ವಾಹನ ಸವಾರರೇ, ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲವೇ?..ಹಾಗಿದ್ರೆ, ಇಲ್ಲಿ ನೋಡಿ!

|

ಡ್ರೈವಿಂಗ್ ಚಾಲನೆ ಮಾಡುವಾಗ ಸವಾರರು ಡಿಎಲ್‌, ಆರ್‌ಸಿ ಹಾಗೂ ಇನ್ಶೂರೆನ್ಸ್‍ ಸೇರಿದಂತೆ ಪ್ರಮುಖ ದಾಖಲೆಗಳನ್ನು ಜೊತೆಗೆ ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಇನ್ನು ಬೈಕ್‌ ಸವಾರರು ದಾಖಲೆಗಳ ಜೊತೆಗೆ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಧರಿಸುವುದು ಮರೆಯಬಾರದು. ಆದ್ರೆ ಅನೇಕ ಸಂದರ್ಭಗಳಲ್ಲಿ ಸವಾರರು ಡಿಎಲ್‌, ಆರ್‌ಸಿ, ಎಮಿಷನ್‌ ಕಾಪಿಯ ದಾಖಲೆಗಳನ್ನು ಮನೆಯಲ್ಲಿಯೇ ಮರೆತು ಬಿಟ್ಟಿರುತ್ತಾರೆ.

ಟ್ರಾಫಿಕ್ ಪೊಲೀಸ್

ಇಂತಹ ವೇಳೆ ಏನಾದರೂ ಟ್ರಾಫಿಕ್ ಪೊಲೀಸ್ ತಡೆದು ತಪಾಸಣೆ ಮಾಡಿದಾಗ ಅನಿವಾರ್ಯವಾಗಿ ದಂಡ ಕಟ್ಟುವಂತಾಗುತ್ತದೆ. ಅದೇ ಸವಾರರ ಬಳಿ ಈ ಅಪ್ಲಿಕೇಶನ್ ಇದ್ರೆ, ದಂಡು ಕಟ್ಟುವ ಅಗತ್ಯ ಬಾರದು.

ಡಿಎಲ್‌, ಆರ್‌ಸಿ,

ಹೌದು, ವಾಹನ ಸವಾರರು ಫೋನಿನಲ್ಲಿ ಡಿಜಿಲಾಕರ್ ಆಪ್‌ (DigiLocker App) ಹೊಂದಿದ್ದರೆ, ಡಿಎಲ್‌, ಆರ್‌ಸಿ, ಎಮಿಷನ್‌ ಕಾಪಿಯ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯ ಇರದು. ಒಂದು ವೇಳೆ ಪೊಲೀಸ್ ತಪಾಸಣೆ ನಡೆಸಿದಾಗ ಡಿಜಿಲಾಕರ್ ಆಪ್‌ನಲ್ಲಿ ಅಗತ್ಯ ದಾಖಲೆಗಳನ್ನು ತೋರಿಸಬಹುದಾಗಿದೆ.

ಡಿಜಿಲಾಕರ್

ಇನ್ನು ಸವಾರರು ಡಿಜಿಲಾಕರ್ ಆಪ್‌ ನಲ್ಲಿ ಪ್ರಮುಖ ಎಲ್ಲ ದಾಖಲೆಗಳನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಹಾಗಾದರೆ ಡಿಜಿಲಾಕರ್ ಆಪ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಬುಕ್‌ ಅನ್ನು ಅಪ್ಲೋಡ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಜಿಲಾಕರ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್, RC ಬುಕ್‌ ಅನ್ನು ಅಪ್ಲೋಡ್‌ ಮಾಡಲು ಹೀಗೆ ಮಾಡಿ:

ಡಿಜಿಲಾಕರ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್, RC ಬುಕ್‌ ಅನ್ನು ಅಪ್ಲೋಡ್‌ ಮಾಡಲು ಹೀಗೆ ಮಾಡಿ:

ಮೊದಲನೆಯದಾಗಿ, ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ನಿಮ್ಮ ಡಿಜಿಲಾಕರ್ ಖಾತೆಯನ್ನು ನೀವು ಸೆಟ್‌ಮಾಡಬೇಕಾಗುತ್ತದೆ. ಡಿಜಿಲಾಕರ್ (DigiLocker) ಖಾತೆಯನ್ನು ನಿವು ಸೆಟ್‌ ಮಾಡಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ. ನಂತರ ನಿಮ್ಮ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ಡಿಜಿಲಾಕರ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ.

ಹಂತ

ಹಂತ 1: ನಿಮ್ಮ Android ಅಥವಾ iOS ಸಾಧನದಲ್ಲಿ ಉಚಿತ ಡಿಜಿಲಾಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ 2: ನಂತರ ನಿವು ಸದಾ ಬಳಸುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಿ. ಇದು ನಿಮ್ಮ ಡಿಜಿಲಾಕರ್ ಖಾತೆಯನ್ನು ಪ್ರವೇಶಿಸಲು ಅಗತ್ಯವಿರುವ ಒಂದು-ಬಾರಿ ಪಾಸ್‌ವರ್ಡ್ (ಓಟಿಪಿ) ಅನ್ನು ನಿಮಗೆ ಕಳುಹಿಸುತ್ತದೆ. ನಿಮ್ಮ ಖಾತೆಗಾಗಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ರಚಿಸಲು ಇದು ನಿಮ್ಮನ್ನು ಕೇಳುತ್ತದೆ.

ನಂತರ

ಹಂತ 3: ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿರುವ ಕೀಲಿಯು ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಹೆಸರು, ವಿಳಾಸ ಇತ್ಯಾದಿಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ. ಆದರೆ ನಿಮ್ಮ ಬಳಿಯಿರುವ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳಲ್ಲಿನ ವಿವರಗಳು ಆಧಾರ್ ಕಾರ್ಡ್‌ನಲ್ಲಿ ಹೊಂದಿಕೆಯಾಗಬೇಕು ಅನ್ನೊದು ಮುಖ್ಯವಾಗಿರುತ್ತದೆ.

ಪ್ರಮಾಣಪತ್ರ

ಹಂತ 4: ಇದೀಗ ರಿಯಲ್‌ ಟೈಂನಲ್ಲಿ ನಿಮ್ಮ ಅಕೌಂಟ್‌ ಅನ್ನು ಡಿಜಿಲಾಕರ್‌ನಲ್ಲಿ ಪಡೆದುಕೊಳ್ಳಲು ನಿಮ್ಮ ಚಾಲನಾ ಪರವಾನಗಿ ಸಂಖ್ಯೆಯನ್ನು ಸೇರಿಸಿ. ಇದು ರೆಕಾರ್ಡ್ ಕೀಪಿಂಗ್‌ಗಾಗಿ ಟೈಮ್ ಸ್ಟ್ಯಾಂಪ್ ಅನ್ನು ಹಾಕುತ್ತದೆ.


ಹಂತ 5: ಡ್ರೈವಿಂಗ್‌ ಲೈಸೆನ್ಸ್‌ ನಂತರ ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಉಳಿಸಲು ಡಿಜಿಲಾಕರ್ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

ದಾಖಲೆಗಳನ್ನು ತೊರಿಸಬಹುದು

ದಾಖಲೆಗಳನ್ನು ತೊರಿಸಬಹುದು

ಈ ಮೂಲಕ ಡಿಜಿಲಾಕರ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಬುಕ್‌ ಅನ್ನು ಡಿಜಿಲಾಕರ್‌ನಲ್ಲಿ (DigiLocker App) ಅಪ್ಲೋಡ್‌ ಮಾಡಬಹುದಾಗಿದೆ. ಅಲ್ಲದೆ ಇನ್ಮುಂದೆ ನೀವು ವಾಹನ ಚಲಾಯಿಸುವಾಗ ಡಿಜಿಲಾಕರ್‌ ಅಪ್ಲಿಕೇಶನ್‌ ಇದ್ದರೆ ಸಾಕು ಅಗತ್ಯವೆನಿಸಿದಾಗ ಡಿಜಿಲಾಕರ್‌ ಆಪ್‌ ನಲ್ಲಿರುವ ದಾಖಲೆಗಳನ್ನು ತೊರಿಸಬಹುದಾಗಿರುತ್ತದೆ.

Best Mobiles in India

English summary
Not carrying Driving license? Don't worry DigiLocker app will Help You.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X