ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಟಾಪ್‌ ಡೇಟಿಂಗ್ ಆಪ್‌ಗಳ ಲಿಸ್ಟ್‌ ಇಲ್ಲಿದೆ!

|

ಪ್ರಸ್ತುತ ಚಾಟಿಂಗ್ ಆಪ್ಸ್‌ ಜೊತೆಗೆ ಡೇಟಿಂಗ್‌ ಅಪ್ಲಿಕೇಶನ್‌ಗಳು ಭಾರೀ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬಳಕೆದಾರರು ತಮ್ಮ ಭಾವನೆ ಮತ್ತು ಅಭಿರುಚಿಗಳಿಗೆ ಸರಿ ಹೊಂದುವಂತಹ ಆಪ್ತರನ್ನು ಹುಡಕಲು ಡೇಟಿಂಗ್ ಆಪ್‌ನತ್ತ ಹೊರಳುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಡೇಟಿಂಗ್ ಆಪ್‌ಗಳು ಲಭ್ಯವಿದ್ದು, ಯುವಜನತೆ ಡೇಟಿಂಗ್ ಆಪ್‌ಗಳತ್ತ ಹೆಚ್ಚು ವಾಲುತ್ತಿದೆ. ಇದರಿಂದ ಡೇಟಿಂಗ್ ಆಪ್‌ಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಭಾರೀ ಜನಪ್ರಿಯಗೊಳ್ಳುತ್ತಿವೆ.

ಅಭಿರುಚಿಗಳು

ಹೌದು, ಸಮಾನ ವಯಸ್ಸು ಮತ್ತು ಒಂದೇ ಅಭಿರುಚಿಗಳು ಪರಸ್ಪರ ನಡುವೆ ಆಪ್ತತೆಯನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಡೇಟಿಂಗ್ ಆಪ್‌ಗಳಲ್ಲಿ ಅಭಿರುಚಿಗಳನ್ನು ನಮೂದಿಸುವ ಮೂಲಕ ನಿಮ್ಮ ಪ್ರೊಫೇಲ್ ರಚಿಸಿಕೊಳ್ಳವುದಕ್ಕೆ ಅವಕಾಶ ನೀಡಲಾಗಿರುವುದು ಆ ಆಧಾರದ ಮೇಲೆ ನಿಮಗೆ ಸರಿಹೊಂದುವ ಆಪ್ತರ ಆಯ್ಕೆಗಳನ್ನು ಆಪ್‌ನಲ್ಲಿ ಒದಗಿಸಲಾಗುತ್ತದೆ. ಸದ್ಯ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಕೆಲವು ಪ್ರಮುಖ ಡೇಟಿಂಗ್‌ ಆಪ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಟಿಂಡರ್ ಅಪ್ಲಿಕೇಶನ್‌ (Tinder)

ಟಿಂಡರ್ ಅಪ್ಲಿಕೇಶನ್‌ (Tinder)

ಭಾರತದಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಈ ಟಿಂಡರ್ ಡೇಟಿಂಗ್ ಆಪ್‌ ಉಚಿತವಾಗಿದ್ದು, ನಿಮ್ಮ ಲೋಕೆಶನ್ ಆಧಾರದ ಮೇಲೆ ಸುತ್ತಮುತ್ತಲಿನ ಇತರೆ ಫ್ರೊಫೇಲ್‌ಗಳ ಆಯ್ಕೆ ಬರುತ್ತವೆ. ಎಡಕ್ಕೆ ಸರಿಸುತ್ತಾ ಮುಂದಿನ ಪ್ರೋಫೇಲ್‌ಗಳನ್ನು ನೋಡಬಹುದು. ಬಳಕೆದಾರರು ಒಂದು ದಿನಕ್ಕೆ ನಿಯಮಿತ ಪ್ರೋಫೇಲ್‌ಗಳನ್ನು ಮಾತ್ರ ನೋಡಬಹುದಾಗಿದ್ದು, ಹೆಚ್ಚಿನ ಪ್ರೋಫೇಲ್‌ ನೋಡಲು ಇಚ್ಚಿಸಿದರೇ ದರ ನೀಡಬೇಕಾಗುತ್ತದೆ. ಓಕೆ ಆದ ಪ್ರೋಫೇಲ್ ಬಳಕೆದಾರರೊಂದಿಗೆ ಚಾಟ್‌ ಮಾಡಲು ಅನುಮತಿ ಸಿಗುತ್ತದೆ. ಇನ್ನೂ ಈ ಆಪ್‌ಗೆ ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಲಾಗ್‌ಇನ್ ಆಗಬಹುದು ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು.

ಟ್ರೂಲೀ ಮ್ಯಾಡ್ಲೀ ಅಪ್ಲಿಕೇಶನ್‌ (TrulyMadly)

ಟ್ರೂಲೀ ಮ್ಯಾಡ್ಲೀ ಅಪ್ಲಿಕೇಶನ್‌ (TrulyMadly)

ಟ್ರೂಲೀ ಮ್ಯಾಡ್ಲೀ ಉತ್ತಮ ಡೇಟಿಂಗ್ ಆಪ್ ಆಗಿದ್ದು, ಬಳಕೆದಾರರು ನೀಡಿರುವ ಪ್ರೋಫೇಲ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಪ್ರೋಫೇಲ್‌ಗಳ ಖಚಿತತೆಗಾಗಿ ಗುರುತಿನ ಪುರಾವೆಯನ್ನು ಕೇಳಲಾಗುತ್ತದೆ. ನಿಮ್ಮ ಪ್ರೋಫೇಲ್‌ ಆಧಾರದ ಮೇಲೆ ನಿಮಗೆ ಸರಿಹೊಂದುವಂತಹ ಪ್ರೊಫೇಲ್‌ಗಳನ್ನು ನೀಡುತ್ತಾರೆ, ನಿಮ್ಮ ಅಭಿರುಚುಗೆ ಮ್ಯಾಚ್ ಆದ ಬಳಕೆದಾರರೊಂದಿಗೆ ಪ್ರತ್ಯಕವಾಗಿ ಸಂದೇಶ ಮಾಡಲು ಅನುಮತಿ ಪಡೆಯುತ್ತಿರಿ. ನಿಮ್ಮ ಪ್ರೋಫೇಲ್ ಸುರಕ್ಷತೆ ಇದ್ದು, ಯಾರು ಡೌನಲೋಡ್ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಅನುಚಿತ ವರ್ತನೆಗೆ ತೋರಿಸಬಾರದೆಂದು ಬಳಕೆದಾರರ ಮೇಲೆ ನಿಗಾ ಇಡಲಾಗಿರುತ್ತದೆ.

ಹ್ಯಾಪನ್ ಅಪ್ಲಿಕೇಶನ್‌

ಹ್ಯಾಪನ್ ಅಪ್ಲಿಕೇಶನ್‌

ಈ ಹ್ಯಾಪನ್ ಸಹ ಲೋಕೆಷನ್ ಆಧಾರಿತ ಡೇಟಿಂಗ್ ಆಪ್‌ ಆಗಿದ್ದು, ಇದರ ಫ್ರೋಫೇಲ್ ಮ್ಯಾಚಿಂಗ್ ಸ್ವಲ್ಪ ಭಿನ್ನವಾಗಿದೆ. ನಿಮ್ಮ ನಿಜ ಜೀವನದಲ್ಲಿ ಕಂಡಿರುವ ವ್ಯಕ್ತಿಗಳು ಹ್ಯಾಪನ್ ಆಪ್‌ನಲ್ಲಿ ಪ್ರೋಫೇಲ್ ಹೊಂದಿದ್ದಾರಾ ಎಂದು ತಿಳಿಯಬಹುದು, ಹೊಂದಿದ್ದರೆ ನೀವು ಅವರಿಗೆ ಹ್ಯಾಪನ್ ಆಪ್‌ ಮೂಲಕ ರೀಕ್ವೆಸ್ಟ್ ಕಳುಹಿಸಬಹುದು ನಿಮ್ಮ ರೀಕ್ವೆಸ್ಟ್ ಅವರು ಸ್ವೀಕರಿಸಿದರೇ ನೀವು ಅವರೊಂದಿಗೆ ಮಾತಾಡುವ ಅವಕಾಶ ಇದೆ.

ಒಕ್ಕುಪಿಡ್ ಅಪ್ಲಿಕೇಶನ್‌ (OkCupid )

ಒಕ್ಕುಪಿಡ್ ಅಪ್ಲಿಕೇಶನ್‌ (OkCupid )

ಒಕ್ಕುಪಿಡ್ ಡೇಟಿಂಗ್ ಆಪ್ ಅಂತರಾಷ್ಟ್ರೀಯ ಮಟ್ಟದ ಡೇಟಿಂಗ್ ಆಪ್‌ ಆಗಿದ್ದು, ಒಟ್ಟು 113 ರಾಷ್ಟ್ರಗಳಲ್ಲಿ ನೆಟವರ್ಕ್ ಹೊಂದಿದೆ. ಈ ಆಪ್‌ನಲ್ಲಿ ಬಳಕೆದಾರರನ್ನು ಖಚಿತಪಡಿಸಿಕೊಳ್ಳಲು ಹಲವು ಪ್ರಶ್ನೇಗಳನ್ನು ಕೇಳಲಾಗುತ್ತದೆ ಮತ್ತು ಸರ್ಚ ಸೆಕ್ಷನ್ ಮೂಲಕ ನಿಮಗೆ ಸರಿಯಾಗಿ ಮ್ಯಾಚ್ ಆಗುವ ಆಪ್ತರನ್ನು ಹುಡುಕಿಕೊಳ್ಳಬಹುದಾಗಿದೆ. ಈ ಡೇಟಿಂಗ್ ಆಪ್‌ನಲ್ಲಿಯೂ ಸಹ ನಿಮ್ಮ ಪ್ರೋಫೇಲ್‌ಗೆ ಸುರಕ್ಷತೆಗೆ ಗಮನ ನೀಡಲಾಗುತ್ತದೆ.

Most Read Articles
Best Mobiles in India

English summary
These Are Best Dating Android Apps 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X