ಅಮೆಜಾನ್-ಫ್ಲಿಪ್ ಕಾರ್ಟಿಗೆ ಸೆಡ್ಡು ಹೊಡೆದ ಪೇಟಿಎಂ ಮಾಲ್

Written By: Lekhaka

ಗೂಗಲ್ ಪ್ಲೇ ಸ್ಟೋರ್ ಬಿಡುಗಡೆ ಮಾಡಿರುವ ಬೆಸ್ಟ್ ಆಫ್ 2017 ಆಪ್ ಗಳಲ್ಲಿ ರೀಟೆಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಏಕೈಕ ಆಪ್ ಎಂದರೆ ಪೇಟಿಎಂ ಮಾಲ್ ಆಗಿದ್ದು, ಇದು ಭಾರತದಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆದ ಮೊದಲ ಇ-ರೀಟೆಲ್ ಆಪ್ ಆಗಿದೆ ಎನ್ನಲಾಗಿದೆ.

ಅಮೆಜಾನ್-ಫ್ಲಿಪ್ ಕಾರ್ಟಿಗೆ ಸೆಡ್ಡು ಹೊಡೆದ ಪೇಟಿಎಂ ಮಾಲ್

ಇದೇ ಫೆಬ್ರವರಿಯಲ್ಲಿ ಪೇಟಿಎಂ ಮಾಲ್ ಆಪ್ ಅನ್ನು ಪೇಟಿಎಂ ಲಾಂಚ್ ಮಾಡಿತ್ತು ಎನ್ನಲಾಗಿದೆ. ದಿನೇ ದಿನೇ ಈ ಆಪ್ ಮೂಲಕ ಹೆಚ್ಚಿನ ಸೇಲ್ ಗಳು ಡಿಸ್ಕೌಂಟ್ ಗಳು ದೊರೆಯುತ್ತಿರುವ ಹಿನ್ನಲೆಯಲ್ಲಿ ಈ ಆಪ್ ಬಳಕೆ ಹೆಚ್ಚಾಗುತ್ತಿದೆ ಎನ್ನಲಾಗಿದ್ದು, ಸ್ಮಾರ್ಟ್ ಫೋನ್ ಖರೀದಿಗೆ ಈ ಆಪ್ ಉತ್ತಮ ವೇದಿಕೆಯಾಗಿದೆ.

ಈ ಆಪ್ ಮೂಲಕ ಮೊಬೈಲ್ ಖರೀದಿ ಮಾಡಿದರೆ ಮೊಬೈಲ್ ಪ್ರೋಟೆಕ್ಷನ್ ಪ್ಲಾನ್ ಅನ್ನು ನೀಡಲಿದ್ದು, ಇದರಿಂದಾಗಿ ಹೆಚ್ಚಿನ ಗ್ರಾಹಕರು ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಪ್ರೋಟೆಷನ್ ಅನ್ನು ಒಂದು ವರ್ಷಗಳ ಕಾಲದ ವರೆಗೆ ನೀಡಲಿದ್ದು, ಸ್ಕ್ರಿನ್ ಡ್ಯಾಮೆಜ್, ಲಿಕ್ವೀಡ್ ಡ್ಯಾಮೆಜ್, ಕಳ್ಳತನವಾದರೆ ಉಪಯೋಗವಾಗುಂತೆ ಇನಶ್ಯೂರೆನ್ಸ್ ನೀಡಲಿದೆ.

ಇದಲ್ಲದೇ ದೇಶದಲ್ಲಿ ಲಭ್ಯವಿರುವ ಎಲ್ಲಾ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ. ಆಪಲ್, ಶಿಯೋಮಿ, ಮೊಟೊರೋಲಾ. ವಿವೋ, ಒಪ್ಪೋ. ಮತ್ತು ವಿವಿಧ ಬ್ರಾಂಡ್ ಫೋನ್ ಗಳು ಇಲ್ಲಿ ಲಭ್ಯವಿರಲಿದೆ. ಈ ಪೇಟಿಎಂ ಮಾಲ್ ಸೇವೆಯೂ ಇ-ರೀಟೆಲ್ ನಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಿದೆ.

ಬಜೆಟ್‌ನಲ್ಲಿ ಬೊಂಬಾಟ್ ಆಪರ್ ಕೊಟ್ಟ BSNL: ಜಿಯೋಗೂ ಸೆಡ್ಡು

ಪೇಟಿಎಂ ಮಾಲ್ ಉತ್ತಮವಾದ ಸೇವೆಗಳನ್ನು ನೀಡುವ ಸಲುವಾಗಿಯೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಆಪಲ್, ಸ್ಯಾಮ್ ಸಂಗ್, ಎಲ್ ಜಿ, ಒಪ್ಪೊ, ಸೋನಿ, ಹೆಚ್ ಪಿ, ಲಿನೋವೊ, ಜೆಬಿಎಲ್, ಪಿಲಿಪ್ಸ್, ಪೂಮಾ, ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಅಲ್ಲದೇ ದೇಶ ಸುಮಾರು 17,000 ಪಿನ್ ಕೋಡ್ ಗಳಿಗೆ ಸೇವೆಯನ್ನು ಪೇಟಿಎಂ ಮಾಲ್ ನೀಡುತ್ತಿದೆ ಎನ್ನಲಾಗಿದೆ. ಅಲ್ಲದೇ ಮುಂದಿನ ದಿನದಲ್ಲಿ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲಿದೆ.Read more about:
English summary
The mall has over 17 fulfillment centers across the country to offer consumers an efficient online shopping experience.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot