹೆಚ್ಚಿನ ಮೊಬೈಲ್‌ ಡಾಟಾ ವೆಚ್ಚವಾಗುತ್ತದೆ.

ಹಲವು ಮೊಬೈಲ್‌ ಎಕ್ಸ್‌ಪರ್ಟ್‌ಗಳು ಯಾವುದೇ ಆಪ್‌ ಅನ್ನು ಡೌನ್‌ಲೋಡ್ ಮಾಡಿ ಬಳಸಲು ಸ್ಮಾರ್ಟ್‌ಫೋನ್ ಬಳಕೆದಾರರು ವೈಫೈ ಬಳಸಿ ಎಂದು ಸಲಹೆ ನೀಡುತ್ತಾರೆ. ಆದರೆ ವೈಫೈ ಸಂಪರ್ಕ ಸಿಗದಿರುವವರ ಕತೆ ಏನು? ಡೋಂಟ್‌ ವರಿ.

ವಾಟ್ಸಾಪ್‌ ಅನ್ನು ಸರ್ಚ್ ಇಂಜಿನ್ ರೀತಿಯಲ್ಲಿ ಬಳಸುವುದು ಹೇಗೆ?

ಮ್ಯೂಸಿಕ್, ಮೂವೀಸ್ ಮತ್ತು ಕೆಲವು ಗೇಮ್‌ ಆಪ್‌ಗಳನ್ನು ಹೊರತುಪಡಿಸಿ, ಗೂಗಲ್‌ ಪ್ಲೇ ಸ್ಟೋರ್‌ ಕೆಲವು ಆಫ್‌ಲೈನ್‌ ಆಪ್‌ಗಳನ್ನು ಹೊಂದಿದೆ. ಈ ಆಪ್‌ಗಳು(Apps) ವರ್ಕ್‌ ಆಗಲು ಇಂಟರ್ನೆಟ್ ಕನೆಕ್ಷನ್‌ ಅಗತ್ಯವಿಲ್ಲ. ಆ ಆಪ್‌ಗಳು ಯಾವುವು, ಆಫ್‌ಲೈನ್ ವರ್ಕ್‌ ಆಗುವ ಆ ಆಪ್‌ಗಳ ಉಪಯೋಗ ಏನು ಎಂದು ಸಹ ತಿಳಿಯಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕೆಟ್ ಆಪ್‌ (Pocket App)

ಪಾಕೆಟ್ ಆಪ್‌ (Pocket App)

ಆಫ್‌ಲೈನ್‌ ಆಂಡ್ರಾಯ್ಡ್ ಆಪ್‌ ಇಮೇಜ್‌, ಟೆಕ್ಸ್ಟ್, ವೀಡಿಯೊ ಮತ್ತು ಇತರೆ ಮಾಹಿತಿಗಳನ್ನು ಸ್ಟೋರ್‌ ಮಾಡಿ ಇಡುವ ಸಾಮರ್ಥ್ಯ ಹೊಂದಿದೆ. ಆಪ್‌ ಬಳಕೆದಾರರು ಇಂಟರ್ನೆಟ್ ಸಂಪರ್ಕ ಇಲ್ಲದೇ ಆಪ್‌ ಮುಖಾಂತರ ನೆಚ್ಚಿನ ಮಾಹಿತಿ ಬಗ್ಗೆ ಅಪ್‌ಡೇಟ್ ಆಗಬಹುದು, ಮತ್ತು ಲೋಕಲ್‌ ಡ್ರೈವ್‌ನಲ್ಲಿ ಸೇವ್‌ ಮಾಡಬಹುದು.

 ಹಿಯರ್ ವಿಗೊ ಆಪ್‌(HERE WeGo App)

ಹಿಯರ್ ವಿಗೊ ಆಪ್‌(HERE WeGo App)

'ಹಿಯರ್ ವಿಗೊ ಆಪ್‌(HERE WeGo App)' ಆಪ್‌, ಸಕರಾತ್ಮಕವಾಗಿ ಆಫ್‌ಲೈನ್ ಮ್ಯಾಪ್‌ ಮತ್ತು ನಾವಿಗೇಷನ್ ಆಪ್‌ ಆಗಿದೆ. ಆಫ್‌ಲೈನ್‌ನಲ್ಲಿ ಸುಲಭವಾಗಿ ಬಳಕೆಯಾಗುತ್ತದೆ. ಈ ಆಪ್‌ ಬಳಕೆದಾರರು ಗೂಗಲ್‌ ಮ್ಯಾಪ್‌ನಲ್ಲಿರುವ ಸಾಮಾನ್ಯ ಫೀಚರ್‌ಗಳನ್ನು ಇದರಲ್ಲೂ ಸಹ ಇಂಟರ್ನೆಟ್ ಸಂಪರ್ಕವಿಲ್ಲದೇ ಬಳಸಬಹುದು.

 ಪ್ಲೇಯರ್‌ಎಫ್‌ಎಂ ಆಪ್‌(PlayerFM App)

ಪ್ಲೇಯರ್‌ಎಫ್‌ಎಂ ಆಪ್‌(PlayerFM App)

'ಪ್ಲೇಯರ್‌ಎಫ್‌ಎಂ ಆಪ್‌(PlayerFM App)' ಆಪ್‌ ಬಳಕೆದಾರರು ಈ ಆಪ್‌ನಲ್ಲಿ ತಮ್ಮ ನೆಚ್ಚಿನ ಪ್ರದೇಶದ ಎಫ್‌ಎಂ ಅನ್ನು ಹೆಸರಿಸಬೇಕು. ನಂತರ ಹಲವು ರಿಸಲ್ಟ್ ಬರುತ್ತದೆ. ಅದರಲ್ಲಿ ಒಂದನ್ನು ಮಾತ್ರ ಸಬ್‌ಸ್ಕ್ರೈಬ್‌ ಮಾಡಬೇಕು. ಬಳಕೆದಾರರು ಅಪ್‌ಡೇಟ್‌ಗಾಗಿ ಕಾನ್ಫಿಗರ್ ಮಾಡಬೇಕು.

ಕಿವಿಕ್ಸ್ ಆಪ್‌(Kiwix App)

ಕಿವಿಕ್ಸ್ ಆಪ್‌(Kiwix App)

'ಕಿವಿಕ್ಸ್ ಆಪ್‌(Kiwix App)' ಆಪ್‌ ಸಂಪೂರ್ಣವಾಗಿ ವಿಕಿಪೀಡಿಯ ಡಾಟಾಬೇಸ್‌ ಅನ್ನು ಆಂಡ್ರಾಯ್ಡ್ ಮೊಬೈಲ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಂತರ ಆಫ್‌ಲೈನ್‌ನಲ್ಲಿ ಆಪ್ ಆಕ್ಸೆಸ್ ಮಾಡಬಹುದು.

ಫೈನಾನ್ಸಿಯಸ್ ಆಪ್‌(Financiys App)

ಫೈನಾನ್ಸಿಯಸ್ ಆಪ್‌(Financiys App)

ಬಳಕೆದಾರರು ಆಪ್‌ ಡೌನ್‌ಲೋಡ್ ಮಾಡಿಕೊಂಡು ತಮ್ಮ ವೆಚ್ಚ ಮತ್ತು ಆದಾಯಗಳ ನಿರ್ವಹಣೆಯನ್ನು ಆಫ್‌ಲೈನ್‌ನಲ್ಲಿ ಮಾಡಬಹುದು. ಫೈನಾನ್ಸಿಯಸ್ ಆಪ್‌ ಬಳಕೆದಾರರು ಸುಲಭವಾಗಿ ತಮ್ಮ ಹಣ ಮತ್ತು ಹಲವು ಖಾತೆಗಳ ನಿರ್ವಹಣೆಯನ್ನು ಹಣ ಉಳಿಸಲು ಬಳಕೆ ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Must Download! Here are 5 Android Apps that Works Offline and Saves Data. To know more about this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X