ಕೂಡಲೇ 'ಸರಾಹ್ ಆಪ್' ಡಿಲೀಟ್ ಮಾಡಿ..ರಹಸ್ಯವಲ್ಲ ಈ ಆಪ್‌!!

Written By:

ಯಾರಿಗೆ ಬೇಕಾದರೂ ಅನಾಮಿಕ ಸಂದೇಶಗಳನ್ನು ಕಳುಹಿಸಬಹುದು ಎಂಬ ಕಾರಣದಿಂದಲೇ ಹೆಸರಾಗಿರುವ ಸರಾಹ್ ಆಪ್ ಬಳಕೆ ಅಷ್ಟೇನು ಒಳ್ಳೆಯದಲ್ಲ ಎನ್ನುವ ಅಭಿಪ್ರಾಯಕ್ಕೆ ಆಪ್‌ಲೋಕ ಬಂದಿದೆ. ಸರಾಹ್ ಆಪ್ ಮೂಲಕ ಜನರು ಏನು ಭಯಸಿಲ್ಲವೂ ಆ ಎಲ್ಲಾ ಕೆಲಸವೂ ಆಗುತ್ತಿದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ಇನ್ನು ಬಿಷಪ್ ಫೋಕ್ಸ್ ಎಂಬ ಐಟಿ ಸೆಕ್ಯುರಿಟಿ ಸಂಸ್ಥೆಯ ಹಿರಿಯ ಭದ್ರತಾ ವಿಶ್ಲೇಷಕರಾದ ಜಾಚರಿ ಜೂಲಿಯನ್ ಎಂಬವರು ನಮಗೆ ಶಾಕ್ ಆಗುವಂತಹ ಮಾಹಿತಿ ನೀಡಿದ್ದು, ಸರಾಹ್ ಆಪ್ ನಮ್ಮ ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂದು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.!!

ಹಾಗಾದರೆ, ಸರಾಹ್ ಆಪ್ ಏನೆಲ್ಲಾ ಅನಾನುಕೂಲಗಳನ್ನು ಹೊಂದಿದೆ.? ಯಾವ ಸಾಫ್ಟ್‌ವೇರ್ ಮೂಲಕ ನಮ್ಮೆಲ್ಲಾ ಖಾಸಾಗಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ? ಅವಶ್ಯಕತೆ ಇಲ್ಲದಿದ್ದರೂ ನಮ್ಮ ಫೋನ್ ಕಾಂಟಾಕ್ಟ್ ನಂಬರ್‍‍ಗಳನ್ನು ಸಂಗ್ರಹಿಸುವ ಅವಶ್ಯಕತೆ ಏನಿದೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಾಹ್ ಕಂಪನಿಯ ಸರ್ವರ್ ಬಳಿ ನಿಮ್ಮೆಲ್ಲಾ ಮಾಹಿತಿ!!

ಸರಾಹ್ ಕಂಪನಿಯ ಸರ್ವರ್ ಬಳಿ ನಿಮ್ಮೆಲ್ಲಾ ಮಾಹಿತಿ!!

ಹೆಚ್ಚಿನ ಜನಮನ ಗೆದ್ದಿದ್ದ ಸರಾಹ್ ಆಪ್‍ ಕುತಂತ್ರಿ ಕೆಲಸವನ್ನು ಸಹ ಮಾಡುತ್ತಿದೆ. ಈ ಆಪ್ ಇನ್‍ಸ್ಟಾಲ್ ಮಾಡಿದರೆ ಅದು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿ ಸರಾಹ್ ಕಂಪನಿಯ ಸರ್ವರ್‌ಗೆ ಕಳುಹಿಸುತ್ತದೆ ಎಂಬುದು ಬಹಳ ಜನರಿಗೆ ಇನ್ನು ತಿಳಿದಿಲ್ಲ.!!

ಭದ್ರತಾ ವಿಶ್ಲೇಷಕರಾದ ಜಾಚರಿ ಜೂಲಿಯನ್ ಹೇಳಿದ್ದೇನು?

ಭದ್ರತಾ ವಿಶ್ಲೇಷಕರಾದ ಜಾಚರಿ ಜೂಲಿಯನ್ ಹೇಳಿದ್ದೇನು?

ಸರಾಹ್ ಆಪ್‌ಗೆ ಲಾಗಿನ್ ಆದ ಕೂಡಲೇ ಅದು ನಿಮ್ಮ ಇಮೇಲ್ ಮತ್ತು ಫೋನ್ ಕಾಂಟಾಕ್ಟ್ ನಂಬರ್‌ಗಳನ್ನು ಸಂಗ್ರಹಿಸುತ್ತದೆ ಎಂದು ಜೂಲಿಯನ್ ಹೇಳಿದ್ದಾರೆ. ಈ ಬಗ್ಗೆ ದ ಇಂಟರ್‍‍ಸೆಪ್ಟ್ ಮಾಧ್ಯಮ ವರದಿ ಮಾಡಿದೆ. ಬಿ ಮಾನಿಟರಿಂಗ್ ಸಾಫ್ಟ್‌ವೇರ್ BURP Suite ಮೂಲಕ ಸರಾಹ್ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ ಎನ್ನಲಾಗಿದೆ.!!

ಕಾಂಟಾಕ್ಟ್ ನಂಬರ್‌ಗಳನ್ನು ಸಂಗ್ರಹಿಸುವುದು ಯಾಕೆ?

ಕಾಂಟಾಕ್ಟ್ ನಂಬರ್‌ಗಳನ್ನು ಸಂಗ್ರಹಿಸುವುದು ಯಾಕೆ?

ಆಪ್ ಇನ್‍ಸ್ಟಾಲ್ ಮಾಡಿದ ನಂತರ ನಿಮ್ಮ ಕಾಂಟಾಕ್ಟ್ ಸಂಖ್ಯೆಗಳನ್ನು access( ಆಕ್ಸೆಸ್) ಮಾಡಲೇ ಎಂಬ ಪ್ರಶ್ನೆಯನ್ನು ಸಹರಾ ಕೇಳುತ್ತದೆ. ಇದಕ್ಕೆ Allow ಎಂದು ಒತ್ತಿದರೆ ಮಾತ್ರ ಮುಂದೆ ಹೋಗಬಹುದಾಗಿದೆ. ಆದರೆ, ನಮ್ಮಲ್ಲಿರುವ ಕಾಂಟಾಕ್ಟ್ ನಂಬರ್ ಬಳಸಿ ಸ್ನೇಹಿತರನ್ನು ಹುಡುಕುವ ಸೌಲಭ್ಯವೂ ಆಪ್‌ನಲ್ಲಿಲ್ಲ.ಹೀಗಿರುವಾಗ ಕಾಂಟಾಕ್ಟ್ ನಂಬರ್‌ಗಳನ್ನು ಸರಾಹ್ ಸಂಗ್ರಹಿಸುವುದು ಯಾಕೆ?

ಮಾಹಿತಿ ಬಿಡುಗಡೆ ಆಗುತ್ತದೆ.!!

ಮಾಹಿತಿ ಬಿಡುಗಡೆ ಆಗುತ್ತದೆ.!!

ನಿಮಗೆ ಅನಾಮಧೇಯವಾಗಿ ಯಾರು ಮೇಸೆಜ್ ಮಾಡಿದರೆ ಎನ್ನುವ ಮಾಹಿತಿಯನ್ನು ನೀವು ಬಯಸಿದರೆ ಅದನ್ನು ಬಯಲು ಮಾಡುವೇ ಎಂದು ಸರಾಹ್ ಮುಖ್ಯಸ್ಥ ಹೇಳಿಕೆಯನ್ನು ನೀಡಿದ್ದಾರೆ. ಜೊತೆಗೆ, ಭವಿಷ್ಯದಲ್ಲಿ ಸರಾಹ್ ಆಪ್ ಮತ್ತಷ್ಟು ಅಪ್‌ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಕಾಂಟಾಕ್ಟ್ ನಂಬರ್‌ ಸಂಗ್ರಹ ಮಾಡುವುದಿಲ್ಲ!!

ಕಾಂಟಾಕ್ಟ್ ನಂಬರ್‌ ಸಂಗ್ರಹ ಮಾಡುವುದಿಲ್ಲ!!

ಮೊಬೈಲ್‍ನಲ್ಲಿರುವ ದಾಖಲೆಗಳನ್ನು ಸಂಗ್ರಹಿಸಬೇಕೆ ಎಂಬ ಮನವಿಗಳನ್ನು ಮುಂದಿನ ಅಪ್‌ಡೇಟ್ ಬರುವ ಹೊತ್ತಿಗೆ ತೆಗೆದುಹಾಕಲಾಗುವುದು ಎಂದು ಸರಾಹ್ ಮುಖ್ಯಸ್ಥ ತೌಫೀಖ್ ಟ್ವೀಟ್ ಮಾಡಿದ್ದಾರೆ. ಆದರೆ, ಅವರು ಕಾರಣ ನೀಡದೇ ಇಲ್ಲಿಯವರೆಗೂ ಏಕೆ ನಂಬರ್‌ಗಳನ್ನು ಸಂಗ್ರಹಿಸುತ್ತಿದ್ದರು ಎಂಬುದು ತಿಳಿದಿಲ್ಲ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Sarahah, the popular anonymous messaging app.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot