'ಫೋನ್‌ಪೇ ಗೋಲ್ಡ್‌’ ಸೇವೆಗೆ ಗ್ರಾಹಕರು ಫಿದಾ!..ಒಂದು ಖಾತೆ ತೆರೆಯಲು ಹಲವು ಕಾರಣಗಳು!!

Written By:

ಡಿಜಿಟಲ್ ಹಣ ಪಾವತಿಯಲ್ಲಿ ಹೆಸರಾಗುತ್ತಿರುವ ಫ್ಲಿಪ್‌ಕಾರ್ಟ್ ಒಡೆತನದ ಫೋನ್‌ಪೇ 'ಫೋನ್‌ಪೇ ಗೋಲ್ಡ್‌' ಎಂಬ ಹೊಸ ಸೇವೆಯನ್ನು ಆರಂಭಿಸಿದೆ.!! ಆಪ್‌ನಲ್ಲಿ ಚಿನ್ನದ ಖಾತೆ ತೆರೆದು ಫೋನ್‌ಪೇ ಆಪ್‌ ಮೂಲಕವೇ ಭೌತಿಕ ರೂಪದಲ್ಲಿ ಚಿನ್ನ ಖರೀದಿ ಮತ್ತು ಮಾರಾಟ ಮಾಡಬಹುದಾದ ಆಯ್ಕೆ ಇನ್ನು ಫೋನ್‌ಪೇ ಗ್ರಾಹಕರಿಗಿನ್ನು ಸಿಗಲಿದೆ.!!

 'ಫೋನ್‌ಪೇ ಗೋಲ್ಡ್‌’ ಸೇವೆಗೆ ಗ್ರಾಹಕರು ಫಿದಾ!..ಒಂದು ಖಾತೆ ತೆರೆಯಲು ಹಲವು ಕಾರಣ!

ಆನ್‌ಲೈನ್‌ನಲ್ಲಿ ಚಿನ್ನ ಮಾರಾಟ ಮಾಡುವ ಪೇಟಿಎಂ ಯೋಜನೆ ನಂತರ ಡಿಜಿಟಲ್ ಹಣ ಪಾವತಿ ಸೇವೆ ನೀಡುವ ಫೋನ್‌ಪೇ ಚಿನ್ನದ ಖಾತೆ ತೆರೆಯುವ ಯೋಜನೆ ತಂದಿದೆ. ಚಿನ್ನದ ಮೇಲೆ ಉಳಿತಾಯ ಮಾಡುವ ಗ್ರಾಹಕರಿಗೆ ಈ ಯೋಜನೆ ಅನಕೂಲವಾಗಲಿದ್ದು, ಹಾಗಾದರೆ. ಫೋನ್‌ಪೇ ಆಪ್‌ನಲ್ಲಿ ಚಿನ್ನದ ಖಾತೆ ತೆರೆಯುವುದು ಹೇಗೆ? ಇದರಿಂದ ಗ್ರಾಹಕರಿಗೆ ಏನು ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಫೋನ್‌ಪೇ ಗೋಲ್ಡ್‌!?

ಏನಿದು ಫೋನ್‌ಪೇ ಗೋಲ್ಡ್‌!?

ಭೌತಿಕ ರೂಪದಲ್ಲಿ ಚಿನ್ನ ಖರೀದಿ ಮತ್ತು ಮಾರಾಟ ಮಾಡಬಹುದಾದ ಆಯ್ಕೆಯನ್ನು ಹೊಂದಿರವ ಸೇವೆ ಫೋನ್‌ಪೇ ಗೋಲ್ಡ್‌ ಸೇವೆಯಲ್ಲಿ ಚಿನ್ನದ ಖಾತೆ ತೆರೆದು 24 ಕ್ಯಾರೆಟ್ ಚಿನ್ನದ ಪ್ರತಿ ಕ್ಷಣದ ಬೆಲೆಯನ್ನು ಪರಿಶೀಲಿಸಿಬಹುದಾದ ಹಾಗೂ ಕಡಿಮೆ ಹಣದಲ್ಲಿಯೂ ಚಿನ್ನವನ್ನು ಖರೀದಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.!!

1 ರೂಪಾಯಿಗೂ ಖರೀದಿಸಿ ಚಿನ್ನ!!

1 ರೂಪಾಯಿಗೂ ಖರೀದಿಸಿ ಚಿನ್ನ!!

ಆಪ್‌ ಮೂಲಕ ಚಿನ್ನದ ಪ್ರತಿ ಕ್ಷಣದ ಬೆಲೆಯನ್ನು ತಿಳಿಯುತ್ತಾ, ಚೀನಿವಾರ ಪೇಟೆಯ ದರದಲ್ಲಿ ಚಿನ್ನ ಖರೀದಿಸಬಹುದಾದ ಆಯ್ಕೆಯನ್ನು ಈ ಸೇವೆಯಲ್ಲಿ ನೀಡಲಾಗಿದೆ. ಕನಿಷ್ಠ 1 ರೂಪಾಯಿಗೂ ಇಲ್ಲಿ ಚಿನ್ನ ಖರೀದಿಸಬಹುದು ಎಂದು ಸಂಸ್ಥೆಯ ಬ್ಯಾಂಕ್‌ ರಿಲೇಷನ್ ವಿಭಾಗದ ಮುಖ್ಯಸ್ಥ ಹೇಮಂತ್‌ ಗಾಲಾ ಅವರು ಮಾಹಿತಿ ನೀಡಿದ್ದಾರೆ.!!

ಮರೆಮಾಚಿದ ಶುಲ್ಕ ಇಲ್ಲ.!!

ಮರೆಮಾಚಿದ ಶುಲ್ಕ ಇಲ್ಲ.!!

ಫೋನ್‌ಪೇ ಗೋಲ್ಡ್‌ ಯೋಜನೆಯಲ್ಲಿ ಚಿನ್ನವನ್ನು ರೂಪಾಯಿ ಅಥವಾ ಗ್ರಾಂಗಳಲ್ಲಿ ನಮೂದಿಸಬಹುದು ಮತ್ತು ಚಿನ್ನದ ಖರೀದಿಗೆ ಯಾವುದೇ ಮರೆಮಾಚಿದ ಶುಲ್ಕ ಇರುವುದಿಲ್ಲ ಎಂದು ಹೇಮಂತ್‌ ಗಾಲಾ ಅವರು ತಿಳಿಸಿದರು. ಇದರಿಂದ ಗ್ರಾಹಕರಿಗೆ ನಂಬಿಕಸ್ಥ ಪಾಲುದಾರ ಸಿಕ್ಕಿದಂತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.!!

ಮನೆ ಬಾಗಿಲಿಗೆ ಚಿನ್ನ.!!

ಮನೆ ಬಾಗಿಲಿಗೆ ಚಿನ್ನ.!!

ಫೋನ್‌ಪೇ ಮೂಲಕ ಖರೀದಿಸಿದ ಚಿನ್ನವನ್ನು ಗಟ್ಟಿ ರೂಪದಲ್ಲಿ ಬ್ರಿಂಕ್ಸ್ ವಾಲ್ಟ್‌ನಲ್ಲಿ ಇಡುವುದಾಗಿ ಫೋನ್ ಪೇ ತಿಳಿಸಿದೆ. ಒಂದು ವೇಳೆ ಗ್ರಾಹಕರಿಗೆ ಭೌತಿಕ ರೂಪದಲ್ಲಿ ಚಿನ್ನ ಬೇಕಿದ್ದರೆ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಆದರೆ ಅದಕ್ಕೆ ಕನಿಷ್ಠ ಶುಲ್ಕ ನೀಡಬೇಕು ಎಂದು ಫೋನ್ ಪೇ ಅಧಿಕಾರಿಗಳು ಹೇಳಿದರು.!!

How to Sharing a Mobile Data Connection with Your PC (KANNADA)
ಚಿನ್ನದ ಸುರಕ್ಷತೆ!!

ಚಿನ್ನದ ಸುರಕ್ಷತೆ!!

ಚಿನ್ನ ಖರೀದಿಸಿದ ಅಥವಾ ಮಾರಾಟ ಮಾಡಿದ ತಕ್ಷಣವೇ ಅದರ ಮಾಹಿತಿ ಬರುತ್ತದೆ. ಖಾತೆಯಲ್ಲಿ ಎಷ್ಟು ಚಿನ್ನ ಇದೆ ಎನ್ನುವುದನ್ನೂ ಆಪ್‌ನಲ್ಲಿರುವ ಬ್ರಿಂಕ್ಸ್ ಲಾಕರ್‌ನಲ್ಲಿ ತಿಳಿದುಕೊಳ್ಳಬಹುದು. ಇನ್ನು ಚಿನ್ನವನ್ನು ಮಾರಾಟ ಮಾಡಿದ ಹಣವು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ.

ಓದಿರಿ:ಏರ್‌ಟೆಲ್‌ಗೆ ಸತತ 7ನೇ ಸಾರಿಯೂ ಭಾರೀ ನಷ್ಟ!..ಟ್ರಾಯ್ ಮತ್ತು ಜಿಯೋಗೆ ಖಡಕ್ ವಾರ್ನಿಂಗ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart-owned digital payments platform PhonePe has forged a partnership with SafeGold to launch a digital gold product.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot