Subscribe to Gizbot

ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಕುರಿತ ಮತ್ತೊಂದು ಮಾಹಿತಿ ಲೀಕ್...!

Posted By: Lekhaka

ಮಾರುಕಟ್ಟೆಗೆ ಶೀಘ್ರವೇ ಲಾಂಚ್ ಆಗಲಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಕುರಿತು ದಿನಕ್ಕೊಂದು ರೂಮರ್ ಗಳು ಕೇಳಿ ಬರುತ್ತಿದೆ. ಇದೇ ತಿಂಗಳ ಅಂತ್ಯಕ್ಕೆ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಸ್ಯಾಮ್ ಸಂಗ್ ಈ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಮೂಲಗಳ ಪ್ರಕಾರ ಈ ಸ್ಮಾರ್ಟ್ ಫೋನ್ ಬೆಲೆಯೂ ಈ ಹಿಂದಿನ ಫೋನ್ ಗಿಂತಲೂ ಕಡಿಮೆ ಇರಲಿದೆ ಎನ್ನಲಾಗಿದೆ.


ಈ ಹಿಂದೆ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು, ಆದರೆ ಸದ್ಯ ಮತ್ತೊಂದು ರೂಮರ್ ಪ್ರಕಾರ 64GB ಆವೃತ್ತಿಯೂ ಕೇವಲ ರೂ.73000ಕ್ಕೆ ದೊರೆಯುತ್ತಿದ್ದು, ಗ್ಯಾಲೆಕ್ಸಿ S9 ಪ್ಲಸ್ ರೂ.81000ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.

ಈ ಬೆಲೆಗಳು ಯೂರೋಪ್ ಮಾರುಕಟ್ಟೆಯಲ್ಲಿ ದೊರೆಯುವ ಸ್ಮಾರ್ಟ್ ಫೋನ್ ನದ್ದಾಗಿದ್ದು, ಅಮೆರಿಕಾದ ಮಾರುಕಟ್ಟೆಯಲ್ಲಿ ಇನ್ನು ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೇ ಭಾರತೀಯ ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ಬೆಲೆಗಳು ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ. ಬಿಡುಗಡೆಯಾದ ನಂತರದಲ್ಲಿ ನೋಡಬೇಕು.

ಇನ್ನೊಂದು ಮೂಲಕಗಳ ಪ್ರಕಾರ, ಗ್ಯಾಲೆಕ್ಸಿ S9 ರೂ.57000ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಣ ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪನಿಗಳು ಉತ್ತಮ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಬೆಲೆಗಳನ್ನು ಕಡಿಮೆ ಮಾಡಲಿದೆ.

ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಬೆಸ್ಟ್ ಆಂಡ್ರಾಯ್ಡ್ ಫೋನ್ ಗಳಾಗಲಿದ್ದು, ಐಫೋನ್ ಕೊಳ್ಳಲು ಅಭಿಮಾನಿಗಳು ಮುಗಿ ಬಿಳುವಂತೆ, ಆಂಡ್ರಾಯ್ಡ್ ಅಭಿಮಾನಿಗಳಿಗೆ ಈ ಫೋನ್ ಗಳು ಹೆಚ್ಚು ಪ್ರಿಯವಾಗಿವೆ. ಈ ಹಿನ್ನಲೆಯಲ್ಲಿ ಗ್ಯಾಲೆಕ್ಸಿ S9 ಕುರಿತ ಕುತೂಹಲ ಹೆಚ್ಚಾಗಿದೆ.

English summary
Samsung Galaxy S9, S9+ pricing leak once again. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot