Subscribe to Gizbot

ಮತ್ತೊಮ್ಮೆ ಏರ್‌ಟೆಲ್ ಹಿಂದಿಕ್ಕಿದ ಜಿಯೋಗೆ ಪ್ರಶಸ್ತಿಯ ಗರಿ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸ ಪ್ರಶಸ್ತಿಯನ್ನು ಪಡೆದುಕೊಂಡಿದೆ. 'ಗ್ಲೋಬಲ್ ಮೊಬೈಲ್ ಅವಾರ್ಡ್​ 2018' ನಲ್ಲಿ 'ಬೆಸ್ಟ್​ ಮೊಬೈಲ್​ ವಿಡಿಯೋ ಕಂಟೆಂಟ್' ಪ್ರಶಸ್ತಿಯನ್ನು ಜಿಯೋ TV ಆಪ್ ಪಡೆದುಕೊಂಡಿದೆ ಎನ್ನಲಾಗಿದೆ.

ಮತ್ತೊಮ್ಮೆ ಏರ್‌ಟೆಲ್ ಹಿಂದಿಕ್ಕಿದ ಜಿಯೋಗೆ ಪ್ರಶಸ್ತಿಯ ಗರಿ..!

ಟೆಲಿಕಾಂ ವಲಯದಲ್ಲಿ ಜಿಯೋದೊಂದಿಗೆ ಸ್ಪರ್ಧೆಗೆ ನಿಂತಿರುವ ಏರ್‌ಟೆಲ್, ಈ ಪ್ರಶಸ್ತಿ ಸ್ಪರ್ಧೆಯಲ್ಲಿ ಜಿಯೋದೊಂದಿಗೆ ಸ್ಪರ್ಧಿಸಿತ್ತು ಎನ್ನಲಾಗಿದೆ. Airtel TV, Hot Video ಹಾಗೂ Bioscope Live TV ಆಪ್‌ಗಳು ಜಿಯೋದೊಂದಿಗೆ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದವು. ಆದರೆ ಇವುಗಳನ್ನು ಮಣಿಸಿ, ಜಿಯೋ TV ಆಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈಗಾಗಲೇ ಆಪ್ ಮತ್ತು ವೆಬ್ ಸೇವೆಯನ್ನು ನೀಡುತ್ತಿರುವ ಜಿಯೋ TV ಆಪ್ ಸುಮಾರು 500ಕ್ಕೂ ಹೆಚ್ಚು ಟಿವಿ ಚಾನಲ್‌ಗಳನ್ನು ಪ್ರಸಾರ ಮಾಡುತ್ತಿದೆ ಎನ್ನಲಾಗಿದೆ. ದೇಶದಲ್ಲಿರುವ ಎಲ್ಲಾ ಜಿಯೋ ಬಳಕೆದಾರರು ಈ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ದೊರೆಯುತ್ತಿದೆ.

ಮತ್ತೊಮ್ಮೆ ಏರ್‌ಟೆಲ್ ಹಿಂದಿಕ್ಕಿದ ಜಿಯೋಗೆ ಪ್ರಶಸ್ತಿಯ ಗರಿ..!

ದೇಶದ ಸುಮಾರು ಅರ್ಧದಷ್ಟು ಜನರು ಜಿಯೋ TV ಆಪ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದಲ್ಲದೇ ಜಿಯೋ TV ಆಪ್ ಬಳಕೆ ಮಾಡಿಕೊಳ್ಳುವವರಿಗೆ ಜಿಯೋ ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡುತ್ತಿದೆ ಎನ್ನಲಾಗಿದೆ. 10GB ಡೇಟಾವನ್ನು ಜಿಯೋ TV ಆಪ್ ಬಳಕೆದಾರರಿಗೆ ನೀಡುತ್ತಿದೆ.

English summary
Reliance JioTV Crowned the Best Mobile Video Content Award. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot