Subscribe to Gizbot

ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್: ಒಂದೇ ಆಪ್‌ನಲ್ಲಿ 40ಕ್ಕೂ ಹೆಚ್ಚು ಸೇವೆ..!

Written By:

ಸ್ಮಾರ್ಟ್‌ಫೋನ್‌ಗಳು ಇಂದಿನ ದಿನದಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಈ ಹಿನ್ನಲೆಯಲ್ಲಿ ನಾವು ಹಲವಾರು ಕಾರ್ಯಗಳಿಗಾಗಿ ಹಲವು ವಸ್ತುಗಳ ಬದಲಾಗಿ ಸ್ಮಾರ್ಟ್ ಫೋನ್ ಅನ್ನು ಬಳಕೆ ಮಾಡಿಕೊಳ್ಳುತ್ತವೆ. ಆದರೆ ಪ್ರತಿಯೊಂದಕ್ಕೂ ಒಂದೊಂದು ಆಪ್‌ಗಳನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನಿಮ್ಮ ನಿತ್ಯ ಅವಶ್ಯಕತೆಗಳನ್ನು ಪೂರೈಸುವ ಒಂದೇ ಆಪ್‌ ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್: ಒಂದೇ ಆಪ್‌ನಲ್ಲಿ 40ಕ್ಕೂ ಹೆಚ್ಚು ಸೇವೆ..

ಸುಮಾರು 40ರಷ್ಟು ಸೇವೆಗಳನ್ನು ಹೊಂದಿರುವ ಆಪ್‌ವೊಂದು ಮಾರುಕಟ್ಟೆಗೆ ಬಂದಿದ್ದು, ಇದರಲ್ಲಿ ಫ್ಲಾಶ್ ಲೈಟ್, ಕ್ಯೂಆರ್ ಕೋಡ್ ಸ್ಕ್ಯಾನರ್, ಕಂಪಾಸ್, ಅಳತೆಪಟ್ಟಿ, ಸ್ಪಿರಿಟ್ ಲೆವೆಲ್, ಸ್ಪೀಡೋಮೀಟರ್ ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಬಹುದಾಗಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಂಡಿದೆ ಅದೇ ಸ್ಮಾರ್ಟ್‌ ಟೂಲ್ ಆಪ್‌:

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Smart Tools: ಆಪ್

Smart Tools: ಆಪ್

ಸ್ಮಾರ್ಟ್ ಪರಿಕರಗಳಾದ ಫ್ಲ್ಯಾಶ್ ಲೈಟ್, ಕಂಪಾಸ್, ರೂಲರ್, ಕ್ಯಾಲ್ಕುಲೇಟರ್, ಸ್ಪೀಡೋಮೀಟರ್, ಸೌಂಡ್ ಮೀಟರ್ ಸೇರಿದಂತೆ ಅನೇಕ ಉಪಯುಕ್ತ ಮತ್ತು ಸೂಕ್ತವಾದ ಸೇವೆಗಳನ್ನು ಈ ಆಪ್ ನಲ್ಲಿ ನೀವು ಪಡೆಯಬಹುದಾಗಿದೆ.

ಫ್ಲ್ಯಾಶ್ ಲೈಟ್

ಫ್ಲ್ಯಾಶ್ ಲೈಟ್

ನಿಮ್ಮ ಮೊಬೈಲ್‌ನಲ್ಲಿರುವ ಎಲ್ಇಡಿ ಫ್ಲ್ಯಾಷ್ ಲೈಟ್ ಅನ್ನು ಅವಶ್ಯಕವಾದಲ್ಲಿ ಟಾರ್ಚ್ ಲೈಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಿದೆ.

ಕ್ಯೂಆರ್ ಕೋಡ್ ಮತ್ತು ಬಾರ್ಕೋಡ್ ಸ್ಕ್ಯಾನರ್

ಕ್ಯೂಆರ್ ಕೋಡ್ ಮತ್ತು ಬಾರ್ಕೋಡ್ ಸ್ಕ್ಯಾನರ್

ಮಾರುಕಟ್ಟೆಯಲ್ಲಿ ದೊರೆಯುವ QR ಮತ್ತು ಬಾರ್ಕೋಡ್ಸ್ ಗಳನ್ನು ಸ್ಕ್ಯಾನ್ ಮಾಡಲು ಇದರಲ್ಲಿಯೇ ಅವಕಾಶವನ್ನು ನೀಡಲಾಗಿದೆ. ಇದಕ್ಕಾಗಿ ಬೇರೆ ಆಪ್ ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.

ದಿಕ್ಸೂಚಿ (ಕಂಪಾಸ್)

ದಿಕ್ಸೂಚಿ (ಕಂಪಾಸ್)

ಇದಲ್ಲದೇ ನೀವು ಈ ಸ್ಮಾರ್ಟ್ ಟೂಲ್ ಆಪ್‌ನಲ್ಲಿ ಉತ್ತಮ ವಿನ್ಯಾಸದೊಂದಿಗೆ ನಿಖರ ಮತ್ತು ನಿಖರವಾದ ವೃತ್ತಿಪರ ದಿಕ್ಸೂಚಿಯನ್ನು ಕಾಣಬಹುದಾಗಿದೆ.

ಸ್ಪೀಡೋಮೀಟರ್

ಸ್ಪೀಡೋಮೀಟರ್

ನಿಮ್ಮ ಫೋನ್ ಡಿಜಿಟಲ್ ಸ್ಪೀಡೋಮೀಟರ್ ಮತ್ತು ಓಡೋಮೀಟರ್ ಆಗಿ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಬೇರೆ ಯಾವುದೇ ಆಪ್‌ ಗಳನ್ನು ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಒಂದೇ ಆಪ್‌ ನಲ್ಲಿ ಎಲ್ಲಾ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದರಿ: ಜಿಯೋ ಹೆಣೆಯಲು ಮೊಟೊರೊಲಾದೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌: ರೂ.2000 ಕ್ಯಾಷ್ ಬ್ಯಾಕ್ ಆಫರ್...!

English summary
Smart Tools is the most useful and handy application. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot