ಇನ್ಮುಂದೆ ವಾಟ್ಸ್‌ಆಪ್‌ನಲ್ಲೇ ಯೂಟ್ಯೂಬ್ ವಿಡಿಯೋ ನೋಡಬಹುದು: ಹೇಗೆ..?

|

ದೇಶದಲ್ಲಿ ನಡೆಯುತ್ತಿರುವ ಮೊಬೈಲ್ ಡೇಟಾ ಕ್ರಾಂತಿ ಇಡೀ ವಿಶ್ವವನ್ನು ನಮ್ಮ ಕಡೆಗೆ ತಿರುಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಗೂಗಲ್-ಫೇಸ್‌ಬುಕ್‌ ಸೇರಿದಂತೆ ಎಲ್ಲಾ ದೈತ್ಯ ಕಂಪನಿಗಳು ಭಾರತದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಭಾರತೀಯರಿಗಾಗಿಗೇ ಸೇವೆಗಳನ್ನು ನೀಡಲು ಮುಂದಾಗಿವೆ.

ಇನ್ಮುಂದೆ ವಾಟ್ಸ್‌ಆಪ್‌ನಲ್ಲೇ ಯೂಟ್ಯೂಬ್ ವಿಡಿಯೋ ನೋಡಬಹುದು: ಹೇಗೆ..?

ಸದ್ಯ ದೇಶದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ತಾಣಗಳು ಎಂದರೆ ಅದು ಯೂಟ್ಯೂಬ್ ಮತ್ತು ವಾಟ್ಸ್‌ಆಪ್ ಇವು ಸಹ ಭಾರತೀಯರಿಗಾಗಿಯೆ ಬದಲಾಗಿವೆ.

ಓದಿರಿ: ಜಿಯೋ ಸೆಡ್ಡು ಹೊಡೆಯಲು ಬೆಂಗಳೂರಿಗರಿಗೆ ಮಾತ್ರವೇ ಸ್ಪೆಷಲ್ ಪ್ಲಾನ್ ನೀಡಿದ ACT ಬ್ರಾಡ್ ಬ್ಯಾಂಡ್..!

ಹೆಚ್ಚಿನ ಜನರನ್ನು ಆಕರ್ಷಿಸಿರುವ ಯೂಟ್ಯೂಬ್ ಮತ್ತು ವಾಟ್ಸ್‌ಆಪ್ ಎರಡು ಸಹ ಇನ್ನುಷ್ಟು ಜನರ ಬಳಿಗೆ ಹೋಗುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿವೆ. ವಾಟ್ಸ್‌ಆಪ್‌ನಲ್ಲಿಯೇ ಯೂಟ್ಯೂಬ್ ವಿಡಿಯೋಗಳನ್ನ ನೋಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿವೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ವಾಟ್ಸ್‌ಆಪ್ ಹೊಸ ಆಪ್‌ಡೇಟ್:

ವಾಟ್ಸ್‌ಆಪ್ ಹೊಸ ಆಪ್‌ಡೇಟ್:

ವಾಟ್ಸ್‌ಆಪ್ ತನ್ನ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ಹೊಸ ಆಯ್ಕೆಯನ್ನು ನೀಡುತ್ತಿದ್ದು, ಇದರಲ್ಲಿ ನೀವು ಸ್ನೇಹಿತರಿಗೆ ಯೂಟ್ಯೂಬ್ ವಿಡಿಯೋವನ್ನು ಕಳುಹಿಸಿದರೆ ಅವರು ಯೂಟ್ಯೂಬ್‌ಗೆ ಹೋಗಿ ವಿಡಿಯೋ ನೋಡುವ ಅವಶ್ಯಕತೆ ಇಲ್ಲ. ಬದಲಾಗಿ ವಾಟ್ಸ್‌ಆಪ್ ನಲ್ಲಿಯೇ ವಿಡಿಯೋವನ್ನು ನೋಡಬಹುದಾಗಿದೆ.

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ:

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ:

ಇದಕ್ಕಾಗಿಯೇ ವಾಟ್ಸ್‌ಆಪ್ ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯನ್ನು ನೀಡಲಾಗಿದ್ದು, ಇದರಿಂದಾಗಿ ವಾಟ್ಸ್‌ಆಫ್ ವಿಂಡೋದಲ್ಲಿಯೇ ಯೂಟ್ಯೂಬ್ ವಿಡಿಯೋವನ್ನು ನೋಡವ ಅವಕಾಶವನ್ನು ವಾಟ್ಸ್‌ಆಪ್ ಬಳಕೆದಾರರು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡುವ ಜೊತೆಗೆ ಚಾಟ್ ಮಾಡಿ..!

ವಿಡಿಯೋ ನೋಡುವ ಜೊತೆಗೆ ಚಾಟ್ ಮಾಡಿ..!

ಇದಲ್ಲದೇ ನೀವು ವಾಟ್ಸ್‌ಆಪ್‌ನಲ್ಲಿ ವಿಡಿಯೋವನ್ನು ನೋಡುವ ಜೊತೆಗೆ ನಿಮ್ಮ ಸ್ನೇಹಿತರೊಂದಿಗೆ ಚಾಟ್ ಸಹ ನಡೆಸಬಹುದಾಗಿದೆ. ಇದರಿಂದಾಗಿ ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಬಳಕೆ ಮತ್ತಷ್ಟು ಸುಲಭವಾಗಲಿದೆ ಎನ್ನಲಾಗಿದೆ.

ಶೀಘ್ರವೇ ಬಳಕಗೆ ಲಭ್ಯ:

ಶೀಘ್ರವೇ ಬಳಕಗೆ ಲಭ್ಯ:

ಈ ಆಯ್ಕೆಯೂ ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ ಎನ್ನುವ ಅಂಶವು ತಿಳಿದು ಬಂದಿದ್ದು, ಈಗಾಗಲೇ ಬಿಟಾ ಬಳಕೆದಾರರು ಈ ಆಯ್ಕೆಯನ್ನು ಪಡೆಯಬಹುದಾಗಿದೆ.

Best Mobiles in India

English summary
Now Play YouTube Videos With Picture-in-Picture Mode in WhatsApp. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X