ಬೆಂಗಳೂರಿನ 3ಡಿ ಕಂಪೆನಿಗೆ ರಾಷ್ಟ್ರಪತಿ ಭವನದ ಮನ್ನಣೆ

By Shwetha
|

ಬೆಂಗಳೂರು ಮೂಲದ ಸ್ಟಾರ್ಟಪ್ ಕ್ರೀಟರ್ ಬೋಟ್ 3ಡಿ ಪ್ರಿಂಟರ್ ಹರಿಕಾರರು ಶಿವರಾಂ ಮತ್ತು ಕೃಷ್ಣಾ ಆಗಿದ್ದಾರೆ. ಸಣ್ಣ ಮಟ್ಟಿನಲ್ಲೇ ನಿರ್ಮಿಸಿದ ಈ 3ಡಿ ಪ್ರಿಂಟರ್ ಉದ್ಯಮ ಇಂದು ಹಂತ ಹಂತವಾಗಿ ಮೇಲೇರಿ ರಾಷ್ಟ್ರಪತಿ ಭವನದಲ್ಲೇ ಮನ್ನಣೆ ದೊರಕುವಂತೆ ಮಾಡಿದೆ. ಸಾಧಿಸುವ ಛಲ ನಮ್ಮಲ್ಲಿದ್ದರೆ ಎದುರು ಬಂದೊದಗುವ ಕಷ್ಟಗಳ ಸರಮಾಲೆ ಕೂಡ ಮಂಜಿನಂತೆ ಕರಗಿ ನೀರಾಗುತ್ತದೆ ಎಂಬುದಕ್ಕೆ ಇವರಿಬ್ಬರ ಈ ಸಾಧನೆಯೇ ಸಾಕ್ಷಿಯಾಗಿದೆ.

ಓದಿರಿ: ಪ್ರಪಂಚದ ಟಾಪ್‌ 20 ಟೆಕ್ನಾಲಜಿ ಬ್ರಾಂಡ್‌ಗಳು

ಇಂದಿನ ಲೇಖನದಲ್ಲಿ ಇವರ 3ಡಿ ಪ್ರಿಂಟಿಂಗ್ ಸಾಧನೆಯ ಎಳೆ ಎಳೆಯನ್ನು ನಿಮ್ಮ ಮುಂದೆ ನಾವು ಬಿಚ್ಚಿಡುತ್ತಿದ್ದು ಇದು ಯಶಸ್ಸು ಇವರಿಗೆ ದೊರಕಿದ್ದಾದರೂ ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಬೆಂಗಳೂರಿನ ಎಸ್‌ಪಿ ರಸ್ತೆಯ ಅಲೆದಾಟ

ಬೆಂಗಳೂರಿನ ಎಸ್‌ಪಿ ರಸ್ತೆಯ ಅಲೆದಾಟ

23 ರ ಹರೆಯದ ಶಿವರಾಂಗೆ ಇಲೆಕ್ಟ್ರಾನಿಕ್ಸ್ ಪರಿಕರಗಳ ಮೇಲೆ ಹೆಚ್ಚು ಆಸಕ್ತಿ ಮತ್ತು ಪ್ರೀತಿ. ಬೆಂಗಳೂರಿನ ಎಸ್‌ಪಿ ರಸ್ತೆಯ ಅಲೆದಾಟವೇ ಇವರ ಪ್ರೀತಿಯನ್ನು ಇನ್ನಷ್ಟು ಬಲಯುತವಾಗಿಸಿತು.

ಇಲೆಕ್ಟ್ರಾನಿಕ್ ಟೆಸ್ಟಿಂಗ್ ಮಾಧ್ಯಮ

ಇಲೆಕ್ಟ್ರಾನಿಕ್ ಟೆಸ್ಟಿಂಗ್ ಮಾಧ್ಯಮ

ಶಾಲಾ ಕಲಿಕೆಯ ನಂತರ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯನ್ನಿಟ್ಟು ಇಲೆಕ್ಟ್ರಾನಿಕ್ ಟೆಸ್ಟಿಂಗ್ ಮಾಧ್ಯಮದ ಪ್ರಯೋಗಕ್ಕೆ ಇವರು ಅಣಿಯಾದರು. ಆದರೆ ಪ್ರಥಮ ಪ್ರಯತನದಲ್ಲಿ ಇವರು ಮುಗ್ಗರಿಸುವಂತಾದರೂ ಛಲ ಬಿಡದೇ ಇಟ್ಟ ಹೆಜ್ಜೆಯನ್ನು ಹಿಂದೆ ಇಡಲಿಲ್ಲ.

ಕ್ರೀಟರ್ ಬೋಟ್

ಕ್ರೀಟರ್ ಬೋಟ್

3 ಡಿ ಪ್ರಿಂಟಿಂಗ್ ಕಾರ್ಯಾಗಾರವೊಂದರಲ್ಲಿ ಶಿವರಾಂ ಕೃಷ್ಣ ಅವರನ್ನು ಭೇಟಿ ಮಾಡಿದರು. ಈ ಭೇಟಿಯ ನಂಟು ಮಹತ್ತಾದ ಯೋಜನೆಯೊಂದಕ್ಕೆ ಬುನಾದಿಯನ್ನು ಹಾಕಿಕೊಟ್ಟಿತು. ಅದುವೇ ಕ್ರೀಟರ್ ಬೋಟ್

3ಡಿ ಪ್ರಿಂಟರ್ ಟೂಲ್

3ಡಿ ಪ್ರಿಂಟರ್ ಟೂಲ್

ಈ ಯೋಜನೆಯ ಮುಖ್ಯ ಉದ್ದೇಶ ಕಡಿಮೆ ದರದಲ್ಲಿ 3ಡಿ ಪ್ರಿಂಟರ್ ಟೂಲ್ ಉತ್ಪಾದಿಸುವುದಾಗಿದೆ. ಡಿಜಿಟಲ್ ಉತ್ಪಾದಕರಿಗೂ ಈ ಟೂಲ್ ಹಾರ್ಡ್‌ವೇರ್ ಒದಗಿಸಿಕೊಡುತ್ತಿದ್ದು ಇದರಿಂದ ಉದ್ಯಮಕ್ಕೆ ಪ್ರೋತ್ಸಾಹ ಸ್ವಯಂ ಆಗಿ ಹರಿದುಬಂದಿತು.

ಇಂಟೆಲ್ ಮೆಚ್ಚಿಕೊಂಡಿತ್ತು

ಇಂಟೆಲ್ ಮೆಚ್ಚಿಕೊಂಡಿತ್ತು

ಅಹಮದಾಬಾದ್‌ನಲ್ಲಿ ನಡೆದ ಮಾರುಕಟ್ಟೆ ಉತ್ಸವದಲ್ಲಿ ಇವರ ಉತ್ಪನ್ನವನ್ನು ಇಂಟೆಲ್ ಬಹುವಾಗಿ ಮೆಚ್ಚಿಕೊಂಡಿತ್ತು. ಅಂತೆಯೇ 3ಡಿಯ ಹೊಸ ಅವೃತ್ತಿಯನ್ನು ನಿರ್ಮಿಸಿಕೊಡುವಂತೆ ಇವರನ್ನು ಕೇಳಿಕೊಂಡಿದೆ.

ಸಂಶೋಧನೆಯ ಪ್ರಿಂಟರ್

ಸಂಶೋಧನೆಯ ಪ್ರಿಂಟರ್

ಸಂಶೋಧನೆಯ ಪ್ರಿಂಟರ್ ಅನ್ನು ರಾಷ್ಟ್ರಪತಿ ಭವನದ ನವಚರ ಕಕ್ಷ್‌ನ ಮ್ಯೂಸಿಯಂನ ವೈಜ್ಞಾನಿಕ ಪ್ರದರ್ಶನದಲ್ಲಿ ಇಡಲಾಗಿತ್ತು ಮತ್ತು ಈ ಮೇಳವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದ್ದಾರೆ.

3ಡಿ ಪ್ರಿಂಟರ್‌

3ಡಿ ಪ್ರಿಂಟರ್‌

ಅಶೋಕ ಚಕ್ರ, ರಾಷ್ಟ್ರಧ್ವಜ ಮೊದಲಾದ ಮಾದರಿಗಳನ್ನು ತಯಾರಿಸಲು ಮಕ್ಕಳು ಈ 3ಡಿ ಪ್ರಿಂಟರ್‌ಗಳನ್ನು ಬಳಸುತ್ತಿದ್ದಾರೆ.

ಸಿಎನ್‌ಸಿ ರೂಟರ್ ಉತ್ಪನ್ನ

ಸಿಎನ್‌ಸಿ ರೂಟರ್ ಉತ್ಪನ್ನ

ಆರಂಭದಲ್ಲಿ ಹೆಚ್ಚಿನ ಸೋಲು ಅನುಭವಿಸಿದ್ದ ಇವರುಗಳು ನಿರಂತರ ಪ್ರಯತ್ನದ ಮೂಲಕ ರಾಷ್ಟ್ರಪತಿ ಭವನದಿಂದ ಮನ್ನಣೆಯನ್ನು ಗಳಿಸಿಕೊಂಡಿದ್ದಾರೆ. ಪ್ರಸ್ತುತ ಇವರು 29 ಪ್ರಿಂಟರ್ ಮಾದರಿಗಳನ್ನು ಮಾರಾಟ ಮಾಡಿದ್ದಾರೆ. ಸಿಎನ್‌ಸಿ ರೂಟರ್ ಉತ್ಪನ್ನ ಲಾಂಚ್ ಮಾಡುವ ತಯಾರಿಯಲ್ಲಿ ಕಂಪೆನಿ ಇದೆ.

Most Read Articles
Best Mobiles in India

English summary
As a precursor to the Independence Day celebrations, Bengaluru-based startup Creatorbot has set up a 3D printer at the Rashtrapati Bhavan to print, among other things, small models of the Ashoka Chakra and the National Flag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X