Subscribe to Gizbot

ಕೊನೆಗೆ ಆಂಡ್ರಾಯ್ಡ್ 'O'ಗೆ ಹೆಸರಿಟ್ಟ ಗೂಗಲ್: ಓರಿಯೊ ಅಲ್ಲ ಮತ್ತೀನೇನು...?

Written By:

ಆಂಡ್ರಾಯ್ಡ್ ನ್ಯಾಗಾ ಈಗಾಗಲೇ ಬಹುತೇಕ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಂಡಿದ್ದು, ಇದರ ಬೆನ್ನಲೇ ಗೂಗಲ್ ಆಂಡ್ರಾಯ್ಡ್ 'O' 8.0 ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಿದೆ. ಇಲ್ಲಿಯ ವರೆಗೂ ಆಂಡ್ರಾಯ್ಡ್ 'O' 8.0 ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಹೇಗೂ ಗೂಗಲ್ ಸಿಹಿ ತಿಂಡಿಯ ಹೆಸರೊಂದನ್ನೇ ಇಡಲಿದೆ ಎನ್ನುವದು ಎಲ್ಲರಿಗೂ ತಿಳಿದಿತ್ತು.

ಕೊನೆಗೆ ಆಂಡ್ರಾಯ್ಡ್ 'O'ಗೆ ಹೆಸರಿಟ್ಟ ಗೂಗಲ್: ಓರಿಯೊ ಅಲ್ಲ ಮತ್ತೀನೇನು...?

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಪ್ರತಿ ನೂತನ ಆವೃತ್ತಿಯ ಆಂಡ್ರಾಯ್ಡ್ ಗೆ ಇಂಗ್ಲಿಷ್ ವರ್ಣಮಾಲೆಯ ಮುಂದಿನ ಅಕ್ಷರವನ್ನು ನೀಡಲಿದೆ. ಅಲ್ಲದೇ ಆ ಅಕ್ಷರದಿಂದ ಶುರುವಾಗುವ ಸಿಹಿ ತಿಂಡಿಯ ಹೆಸರನ್ನು ನೂತನ ಆಂಡ್ರಾಯ್ಡ್ ಆವೃತ್ತಿಗೆ ನೀಡುವ ಪರಿಪಾಠವನ್ನು ಬೆಳಸಿಕೊಂಡು ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಟ್‌ಮಿಲ್ ಕುಕ್ಕಿ.!!!

ಓಟ್‌ಮಿಲ್ ಕುಕ್ಕಿ.!!!

ಬಹುತೇಕರು ಆಂಡ್ರಾಯ್ಡ್ 'O' ಗೆ ಓರಿಯೊ ಬಿಸ್ಕೆಟ್ ಹೆಸರನ್ನು ಗೂಗಲ್ ಇಡಲಿದೆ ಎಂದು ತಿಳಿದಿದ್ದರು, ಆದರೆ ಸದ್ಯ ದೊರೆತಿರುವ ಮಾಹಿತಿಯೊಂದರ ಪ್ರಕಾರ ಆಂಡ್ರಾಯ್ಡ್ 'O' 8.0 ಗೆ ಓಟ್‌ಮಿಲ್ ಕುಕ್ಕಿ ಎಂದು ನಾಮಕರಣ ಮಾಡಲಿದೆ ಎನ್ನಲಾಗಿದೆ.

ಅಧಿಕೃತ ಘೋಷಣೆ ಬಾಕಿ:

ಅಧಿಕೃತ ಘೋಷಣೆ ಬಾಕಿ:

ಈಗಾಗಲೇ ಓಟ್‌ಮಿಲ್ ಕುಕ್ಕಿ ಎನ್ನುವ ಹೆಸರನ್ನು ಗೂಗಲ್ ಫೈನಲ್ ಮಾಡಿದ್ದು ಅಧಿಕೃತ ಘೋಷಣೆಯನ್ನು ಮಾಡಬೇಕಾಗಿದೆ. ಈಗಾಗಲೇ ಈ ಆಂಡ್ರಾಯ್ಡ್ ಆವೃತ್ತಿಯನ್ನು ಗೂಗಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತಿದೆ.

ವರ್ಷದ ಅಂತ್ಯಕ್ಕೆ ಬಿಡುಗಡೆ

ವರ್ಷದ ಅಂತ್ಯಕ್ಕೆ ಬಿಡುಗಡೆ

ಈ ವರ್ಷದ ಅಂತ್ಯದ ವೇಳೆಗೆ ಆಂಡ್ರಾಯ್ಡ್ 'O' 8.0 ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಆಂಡ್ರಾಯ್ಡ್ 'O' 8.0 ಆವೃತ್ತಿಯಲ್ಲಿ ಗೂಗಲ್ ಹೊಸ ಹೊಸ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲು ಮಂದಾಗಿದ್ದು, ಕೆಲವು ಆಯ್ಕೆಗಳನ್ನು ಆಪಲ್ ನಿಂದಲೂ ಪಡೆದುಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Oatmeal Cookie could be the official name for Android 8.0 according to some recently discovered references in the source code. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot