ಕೃತಕ ಬುದ್ಧಿಮತ್ತೆಯ ಹೊಸ 'ಜಿಮೇಲ್'‌ನಲ್ಲಿ ಏನೇನಿದೆ ಗೊತ್ತಾದರೆ ಆಶ್ಚರ್ಯಪಡ್ತೀರಾ!!

|

ತಂತ್ರಜ್ಞಾನ ಯಾವಾಗಲೂ ಅಪ್‌ಡೇಟ್ ಆಗುತ್ತಲೇ ಇರುತ್ತದೆ ಎನ್ನುವುದಕ್ಕೆ ಗೂಗಲ್ ತರುವ ಬದಲಾವಣೆಗಳೇ ಸಾಕ್ಷಿ ಎಂದು ಟೆಕ್ ಪ್ರಪಂಚದಲ್ಲಿ ಹೇಳುತ್ತಾರೆ. ಅದಕ್ಕೆ ಪೂರಕವೆಂಬಂತೆ ಗೂಗಲ್‌ನ ಜಿಮೇಲ್, ಭದ್ರತೆ ಮತ್ತು ಭಾರೀ ಬದಲಾವಣೆಗಳನ್ನು ಬಳಕೆದಾರನ ಬಳಿಗೆ ಬಂದಿದೆ. ಕೇವಲ ಇವೆಷ್ಟೆ ಮಾತ್ರವಲ್ಲದೇ, ಜಿಮೇಲ್ ಬಳಕೆ ಇನ್ನಷ್ಟು ಗ್ರಾಹಕ ಸ್ನೇಹಿಯಾಗಿದೆ.!

ಹೌದು, ಮೇಲ್ ಬಳಕೆಯನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸುವ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಈ ಕಾಲದ ಕಾಂತ್ರಿಕಾರಕ ತಂತ್ರಜ್ಞಾನ ಎಂದೇ ಹೆಸರಾದ ಕೃತಕ ಬುದ್ಧಿಮತ್ತೆಯನ್ನು (Artificial intelligence) ಜಿಮೇಲ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಂತ ಹಂತವಾಗಿ ಗೂಗಲ್ ಜಿಮೇಲ್‌ನಲ್ಲಿ ಹೊಸ ಪರಿಷ್ಕರಣೆಗಳನ್ನು ಪರಿಚಯಿಸುವ ಯೋಜನೆಯನ್ನು ಗೂಗಲ್ ಹಾಕಿಕೊಂಡಿದೆ.

ಕೃತಕ ಬುದ್ಧಿಮತ್ತೆಯ ಹೊಸ 'ಜಿಮೇಲ್'‌ನಲ್ಲಿ ಏನೇನಿದೆ ಗೊತ್ತಾದರೆ ಆಶ್ಚರ್ಯಪಡ್ತೀರಾ!

ಸುಧಾರಿತ, ಮೇಲ್ದರ್ಜೆಗೆ ಏರಿಸಿದ ಹೊಸ ಜಿಮೇಲ್‌ ಆವೃತ್ತಿಯು ಏಪ್ರಿಲ್‌ 25ರಿಂದಲೇ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರ ಜಿಮೇಲ್‌ನ ಬಲತುದಿಯಲ್ಲಿರುವ ಸೆಟ್ಟಿಂಗ್ಸ್‌ ಆಯ್ಕೆಗೆ ಹೋದರೆ ಅಲ್ಲಿ ''Try the new Gmail' ಎಂಬ ಆಯ್ಕೆಯನ್ನು ನೀಡಲಾಗಿದೆ. ಇದರ ಮೇಲೆ ಕ್ಲಿಕ್‌ ಮಾಡುವ ಮೂಲಕ ಹೊಸ ಜಿಮೇಲ್ ತೆರೆಯಬಹುದುದಾಗಿದೆ. ಹಾಗಾದರೆ, ಹೊಸ ಜಿಮೇಲ್‌ನಲ್ಲಿ ಏನಿದೆ? ಗ್ರಾಹಕ ಸ್ನೇಹಿ ಆಯ್ಕೆಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಹೆಚ್ಚುವರಿ ತಾಂತ್ರಿಕ ಸೌಲಭ್ಯ!!

ಹೆಚ್ಚುವರಿ ತಾಂತ್ರಿಕ ಸೌಲಭ್ಯ!!

ಇದೀಗ ಪರಿಸಯಿಸುತ್ತಿರುವ ಹೊಸ ಜಿಮೇಲ್‌ನಲ್ಲಿ ಭದ್ರತಾ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೈಜ ಬಳಕೆದಾರನನ್ನು ಹೊರತುಪಡಿಸಿ, ಇನ್ನೊಬ್ಬ ವ್ಯಕ್ತಿ, ಇನ್ನೊಂದು ಕಂಪ್ಯೂಟರ್‌ ಮೂಲಕ ಜಿಮೇಲ್ ಪ್ರವೇಶಿಸುವುದು ತಡೆಯಲು ಅಥವಾ ಹ್ಯಾಕ್‌ ಮಾಡುವನ್ನು ತಪ್ಪಿಸಲು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ಗೂಗಲ್ ಪರಿಚಯಿಸಿದೆ. ಜಿಮೇಲ್‌ನಿಂದ ಬರುವ ಇಮೇಲ್‌ಗಳನ್ನು ವೀಕ್ಷಿಸಬೇಕಾದರೆ ಹೆಚ್ಚುವರಿ ದೃಢೀಕರಣ ನೀಡಿದ ನಂತರವೇ ಜಿಮೇಲ್‌ಗಳನ್ನು ತೆರೆದು ನೋಡಲು ಸಾಧ್ಯವಾಗಲಿದೆ.

ಮಾಹಿತಿ ಹಕ್ಕು ನಿರ್ವಹಣೆ (ಐಆರ್ಎಂ)

ಮಾಹಿತಿ ಹಕ್ಕು ನಿರ್ವಹಣೆ (ಐಆರ್ಎಂ)

ಹೊಸ ಜಿಮೇಲ್‌ನಲ್ಲಿ ಮಾಹಿತಿ ಹಕ್ಕು ನಿರ್ವಹಣೆಯನ್ನು ಪರಿಚಯಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ನಿಮ್ಮ ಜಿಮೇಲ್‌ ಖಾತೆಗೆ ಬಂದಿರುವ ಸಂದೇಶಗಳನ್ನು ಫಾರ್ವಡ್ ಮಾಡಲು, ಕಾಪಿ ಮಾಡಲು, ಡೌನ್‌ಲೋಡ್‌ ಮಾಡಲು ಅಥವಾ ಪ್ರಿಂಟ್‌ಜೌಟ್ ತೆಗೆಯಲು ಸಾಧ್ಯವಿಲ್ಲ. ಅಂದರೆ, forward, copy, download, print ಆಯ್ಕೆಗಳನ್ನೇ ತೆಗೆದುಹಾಕುವ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗಿದೆ.

ವೆಬ್‌ ಗ್ರಾಹಕರಿಗೂ ಆಟೊ ರಿಪ್ಲೇ!

ವೆಬ್‌ ಗ್ರಾಹಕರಿಗೂ ಆಟೊ ರಿಪ್ಲೇ!

ಕಳೆದ ವರ್ಷ ಮೊಬೈಲ್‌ನಲ್ಲಿ ಜಿಮೇಲ್ ಬಳಸುವ ಗ್ರಾಹಕರಿಗಾಗಿ ಆಟೊ ರಿಪ್ಲೇ ಎಂಬ ಸೌಲಭ್ಯವನ್ನು ಗೂಗಲ್ ಪರಿಚಯಿಸಿದ್ದು ನಿಮಗೆಲ್ಲಾ ತಿಳಿದಿರಬಹುದು. ಇದೇ ಸೌಲಭ್ಯವನ್ನು ಈಗ ವೆಬ್‌ ಗ್ರಾಹಕರಿಗಾಗಿಯೂ ಪರಿಚಯಿಸಲಾಗಿದೆ. ಹಾಗಾಗಿ, ಈಗ ಡೆಸ್ಕ್‌ಟಾಪ್‌ನಲ್ಲೂ ಜಿಮೇಲ್ ನೊಟಿಫಿಕೇಷನ್ ನೋಡಬಹುದಾದ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ!

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ!

ಜಿಮೇಲ್ ಇನ್‌ಬಾಕ್ಸ್‌ನಲ್ಲಿನ ಬಹುಮುಖ್ಯವಾದ ಇಮೇಲ್‌ಗಳಿಗೆ ತಕ್ಷಣ ಸ್ಪಂದಿಸಲು, ಅಥವಾ ಪ್ರತಿಕ್ರಿಯೆ ಬರೆಯಲು ನೆರವಾಗುವಂತೆ 'ಕೃತಕ ಬುದ್ಧಿಮತ್ತೆ' ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ತಕ್ಷಣವೇ ಇಮೇಲ್‌ಗೆ ಪ್ರತಿಕ್ರಿಯಿಸಬಹುದಾಗಿದ್ದು, ಜಿಮೇಲ್ ಬಳಕೆದಾರರಿಗೆ ಭಾರೀ ಸಮಯ ಉಳಿಯುತ್ತದೆ.

ಹಲವು ಆಪ್‌ಗಳ ಬಳಕೆ!!

ಹಲವು ಆಪ್‌ಗಳ ಬಳಕೆ!!

ಹೊಸ ಜಿಮೇಲ್ ಬಲ ತುದಿಯಲ್ಲಿ ಕ್ಯಾಲೆಂಡರ್‌, ಟಾಸ್ಕ್ ಮತ್ತು ಥರ್ಡ್‌ಪಾರ್ಟಿ ಆಡ್‌ ಆನ್‌, ಬಿಸಿನೆಸ್‌ ಅಪ್ಲಿಕೇಷನ್‌ಗಳನ್ನು ಬಳಸಬಹುದಾದ ಆಯ್ಕೆ ನೀಡಲಾಗಿದೆ. ಇದರಿಂದ ಜಿಮೇಲ್ ಬಳಸುವ ಸಂದರ್ಭದಲ್ಲಿ ಈ ಎಲ್ಲಾ ಅಪ್ಲಿಕೇಷನ್ ಬಳಸಬಹುದು. ಇದಕ್ಕಾಗಿ ಪದೇ ಪದೇ ವೆಬ್‌ ಟ್ಯಾಬ್‌ ಬದಲಿಸುತ್ತಿರುವ ಅಗತ್ಯವಿಲ್ಲ.

Karnataka Election 2018: Chunavana app will find your booth in click - GIZBOT KANNADA
ಹಳೆಯದೇ ಚೆನ್ನಾಗಿದ್ದರೆ?

ಹಳೆಯದೇ ಚೆನ್ನಾಗಿದ್ದರೆ?

ಜಿಮೇಲ್‌ನ ಬಲತುದಿಯಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗೆ ಹೋದರೆ ಅಲ್ಲಿ ‘‘Try the new Gmail' ಎಂಬ ಆಯ್ಕೆಯನ್ನು ನೀಡಲಾಗಿದೆ. ಇದರ ಮೇಲೆ ಕ್ಲಿಕ್‌ ಮಾಡುವ ಮೂಲಕ ಹೊಸ ಜಿಮೇಲ್ ಪುಟ ಪ್ರವೇಶಿಸಬಹುದು. ಹೊಸತು ಇಷ್ಟವಾದರೆ ಸರಿ. ಹಳೆಯದೇ ಚೆನ್ನಾಗಿದೆ ಎನ್ನುವವರಿಗೆ, ‘Go back to classic Gmail' ಎಂಬ ಆಯ್ಕೆಯನ್ನು ನೀಡಲಾಗಿದೆ.

Best Mobiles in India

English summary
Inboxes can be stressful places. Ahead of Google's launch of its new Gmail, these are the ways you can master your inbox with extensions. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X