1 ಸೆಕೆಂಡ್‌ನಲ್ಲಿ ಗಣಿತದ ಯಾವುದೇ ಲೆಕ್ಕ ಬಗೆಹರಿಸಿ

By Suneel
|

ಸ್ಮಾರ್ಟ್‌ಫೋನ್‌ ಬರುವ ಮೊದಲು ಜನ ಯಾವುದೇ ಮಾಹಿತಿ ತಿಳಿಯಲು ಪುಸ್ತಕಗಳ ಮೋರೆ ಹೋಗುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಟೆಕ್‌ ತಜ್ಞರು ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಈ ಅಪ್ಲಿಕೇಶನ್‌ಗಳು ಜನರ ಜೀವನವನ್ನು ಅತ್ಯಂತ ಸುಲಭ ಗೊಳಿಸುತ್ತಿವೆ.

ಓದಿರಿ: ಬೆಂಗಳೂರಿನ 3ಡಿ ಕಂಪೆನಿಗೆ ರಾಷ್ಟ್ರಪತಿ ಭವನದ ಮನ್ನಣೆ

ಸ್ಮಾರ್ಟ್‌ಫೋನ್‌ಗಳಿಂದ ಸ್ಟೂಡೆಂಟ್ಸ್‌ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳುವಷ್ಟು ಅಪ್ಲಿಕೇಶನ್‌ಗಳು ಈಗಾಗಲೇ ಅಭಿವೃದ್ದಿಗೊಂಡಿವೆ.ಆದರೆ ಗಣಿತ ವಿಷಯ ಮಾತ್ರ ಎಲ್ಲರಿಗೂ ಕಬ್ಬಿಣದ ಕಡಲೆ. ಈಗ ಗಣಿತ ವಿಷಯದಲ್ಲಿ ವೀಕ್‌ ಆಗಿರುವವರು ಇತರರ ಸಹಾಯವಿಲ್ಲದೇ ಗಣಿತ ಲೆಕ್ಕಗಳ ಸಮೀಕರಣಗಳನ್ನು ತಿಳಿಯಬಹುದಾಗಿದೆ. ಗಣಿತ ಲೆಕ್ಕಗಳ ಉತ್ತರ ಮತ್ತು ಸಮೀಕರಣವನ್ನು ಸಂಪೂರ್ಣವಾಗಿ ತಿಳಿಯಲು ಸ್ಮಾರ್ಟ್‌ಫೋನ್‌ ಕ್ಯಾಮೆರಾವನ್ನು ಲೆಕ್ಕದ ಮೇಲೆ ಫೋಕಸ್ ಮಾಡಿದರಾಯಿತು ಅಷ್ಟೇ. ಇದು ಹೇಗೆ ಸಾಧ್ಯ ಅಂತಿರಾ ? ಗಿಜ್‌ಬಾಟ್‌ನ ಈ ಲೇಖನ ಓದಿ.

PhotoMath ಅಪ್ಲಿಕೇಶನ್

PhotoMath ಅಪ್ಲಿಕೇಶನ್

PhotoMath ಅಪ್ಲಿಕೇಶನ್‌ ಆಗಿದ್ದು, ಇದು ಗಣಿತ ಶಿಕ್ಷಕರಿಗಿಂತ ಬಹುಬೇಗ ನಿಮಗೆ ಲೆಕ್ಕದ ಸಮೀಕರಣವನ್ನು ಬಿಡಿಸಿಕೊಡುತ್ತದೆ.

ಮೈಕ್ರೋಬ್ಲಿಂಕ್‌

ಮೈಕ್ರೋಬ್ಲಿಂಕ್‌

PhotoMath ಅಪ್ಲಿಕೇಶನ್‌, ಕ್ರೊಯೇಷಿಯಾ ಮತ್ತು ಲಂಡನ್‌ ಮೂಲದಲ್ಲಿನ ಮೈಕ್ರೋಬ್ಲಿಂಕ್‌ ಕಂಪನಿ ಅಭಿವೃದ್ದಿ ಪಡಿಸಿದೆ.

ಸಮೀಕರಣಗಳ ಸಮಸ್ಯೆ ಬಿಡಿಸುವಿಕೆ

ಸಮೀಕರಣಗಳ ಸಮಸ್ಯೆ ಬಿಡಿಸುವಿಕೆ

PhotoMath ಅಪ್ಲಕೇಶನ್ ಸಮೀಕರಣ, ಮೊತ್ತ ಕಂಡುಹಿಡಿಯುವಿಕೆಯಂತಹ ಸಮಸ್ಯಗೆಳನ್ನು ಕೇವಲ ಸೆಕೆಂಡುಗಳಲ್ಲಿ ಮಾಡಿಕೊಡುತ್ತದೆ.

 PhotoMath ಹೇಗೆ ಕೆಲಸ ನಿರ್ವಹಿಸುತ್ತದೆ.

PhotoMath ಹೇಗೆ ಕೆಲಸ ನಿರ್ವಹಿಸುತ್ತದೆ.

PhotoMath ಅಪ್ಲಿಕೇಶನ್‌ ಮೊಬೈಲ್‌ ಫೋನಿಮ ಕ್ಯಾಮೆರಾ ಬಳಸಿಕೊಂಡು ಸಮೀಕರಣ ಗೊಳಿಸುತ್ತದೆ. ಉತ್ತರಿಸಿದ ನಂತರ ನಿಮಗೆ ಸಮೀಕರಣದ ಹಂತಗಳನ್ನು ತಿಳಿಸುತ್ತದೆ.

PhotoMath ಕಾರ್ಯಗಳು

PhotoMath ಕಾರ್ಯಗಳು

ಅಂಕಗಣಿತದ, ಸಂಕಲನ, ವ್ಯವಕಲನ, ವಿಭಾಗ, ಮತ್ತು ಗುಣಾಕಾರಗಳಂತಹ ಲೆಕ್ಕಗಳನ್ನು ಬಿಡಿಸುತ್ತದೆ.

PhotoMath ಕಾರ್ಯಗಳು

PhotoMath ಕಾರ್ಯಗಳು

ಭಿನ್ನರಾಶಿ, ರೇಖಾತ್ಮಕ ಸಮೀಕರಣಗಳು, ಗುಣಾಕಾರದ X ಚಿಹ್ನೆಯ ಲೆಕ್ಕಗಳು, ಇಟಾಲಿಕ್ ಸಂಖ್ಯೆಯ ಲೆಕ್ಕಗಳನ್ನು ಸಹ ಇದು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಬಿಡಿಸುತ್ತದೆ.

 ಶಿಕ್ಷಕರು ಏನು ಹೇಳಿದ್ದಾರೆ.

ಶಿಕ್ಷಕರು ಏನು ಹೇಳಿದ್ದಾರೆ.

ಹಲವು ಶಾಲಾ ಶಿಕ್ಷಕರು PhotoMath ಅಪ್ಲಿಕೇಶನ್‌ ಹಲವು ರೀತಿಯಲ್ಲಿ ಸ್ಟೂಡೆಂಟ್ಸ್‌ಗಳಿಗೆ ಸಹಾಯ ಮಾಡಲಿದೆ. ಆದರೆ ಇದು ತರಬೇತಿಗಾಗಿ ಬಳಕೆಯಾಗಬೇಕು ಎಂದಿದ್ದಾರೆ.

ಬಳಸುವುದು ಹೇಗೆ

ಬಳಸುವುದು ಹೇಗೆ

PhotoMath ಅಪ್ಲಿಕೇಶನ್‌ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಅಪ್ಲಿಕೇಶನ್‌ ಓಪೆನ್‌ ಮಾಡಿ ಬಗೆಹರಿಸಬೇಕಾದ ಲೆಕ್ಕಗಳ ಮೇಲೆ ಕ್ಯಾಮೆರಾ ಹಿಡಿದು ಕ್ಯಾಪ್ಚರ್‌ ಮಾಡಬೇಕು. ನಂತರದಲ್ಲಿ ಉತ್ತರ ಪ್ರದರ್ಶನ ಆಗುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

ಉತ್ತರ ಪ್ರದರ್ಶನಗೊಂಡ ಮೇಲೆ ಒಮ್ಮೆ ಟ್ಯಾಪ್ ಮಾಡಿದರೆ ಲೆಕ್ಕದ ಸ್ಟೆಪಗಳನ್ನು ತಿಳಿಯಬಹುದು.

ಅಪ್ಲಿಕೇಶನ್‌ ಐಓಎಸ್‌ ಮತ್ತು ವಿಂಡೋಸ್‌ ಫೋನ್‌ಗಳಿಗೆ ಲಭ್ಯ.

ಅಪ್ಲಿಕೇಶನ್‌ ಐಓಎಸ್‌ ಮತ್ತು ವಿಂಡೋಸ್‌ ಫೋನ್‌ಗಳಿಗೆ ಲಭ್ಯ.

ಅಪ್ಲಿಕೇಶನ್‌ ಐಓಎಸ್‌ ಮತ್ತು ವಿಂಡೋಸ್‌ ಫೋನ್‌ಗಳಿಗೆ ಲಭ್ಯ.

ಆಂಡ್ರಾಯ್ಡ ವರ್ಸನ್‌ ಫೋನ್‌ಗಳಿಗೆ ಮುಂದಿನ ದಿನಗಳಲ್ಲಿ ಲಭ್ಯ.

ಆಂಡ್ರಾಯ್ಡ ವರ್ಸನ್‌ ಫೋನ್‌ಗಳಿಗೆ ಮುಂದಿನ ದಿನಗಳಲ್ಲಿ ಲಭ್ಯ.

ಆಂಡ್ರಾಯ್ಡ ವರ್ಸನ್‌ ಫೋನ್‌ಗಳಿಗೆ ಮುಂದಿನ ದಿನಗಳಲ್ಲಿ ಲಭ್ಯ.

ಯಾರಿಗೆ ಹೆಚ್ಚು ಉಪಯೋಗ

ಯಾರಿಗೆ ಹೆಚ್ಚು ಉಪಯೋಗ

ಗಣಿತ ಲೆಕ್ಕದಲ್ಲಿ ಹೆಚ್ಚು ವೀಕ್ ಆಗಿರುವವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವವರು ಹೆಚ್ಚು ಸದುಪಯೋಗ ಪಡೆಯಬಹುದಾಗಿದೆ.

Best Mobiles in India

English summary
PhotoMath is an app that can prove to be a teacher’s worst nightmare. It solves equations and sums in a few seconds. It has the ability to do a student’s homework provided it’s not too complicated.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X