ಇಂಟರ್‌ನೆಟ್‌, ನೆಟ್‌ವರ್ಕ್‌ ಇಲ್ದಿದ್ರೂ ಮೆಸೇಜ್‌ ಮಾಡಿ..! ಇಲ್ಲಿವೆ ಬೆಸ್ಟ್ ಆಪ್‌ಲೈನ್‌ ಮೆಸೇಜಿಂಗ್ ಆಪ್ಸ್..!

By Gizbot Bureau
|

ಸದ್ಯ ಭಾರತದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ಜೋರಾಗಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ಸರ್ಕಾರ ಇಂಟರ್‌ನೆಟ್‌ ಸ್ಥಗಿತಗೊಳಿಸುವ ಕಾರ್ಯ ಮಾಡುತ್ತಿದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಪ್ರತಿಭಟನೆಗಳನ್ನು ನಿಯಂತ್ರಿಸಲು ವಿಶ್ವದ ಅನೇಕ ರಾಷ್ಟ್ರಗಳು ಈ ಕ್ರಮವನ್ನು ಅನುಸರಿಸುತ್ತಿವೆ, ಆದರೆ, ಇಂಟರ್‌ನೆಟ್‌ ಸ್ಥಗಿತಗೊಂಡರು ಅನೇಕ ಆಪ್‌ಲೈನ್‌ ಮೆಸೇಜಿಂಗ್‌ ಆಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಸಹಾಯಕವಾಗಿವೆ. ಈ ಆಪ್‌ಗಳು ಪ್ರತಿಭಟನೆ ಮಾತ್ರವಲ್ಲದೇ ಸಂಗೀತೋತ್ಸವ, ಕ್ರೀಡಾ ಚಟುವಟಿಕೆಗಳು, ನೈಸರ್ಗಿಕ ವಿಕೋಪ, ವಿದೇಶಕ್ಕೆ ಪ್ರಯಾಣದಂತಹ ಅನೇಕ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಅಂತಹ ಆಪ್‌ಗಳ ಒಂದಿಷ್ಟು ಸಣ್ಣ ಪರಿಚಯ ಇಲ್ಲಿದೆ.

ತಂತ್ರಜ್ಞಾನ ಏನು..?

ತಂತ್ರಜ್ಞಾನ ಏನು..?

ಆಪ್‌ಗಳನ್ನು ನೋಡುವ ಮೊದಲು, ಅದರಲ್ಲಿ ಬಳಸುವ ತಂತ್ರಜ್ಞಾನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೊಣ. ಈ ವಿವರಣೆ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಾತ್ರವಲ್ಲದೆ ಮಿತಿಗಳನ್ನೂ ಸಹ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿ ಪೀರ್-ಟು-ಪೀರ್ ಬ್ಲೂಟೂತ್ ಮೆಶ್ ನೆಟ್‌ವರ್ಕ್ ಅಥವಾ ವೈಫೈ ಡೈರೆಕ್ಟ್ ಆಧಾರಿತ ನೆಟ್‌ವರ್ಕ್ ಅನ್ನು ಬಳಸುತ್ತವೆ.

ಮೆಶ್‌ ನೆಟ್‌ವರ್ಕ್ ಎನ್ನುವುದು ಒಂದು ರೀತಿಯ ನೆಟ್‌ವರ್ಕ್ ತಂತ್ರಜ್ಞಾನವಾಗಿದ್ದು, ಅಲ್ಲಿ ಪ್ರತಿಯೊಂದು ನೋಡ್ ಒಂದಕ್ಕೊಂದು ಸಂಪರ್ಕ ಹೊಂದಿರುತ್ತವೆ. ಸಾಧನಗಳಲ್ಲಿ ಡೇಟಾ ವರ್ಗಾಯಿಸಲು ನೆಟ್‌ವರ್ಕ್ ಈ ನೋಡ್‌ಗಳನ್ನು ಬಳಸುತ್ತದೆ. ಆದ್ದರಿಂದ, ನೀವು ಮತ್ತು ನಿಮ್ಮ ಸ್ನೇಹಿತರು ಒಂದೇ ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದ್ದರೆ, ನೀವು ಇಂಟರ್ನೆಟ್ ಇಲ್ಲದೆ ಪರಸ್ಪರ ಸಂವಹನ ಮಾಡಬಹುದು. ಮೆಶ್‌ ನೆಟ್‌ವರ್ಕಿಂಗ್‌ನ ಅದ್ಭುತವೆಂದರೆ, ಅದು ನೇರ ಪೀರ್-ಟು-ಪೀರ್ ಸಂವಹನವನ್ನು ಅನುಮತಿಸುತ್ತದೆ ಮಾತ್ರವಲ್ಲದೆ, ಹತ್ತಿರದ ಎಲ್ಲಾ ಸಾಧನಗಳಿಗೆ ಮಾಹಿತಿಯನ್ನು ಕಳಿಸುತ್ತದೆ.

ಬ್ರಿಡ್ಜ್‌ಫೈ

ಬ್ರಿಡ್ಜ್‌ಫೈ

ಜಗತ್ತಿನ ಜನಪ್ರಿಯ ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಬ್ರಿಡ್ಜ್‌ಫೈ ಕೂಡ ಒಂದು. ಚೀನಾ ವಿಧಿಸಿದ ಇಂಟರ್‌ನೆಟ್‌ ಸೆನ್ಸಾರ್‌ಶಿಪ್ ವಿರುದ್ಧ ಹಾಂಗ್ ಕಾಂಗ್ ಪ್ರತಿಭಟನಾಕಾರರು ಬಳಸಿರುವ ಪ್ರಮುಖ ಆಪ್‌ ಇದಾಗಿದೆ. ಇಷ್ಟೇ ಅಲ್ಲದೇ, ಭಾರತದಲ್ಲಿಯೂ ಈ ಆಪ್‌ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮುಖ್ಯ ಸಂವಹನ ಸಾಧನವಾಗಿ ಬಳಕೆಯಾಗುತ್ತಿದೆ. ಬ್ಲೂಟೂತ್ ಮೆಶ್‌ ತಂತ್ರಜ್ಞಾನ ಬಳಸಿಕೊಂಡು ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಮೋಡ್, ಬ್ರಾಡ್‌ಕಾಸ್ಟ್ ಮೋಡ್ ಮತ್ತು ಮೆಶ್ ಮೋಡ್‌ನಂತಹ ಮೂರು ರೀತಿಯ ಸಂದೇಶ ಸೇವೆಗಳನ್ನು ನೀಡುತ್ತಿದೆ.

ಬ್ರಿಯಾರ್

ಬ್ರಿಯಾರ್

ಬ್ರಿಯಾರ್ ಎಂಬುದು ಆಂಡ್ರಾಯ್ಡ್‌ಗಾಗಿಯೇ ಬಂದಿರುವ ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ ಆಗಿದೆ. ಯಾವುದೇ ಮೊಬೈಲ್ ಡೇಟಾ ಅಥವಾ ವೈಫೈ ಸಂಪರ್ಕದ ಅಗತ್ಯವಿಲ್ಲದೇ ಸುರಕ್ಷಿತ ಆಫ್‌ಲೈನ್ ಸಂದೇಶ ಕಳುಹಿಸುವ ಭರವಸೆಯನ್ನು ಬ್ರಿಯಾರ್‌ ನೀಡುತ್ತದೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ಅವರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸುರಕ್ಷಿತ ಸಂವಹನ ನಡೆಸಲು ಬಯಸುವವರಿಗಂತಲೆ ಈ ಅಪ್ಲಿಕೇಶನ್‌ನ್ನು ವಿನ್ಯಾಸಗೊಳಿಸಲಾಗಿದೆ. ಕಂಪನಿಯು ಇಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, ನಿಮ್ಮ ಸಂದೇಶಗಳು ಯಾವಾಗಲೂ ಖಾಸಗಿಯಾಗಿರುತ್ತವೆ. ನೀವು ಇಂಟರ್‌ನೆಟ್ ಸಂಪರ್ಕ ಹೊಂದಿದ್ದರೂ ಸಹ, ಇದು ಕೇಂದ್ರ ಸರ್ವರ್‌ನ್ನು ಅವಲಂಬಿಸದೆ, ಬಳಕೆದಾರರನ್ನು ಕಣ್ಗಾವಲಿನಿಂದ ರಕ್ಷಿಸಲು ಟಾರ್ ನೆಟ್‌ವರ್ಕ್‌ನ್ನು ಬಳಸುತ್ತದೆ. ಇದರ ಜೊತೆ ಈ ಆಪ್‌ನಲ್ಲಿಯೂ ಸ್ನ್ಯಾಪ್‌ಚಾಟ್‌ನಂತೆ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ.

ಫೈರ್ ಚಾಟ್

ಫೈರ್ ಚಾಟ್

ಫೈರ್ ಚಾಟ್ ಉತ್ತಮ ಆಫ್‌ಲೈನ್ ಮೆಸೇಜಿಂಗ್ ಆಪ್‌ ಆಗಿದ್ದು, ಉಚಿತ ಪೀರ್-ಟು-ಪೀರ್ ಸಂದೇಶವನ್ನು ತರುತ್ತದೆ. ಇಂಟರ್‌ನೆಟ್ ಇಲ್ಲದೆಯೂ ಟೆಕ್ಸ್ಟ್‌ ಹಾಗೂ ಚಿತ್ರಗಳನ್ನು ಕಳುಹಿಸಬಹುದು. ಯಾವುದೇ ಡೇಟಾ ಸಂಪರ್ಕವಿಲ್ಲದೆ ನೀವು ಈ ಅಪ್ಲಿಕೇಶನ್ ಅನ್ನು ಎಲ್ಲಿ ಬೇಕಾದರೂ ಬಳಸಬಹುದು. ವಿಮಾನ, ಸಾರ್ವಜನಿಕ ಸಾರಿಗೆ, ಕ್ರೂಸ್ ಹಡಗುಗಳು, ಕ್ಯಾಂಪಸ್‌ಗಳು ಮತ್ತು ಕಿಕ್ಕಿರಿದ ಈವೆಂಟ್‌ಗಳಲ್ಲಿದ್ದರೂ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಮೆಶ್‌ ನೆಟ್‌ವರ್ಕ್ ಖಾಸಗಿಯಾಗಿದ್ದು, ನಿಮ್ಮ ಸಂದೇಶಗಳು ಸುರಕ್ಷಿತವಾಗಿರುತ್ತವೆ. ಫೈರ್ ಚಾಟ್‌ನ ಉತ್ತಮ ಭಾಗವೆಂದರೆ ಅದು ಬ್ಲೂಟೂತ್ ಮತ್ತು ವೈಫೈ ಸಿಗ್ನಲ್‌ಗಳನ್ನು ಬಳಸಿ ಬಲವಾದ ಸಂಪರ್ಕವನ್ನು ರೂಪಿಸುತ್ತದೆ.

ಸಿಗ್ನಲ್ ಆಫ್‌ಲೈನ್ ಮೆಸೆಂಜರ್

ಸಿಗ್ನಲ್ ಆಫ್‌ಲೈನ್ ಮೆಸೆಂಜರ್

ಸಿಗ್ನಲ್ ಆಫ್‌ಲೈನ್ ಮೆಸೆಂಜರ್ ಇದೀಗ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಬ್ರಿಡ್ಜ್‌ಫೈನಲ್ಲಿನ ಬ್ಲೂಟೂತ್ ಮೆಶ್ ನೆಟ್‌ವರ್ಕಿಂಗ್ ಬಳಸುವ ಬದಲು, ಸಿಗ್ನಲ್ ಆಫ್‌ಲೈನ್ ಮೆಸೆಂಜರ್ ವೈಫೈ-ಡೈರೆಕ್ಟ್ ನೆಟ್‌ವರ್ಕಿಂಗ್ ಅನ್ನು ಬಳಸುತ್ತದೆ. 100 ಮೀಟರ್ ವ್ಯಾಪ್ತಿಯಲ್ಲಿ ಪರಸ್ಪರ ಸಂದೇಶಗಳನ್ನು ಕಳುಹಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ನೀವು ಒಂದರಿಂದ ಒಂದಕ್ಕೆ ಅಥವಾ ಗುಂಪು ಪ್ರಸಾರದಲ್ಲಿ ಸುರಕ್ಷಿತವಾಗಿ ಸಂದೇಶಗಳನ್ನು ಕಳುಹಿಸಬಹುದು. ಇದು ಪಠ್ಯ, ಆಡಿಯೋ, ಫೋಟೋ ಮತ್ತು ವಿಡಿಯೋ ಸಂದೇಶಗಳನ್ನು ಕಳುಹಿಸಲು ನಿಮಗೆ ಅನುಮತಿಸುತ್ತದೆ. ಇದು ಐಒಎಸ್‌ನಲ್ಲಿ ಲಭ್ಯವಿಲ್ಲ ಎನ್ನುವುದೇ ಒಂದು ನ್ಯೂನ್ಯತೆ ಎನ್ನಬಹುದು.

ವೋಜರ್

ವೋಜರ್

ನೀವು ಐಫೋನ್ ಬಳಕೆದಾರರಾಗಿದ್ದು, ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ಹುಡುಕುತ್ತಿದ್ದರೆ ನೀವು ವೋಜರ್‌ನ್ನು ಬಳಸಬಹುದು. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಅನಾಮಧೇಯ ಪೀರ್-ಟು-ಪೀರ್ ಸೂಕ್ಷ್ಮ ಸಂವಹನಗಳಿಗಾಗಿ ಅಪ್ಲಿಕೇಶನ್ ನಿಮ್ಮ ಸುತ್ತಲೂ ತನ್ನದೇ ಆದ ಸುರಕ್ಷಿತ ಮತ್ತು ವಿಶ್ವಾಸಾರ್ಹ ಮೆಶ್‌ ನೆಟ್‌ವರ್ಕ್ ರಚಿಸುತ್ತದೆ. ನೀವು ಪರ್ವತಗಳಲ್ಲಿ ಕ್ಯಾಂಪ್ ಮಾಡುತ್ತಿರಲಿ ಅಥವಾ ವಿದೇಶಕ್ಕೆ ಪ್ರಯಾಣಿಸುತ್ತಿರಲಿ, ಯಾವುದೇ ಇಂಟರ್‌ನೆಟ್ ಸಂಪರ್ಕವಿಲ್ಲದೆ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ವೋಜರ್ ನಿಮಗೆ ಸಹಾಯ ಮಾಡಬಹುದು. ಅಪ್ಲಿಕೇಶನ್ ಪಠ್ಯ ಮತ್ತು ಫೋಟೋ ಸಂದೇಶ ಎರಡನ್ನೂ ಬೆಂಬಲಿಸುತ್ತದೆ. ಇಲ್ಲಿನ ಸಂಪರ್ಕವು ಸುರಕ್ಷಿತ ಮತ್ತು ಅನಾಮಧೇಯವಾಗಿದೆ.

ಬಲವಾದ ಸಂಪರ್ಕಗಳನ್ನು ರಚಿಸಲು ಅಪ್ಲಿಕೇಶನ್ ಬ್ಲೂಟೂತ್ ಮತ್ತು ವೈಫೈ ಸಿಗ್ನಲ್‌ಗಳನ್ನು ಬಳಸುತ್ತದೆ.

ಪೀರ್ ಚಾಟ್

ಪೀರ್ ಚಾಟ್

ಐಫೋನ್‌ನ ಮತ್ತೊಂದು ಆಫ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ಅಂದ್ರೆ ಪೀರ್ ಚಾಟ್. ಈ ಪಟ್ಟಿಯಲ್ಲಿರುವ ಇತರ ಕೆಲವು ಅಪ್ಲಿಕೇಶನ್‌ಗಳಂತೆ ಈ ಅಪ್ಲಿಕೇಶನ್ ಕೂಡ ಜನಪ್ರಿಯವಾಗಿಲ್ಲ, ಆದಾಗ್ಯೂ, ಟೆಕ್ಸ್ಟಿಂಗ್‌ನಲ್ಲಿ ಇತರ ಆಪ್‌ಗಳಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಹತ್ತಿರದ ಜನರಿಗೆ ಸಂದೇಶಗಳನ್ನು ಕಳುಹಿಸಲು ಬ್ಲೂಟೂತ್ ಮತ್ತು ವೈಫೈ ಸಿಗ್ನಲ್‌ಗಳಿಂದ ನಡೆಸಲ್ಪಡುವ ಮೆಶ್‌ ನೆಟ್‌ವರ್ಕಿಂಗ್ ವ್ಯವಸ್ಥೆಯನ್ನು ಇದು ಬಳಸುತ್ತದೆ. ಇದು ಪೀರ್-ಟು-ಪೀರ್ ಮತ್ತು ಗ್ರೂಪ್‌ ಬ್ರಾಡ್‌ಕಾಸ್ಟ್‌ ಮೆಸೇಜಿಂಗ್‌ನ್ನು ಬೆಂಬಲಿಸುತ್ತದೆ. ಎಲ್ಲಾ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದು, ನಿಮ್ಮ ಸಂದೇಶಗಳು ಹ್ಯಾಕರ್‌ಗಳಿಂದ ಮಾತ್ರವಲ್ಲದೆ ಕಂಪನಿಯಿಂದಲೂ ಸುರಕ್ಷಿತವಾಗಿವೆ.

ನಿಯರ್‌ ಪೀರ್‌

ನಿಯರ್‌ ಪೀರ್‌

ಈ ಪಟ್ಟಿಯಲ್ಲಿರುವ ಅಂತಿಮ ಆಫ್‌ಲೈನ್ ಮೆಸೆಂಜರ್ ಅಪ್ಲಿಕೇಶನ್ "ನಿಯರ್‌ ಪೀರ್‌" ಇದು ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಅಪ್ಲಿಕೇಶನ್ ವೈಫೈ ಸಿಗ್ನಲ್‌ಗಳನ್ನು ಬಳಸುತ್ತದೆ ಮತ್ತು ನಿಮ್ಮ ಗೆಳೆಯರಿಗೆ ಸಂದೇಶಗಳನ್ನು ಕಳುಹಿಸಲು ಮೆಶ್‌ ನೆಟ್‌ವರ್ಕ್ ಅನ್ನು ರಚಿಸುತ್ತದೆ. ಅಪ್ಲಿಕೇಶನ್ ಗುಂಪು ಮತ್ತು ಖಾಸಗಿ ಚಾಟ್ ಎರಡನ್ನೂ ಬೆಂಬಲಿಸುತ್ತದೆ. ರಿಸೀವರ್ ವ್ಯಾಪ್ತಿಯಲ್ಲಿಲ್ಲದಿದ್ದರೂ ಸಹ ನೀವು ಸಂದೇಶಗಳನ್ನು ಕಳುಹಿಸಬಹುದಾಗಿದ್ದು, ವ್ಯಾಪ್ತಿಯೊಳಗೆ ಬಂದ ತಕ್ಷಣ ಅದು ಸ್ವಯಂಚಾಲಿತವಾಗಿ ಸಂದೇಶವನ್ನು ತಲುಪಿಸುತ್ತದೆ. ಆದಾಗ್ಯೂ, ಎನ್‌ಕ್ರಿಪ್ಶನ್‌ ಬಗ್ಗೆ ಆಪ್‌ ಡೆವಲಪರ್‌ ಪ್ರಸ್ತಾಪಿಸದಿರುವುದರಿಂದ ಬಳಸುವಾಗ ಸ್ವಲ್ಪ ಎಚ್ಚರಿಕೆ ಇರಲಿ.

Most Read Articles
Best Mobiles in India

Read more about:
English summary
These Are The Best Offline Messaging Apps For Android And iPhones In 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X