Subscribe to Gizbot

ಗೂಗಲ್ ಜೊತೆ ಸೇರಿ ಅಪ್‌ಡೇಟ್ ಆಗಿದೆ ಓಲಾ!! ಏನೇನು ಹೊಸತು?

Written By:

ದೇಶದಲ್ಲಿ ಟ್ಯಾಕ್ಸಿ ಸೇವೆ ನೀಡುತ್ತಿರುವ ನಂಬರ್ ಒನ್ ಆಪ್ ಆಧಾರಿತ ಕಂಪೆನಿ ಎಂದು ಹೆಸರು ಪಡೆದಿರುವ ಓಲಾ ಇದೀಗ ತನ್ನ ಆಪ್ ಅನ್ನು ಅಪ್‌ಡೇಟ್ ಮಾಡಿಕೊಂಡಿದೆ.!! ಗೂಗಲ್ ಮ್ಯಾಪ್‌ ಕಂಪೆನಿಯ ಸಹಯೋಗದಲ್ಲಿ ಈ ಹೊಸ ಆಪ್ ವಿನ್ಯಾಸ ಮಾಡಲಾಗಿದ್ದು ನೂತನವಾಗಿ ಅಪ್‌ಡೇಟ್‌ ಆಗಿರುವ ಆಪ್ ಹಲವು ವಿಶೇಷತೆಗಳನ್ನು ಹೊಂದಿದೆ.!!

ಕಡಿಮೆ ಪ್ರಮಾಣದ ಡೇಟಾ ಮತ್ತು ಸರಳ ಸ್ವರೂಪದ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕೂಡ ಈ ಆಪ್ ಉತ್ತಮ ಅನುಭವ ನೀಡಲಿದೆ ಎಂದು ಓಲಾ ಹೇಳಿದ್ದು, ಚಾಲಕರು ಮತ್ತು ಗ್ರಾಹಕರ ಬಳಕೆಗೆ ಸರಳವಾಗಿ ಬಳಸುವಂತೆ ವಿನ್ಯಾಸ ಮಾಡಲಾಗಿದೆ. ಇನ್ನು ಬಳಕೆದಾರರಿಗೆ ಸ್ನೇಹಿಯಾದ ಮೊಬೈಲ್‌ ಅಂತರ್ಜಾಲ ತಾಣ (Progressive Web App) ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.!!

ಗೂಗಲ್ ಜೊತೆ ಸೇರಿ ಅಪ್‌ಡೇಟ್ ಆಗಿದೆ ಓಲಾ!! ಏನೇನು ಹೊಸತು?

ಇಷ್ಟೇ ಅಲ್ಲದೇ ಈ ಆಪ್‌ ಅನ್ನು ಪಿಡಬ್ಲ್ಯುಎ ತಂತ್ರಜ್ಞಾನ ಆಧರಿಸಿ ತಯಾರಿಸಲಾಗಿದೆ. ಹೊಸದಾಗಿ ಪರಿಚಯಿಸಿರುವ ಪಿಡಬ್ಲ್ಯುಎ ತಂತ್ರಜ್ಞಾನದಿಂದ ಆಪ್ ಸೌಲಭ್ಯವು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಲು ನೆರವಾಗಲಿದೆ ಎಂದು ಓಲಾ ಕಂಪೆನಿಯ ಸಹ ಸಂಸ್ಥಾಪಕರಾದ ಅಂಕಿತ್ ಭಾಟಿಯಾ ತಿಳಿಸಿದ್ದಾರೆ.

ಗೂಗಲ್ ಜೊತೆ ಸೇರಿ ಅಪ್‌ಡೇಟ್ ಆಗಿದೆ ಓಲಾ!! ಏನೇನು ಹೊಸತು?

ಇಂಟರ್‌ನೆಟ್‌ ಸಂಪರ್ಕ ಕಡಿಮೆ ಇರುವ ಸ್ಥಳಗಳಲ್ಲಿಯೂ ಈ ಆಪ್ ಅತ್ಯುತ್ತಮ ಕಾರ್ಯನಿರ್ವಹಣೆ ನೀಡಲಿದ್ದು, ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬಳಸುವ ಗ್ರಾಹಕರಿಗಾಗಿಯೇ ಈ ಆಪ್‌ ಅನ್ನು ವಿಶೇಷವಾಗಿ ರೂಪಿಸಲಾಗಿದೆ.!! ಹಾಗಾಗಿ, ಹೊಸ ಅಪ್‌ಡೇಟ್ ಓಲಾ ಆಪ್ ಸೌಲಭ್ಯ ಹೆಚ್ಚು ಉಪಯುಕ್ತವಾಗಿರಲಿದೆ.!!

Read more about:
English summary
Cab aggregator Ola announced the launch of its “Progressive Web App”. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot