ಐಫೋನ್ ಬಳಕೆದಾರರಿಗೆ ಪ್ರಿಸ್ಮಾ ಆಫ್‌ಲೈನ್‌ನಲ್ಲೂ ಲಭ್ಯ

By Shwetha
|

ಐಓಎಸ್‌ನಲ್ಲಿ ಪ್ರಿಸ್ಮಾ ಹೊಸ ಅಪ್‌ಡೇಟ್ ಎಂದೆನಿಸಿದ್ದು, ಆಫ್‌ಲೈನ್‌ನಲ್ಲೂ ಇನ್ನು ಫೋಟೋ ಎಡಿಟ್ ಮಾಡಬಹುದಾದ ಸೌಲಭ್ಯವನ್ನು ಐಫೋನ್ ಬಳಕೆದಾರರು ಪಡೆದುಕೊಳ್ಳಲಿದ್ದಾರೆ. ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರು ಈ ಫೋಟೋ ಎಡಿಟಿಂಗ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಫೋಟೋಗಳನ್ನು ಚಿತ್ರಕಲೆಯ ರೂಪಕ್ಕೆ ಪರಿವರ್ತಿಸಿಕೊಳ್ಳುವ ಅನುಕೂಲವನ್ನು ಈ ಅಪ್ಲಿಕೇಶನ್ ಬಳಕೆದಾರರಿಗೆ ಮಾಡಿಕೊಟ್ಟಿತ್ತು.

ಐಫೋನ್ ಬಳಕೆದಾರರಿಗೆ ಪ್ರಿಸ್ಮಾ ಆಫ್‌ಲೈನ್‌ನಲ್ಲೂ ಲಭ್ಯ

ಆದರೆ ಈ ಅಪ್ಲಿಕೇಶನ್‌ನಲ್ಲಿದ್ದ ಸಮಸ್ಯೆ ಏನೆಂದರೆ ಇದರಲ್ಲಿದ್ದ ಫಿಲ್ಟರ್ ಹೆಚ್ಚುವರಿ ಸಮಯವನ್ನು ಲೋಡ್ ಆಗಲು ತೆಗೆದುಕೊಳ್ಳುತ್ತಿದ್ದುದಾಗಿದೆ. ಅಂತೆಯೇ ಹೆಚ್ಚಿನ ಬಳಕೆದಾರರು ಪ್ರಿಸ್ಮಾವನ್ನು ಬಳಸುತ್ತಿದ್ದಾರೆ, ಸ್ವಲ್ಪ ಸಮಯದ ನಂತರ ಅಪ್ಲಿಕೇಶನ್ ಅನ್ನು ಬಳಸಿ ಎಂಬ ಸಂದೇಶವನ್ನು ಬಳಕೆದಾರರು ಪಡೆದುಕೊಳ್ಳುತ್ತಿದ್ದರು.

ಐಫೋನ್ ಬಳಕೆದಾರರಿಗೆ ಪ್ರಿಸ್ಮಾ ಆಫ್‌ಲೈನ್‌ನಲ್ಲೂ ಲಭ್ಯ

ಆದರೆ ಇದೀಗ ಪ್ರಿಸ್ಮಾ ಆಫ್‌ಲೈನ್‌ ಮೋಡ್‌ನಲ್ಲಿ ಬಂದಿದ್ದು, ಕನಿಷ್ಟ ಪಕ್ಷ ಐಫೋನ್ ಬಳಕೆದಾರರು ತಾವು ಆರಿಸಿದ ಫಿಲ್ಟರ್ ಮೂಲಕ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಅಪ್ಲಿಕೇಶನ್ ಇನ್ನೂ ಕೂಡ ನಿಧಾನಗತಿಯಲ್ಲೇ ಇದ್ದರೂ ಇಂಟರ್ನೆಟ್ ಅನ್ನು ಅವಲಂಬಿಸಿದೇ ಈ ಅಪ್ಲಿಕೇಶನ್ ಬಳಸಿಕೊಳ್ಳಬಹುದಾಗಿದೆ. ಪ್ರಿಸ್ಮಾ ವೀಡಿಯೊ ಫಿಲ್ಟರ್ ಅನ್ನು ಕೂಡ ತರುವ ಪ್ರಯತ್ನದಲ್ಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆಂಡ್ರಾಯ್ಡ್ ಆವೃತ್ತಿ ಕೂಡ ಪ್ರಿಸ್ಮಾದ ವೀಡಿಯೊ ಫಿಲ್ಟರ್ ವ್ಯವಸ್ಥೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಐಫೋನ್ ಬಳಕೆದಾರರಿಗೆ ಪ್ರಿಸ್ಮಾ ಆಫ್‌ಲೈನ್‌ನಲ್ಲೂ ಲಭ್ಯ

ಸಾಮಾನ್ಯ ಜನರು ಮಾತ್ರವಲ್ಲದೆ ಹಾಲಿವುಡ್ ಮತ್ತು ಬಾಲಿವುಡ್ ಸ್ಟಾರ್‌ಗಳು ಕೂಡ ಪ್ರಿಸ್ಮಾ ಅಪ್ಲಿಕೇಶನ್‌ನಲ್ಲಿ ತಮ್ಮ ಫೋಟೋಗಳನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ. ಅಪ್ಲಿಕೇಶನ್ ಇತ್ತೀಚೆಗೆ ತಾನೇ ಸ್ಪಿಲ್ಟ್ ಸ್ಕ್ರೀನ್ ಮತ್ತು ಕ್ರಾಪಿಂಗ್ ಫೀಚರ್‌ಗಳನ್ನು ಅಳವಡಿಸಿದೆ. ಇದು ನಿಧಾನವಾಗಿದೆ ಎಂಬುದಾಗಿ ಅಪ್ಲಿಕೇಶನ್ ಬಳಕೆದಾರರು ದೂರಿತ್ತಿದ್ದಾರೆ.

Best Mobiles in India

English summary
Prisma on iOS has a new update, which will make it possible to edit photos even offline.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X