ನಾವು ನಿರ್ಲಕ್ಷಿಸುವ ಲಿಂಕ್ಡ್ಇನ್ ಫೀಚರ್ಗಳು ಇವು.

By Tejaswini P G

  ಲಿಂಕ್ಡ್ಇನ್ ಜಗತ್ತಿನ ಅತಿ ದೊಡ್ಡ ವೃತ್ತಿಪರ ಆಧಾರಿತ ಪ್ಲ್ಯಾಟ್ಫಾರ್ಮ್ ಆಗಿದ್ದು ಅನೇಕ ಸೇಲ್ಸ್ ಪ್ರತಿನಿಧಿಗಳನ್ನು, ವ್ಯಾಪಾರಿಗಳನ್ನು ಜೋಡಿಸುತ್ತದಲ್ಲದೆ ನಿಮ್ಮ ನೆಚ್ಚಿನ ಬಿಸ್ನೆಸ್ ವೈತ್ತಿಪರರನ್ನು ಫಾಲೋ ಮಾಡಲು ಇದು ಸಹಕಾರಿಯಾಗಿದೆ.

  ನಾವು ನಿರ್ಲಕ್ಷಿಸುವ ಲಿಂಕ್ಡ್ಇನ್ ಫೀಚರ್ಗಳು ಇವು.

  ಹೆಚ್ಚಿನ ಮಂದಿ ಹೊಸ ಉದ್ಯೋಗ ಅರಸಲು ಅಥವಾ ಇತರರನ್ನು ಕೆಲಸಕ್ಕೆ ನಿಯೋಗಿಸುವ ಸಲುವಾಗಿ ಲಿಂಕ್ಡ್ಇನ್ ಗೆ ಭೇಟಿ ನೀಡುತ್ತಾರೆ.

  ನೀವು ಕೂಡ ಇದೇ ಗುಂಪಿಗೆ ಸೇರಿದವರಾಗಿದ್ದಲ್ಲಿ ಲಿಂಕ್ಡ್ಇನ್ ಈಗ ನೀಡುತ್ತಿರುವ ಹಲವಾರು ಉಪಯೋಗಗಳಿಂದ ನೀವು ವಂಚಿತರಾಗುತ್ತಿದ್ದೀರಿ.ಈ ಲೇಖನದಲ್ಲಿ ನೀವು ತಿಳಿದಿರಬೇಕಾದ ಲಿಂಕ್ಡ್ಇನ್ ನ ಹಲವು ಉಪಯುಕ್ತ ಫೀಚರ್ಗಳನ್ನು ನಿಮಗಾಗಿ ನಾವು ಸಂಪಾದಿಸಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕೀವರ್ಡ್ಗಳು

  ಸಾಮಾನ್ಯವಾಗಿ, ಕೀವರ್ಡ್ ಗಳನ್ನು ಬಳಸುವುದರಿಂದ ನಿಮ್ಮ SEO ಇನ್ನಷ್ಟು ಪರಿಣಾಮಕಾರಿಯಾಗುತ್ತದಲ್ಲದೆ ಲಿಂಕ್ಡ್ಇನ್ ನಲ್ಲಿ ನೀವು ಹೆಚ್ಚಾಗಿ ಕಾಣಸಿಗುತ್ತೀರಿ. ನೀವು ನಿಮ್ಮ ಪ್ರೊಫೈಲ್ ನ ಹೆಡ್ಲೈನ್, ಸಾರಾಂಶ, ಆಸಕ್ತಿಗಳು, ಜಾಬ್ ಟೈಟಲ್ಗಳು ಮತ್ತು ವಿವರಣೆಗಳು ಮತ್ತು ಪರಿಣಿತಿ ವಿಭಾಗಗಳಲ್ಲಿ ಕೀವರ್ಡ್ ಗಳನ್ನು ಬಳಸಬೇಕು. ಅಲ್ಲದೆ ನೀವು ಸಾರಾಂಶದಲ್ಲಿ ಬಳಸುವ ಕೀವರ್ಡ್ ಗಳು ನಿಮ್ಮ ಗುರಿ ಮತ್ತು ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬೇಕು.

  ಸವಿಸ್ತಾರ ವಿವರಣೆ ಪ್ರಕಟಿಸಿ

  ನಿಮ್ಮ ಬಗ್ಗೆ ಉತ್ತಮ ಚಿತ್ರಣವನ್ನು ನೀಡಲು ನಿಮ್ಮ ಕುರಿತಾಗಿ ವಿವರವಾದ ಬರವಣಿಗೆಯನ್ನು ತಯಾರಿಸಿ ಲಿಂಕ್ಡ್ಇನ್ ನಲ್ಲಿ ಪ್ರಕಟಿಸಿ. ನಿಮ್ಮ ಪ್ರೊಫೈಲ್ನಲ್ಲಿ ನಿಮ್ಮ ಲೇಖನಗಳನ್ನು ಪ್ರಕಟಿಸಲು ಅನುವು ಮಾಡಿಕೊಡುವ ಯಾವುದೇ ಸರಳವಾದ ಎಡಿಟರ್ ಅನ್ನು ನೀವು ಇದಕ್ಕಾಗಿ ಬಳಸಬಹುದು. ಈ ಮೂಲಕ ನಿಮ್ಮ ಕುರಿತು ವಿವರಣೆಯನ್ನು ನಿಮ್ಮ ಲಿಂಕ್ಡ್ಇನ್ ಕನೆಕ್ಷನ್ಗಳು ಮಾತ್ರವಲ್ಲದೆ ಇತರರೂ ನೋಡಬಹುದಾಗಿದೆ.

  ವೃತ್ತಿಪರ ಗ್ಯಾಲರಿ ಸೃಷ್ಟಿಸಿ

  ಲಿಂಕ್ಡ್ಇನ್ ನಲ್ಲಿ ನಿಮ್ಮ ಪ್ರೊಫೈಲ್ ಎದ್ದುಕಾಣುವಂತೆ ಮಾಡಲು ನಿಮ್ಮದೇ ಪೋರ್ಟ್ಫೋಲಿಯೋ ತಯಾರಿಸಿ. ಪ್ರಾಜೆಕ್ಟ್ ನ ವಿವರಣೆಗಳು, ಚಿತ್ರಗಳು, ವೀಡಿಯೋ ಮತ್ತು ಸ್ಲೈಡ್ ಶೋ ಪ್ರೆಸೆಂಟೇಶನ್ ಗಳನ್ನು ಬಳಸಿ ಆಕರ್ಷಕ ಪೋರ್ಟ್ಫೋಲಿಯೋ ತಯಾರಿಸುವ ಮೂಲಕ ನಿಮ್ಮ ಪ್ರೊಫೈಲ್ ನ ವಿಶೇಷತೆಯನ್ನು ಹೆಚ್ಚಿಸಿ.

  ಏರ್‌ಟೆಲ್‌ನಿಂದ ದಿಟ್ಟ ನಿರ್ಧಾರ: ಇತರೆ ಟೆಲಿಕಾಂ ಕಂಪನಿಗಳಿಗಿಂತ ಅತೀ ಕಡಿಮೆ ಬೆಲೆಗೆ ಡೇಟಾ..!

  ಸರ್ಚ್ ಎಲರ್ಟ್ ಗಳನ್ನು ಸೇವ್ ಮಾಡಿ

  ಲಿಂಕ್ಡ್ಇನ್ ನ ಸರ್ಚ್ ಫೀಚರ್ ಮೂಲಕ ಹಲವು ಆಕರ್ಷಕ ಉದ್ಯೋಗಾವಕಾಶಗಳು ನಿಮಗೆ ಸಿಗಬಹುದು. ಆದರೆ ಅದು ನೀವೆಣಿಸಿದಷ್ಟು ಸುಲಭವಾಗಿಲ್ಲ. ಅದಕ್ಕಾಗಿ ನೀವು ನಿಮ್ಮ ಅಗತ್ಯಗಳಿಗೆ ಸರಿಯಾದ ಮಾಹಿತಿಯನ್ನು ಹುಡುಕುವ ಸಂದರ್ಭದಲ್ಲಿ ಸರ್ಚ್ ಪುಟದ ಬಲಬದಿಯಲ್ಲಿ ಸರ್ಚ್ ಎಲರ್ಟ್ ಬಟನ್ ಅನ್ನು ಸೃಷ್ಟಿಸಿ. ನಿಮ್ಮ ಆಯ್ಕೆಯ ಸೆಟ್ಟಿಂಗ್ ಗಳನ್ನು ಸೆಟ್ ಮಾಡಿ ನಂತರ ಸೇವ್ ಮಾಡಿ.

  ಗ್ರೂಪ್ ಗಳಿಗೆ ಸೇರಿ

  ನಿಮ್ಮ ಪ್ರೊಫೈಲ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಇನ್ನೊಂದು ಮಾರ್ಗವೆಂದರೆ ನಿಮ್ಮ ಉದ್ಯಮಕ್ಕೆ ಸಂಬಂಧಿಸಿದ ವೃತ್ತಿಪರರೊಡನೆ ಸಂಬಂಧ ಬೆಳೆಸುವುದು. ಇದಕ್ಕಾಗಿ ನೀವು ಲಿಂಕ್ಡ್ಇನ್ ನ ಗ್ರೂಪ್ ಗಳನ್ನು ಸೇರಬಹುದಲ್ಲದೆ ಸಮಾನ ಮನಸ್ಕರೊಡನೆ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಲಿಂಕ್ಡ್ಇನ್ ಬಳಕೆದಾರರು 50 ಗ್ರೂಪ್ ಗಳಲ್ಲಿ ಭಾಗಿಯಾಗಬಹುದು. ಗ್ರೂಪ್ ನಲ್ಲಿ ಇತರರ ಗಮನ ಸೆಳೆಯಲು ಉತ್ತಮ ಮಾಹಿತಿ ಪೋಸ್ಟ್ ಮಾಡುತ್ತಿರಿ ಮತ್ತು ಇತರರ ವಿಚಾರಗಳಿಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಿರಿ.

  ಇನ್ಸ್ಟೆಂಟ್ ಮೆಸೇಜಿಂಗ್

  ಲಿಂಕ್ಡ್ಇನ್ ನ ಚ್ಯಾಟ್ ವಿಜೆಟ್ ಬಳಸಿ ನೀವು ಇತರರಿಗೆ ಮೆಸೇಜ್ಗಳನ್ನು ಕಳುಹಿಸಬಹುದು. ನಿಮ್ಮ ಪರದೆಯ ಕೆಳಭಾಗದಲ್ಲಿ ಬಲಬದಿಯಲ್ಲಿರುವ ಮೆಸೇಜಿಂಗ್ ಬಟನ್ ಒತ್ತಿ ಮತ್ತು ನಿಮ್ಮ ಆಯ್ಕೆಯ ಕನೆಕ್ಷನ್ ಗಳೊಂದಿಗೆ ಚ್ಯಾಟ್ ಪ್ರಾರಂಭಿಸಿ.

  ನಿಮ್ಮ ಕನೆಕ್ಷನ್ ಗಳನ್ನು ಖಾಸಗಿಯಾಗಿರಿಸಿ

  ನಿಮ್ಮ ವಿರುದ್ಧ ಕಾರ್ಯನಿರ್ವಹಿಸುವವರಿಂದ ನಿಮ್ಮ ಕನೆಕ್ಷನ್ ಗಳನ್ನು ರಹಸ್ಯವಾಗಿ ಅಥವಾ ಖಾಸಗಿಯಾಗಿರಿಸಿ. ಇದಕ್ಕಾಗಿ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಆಂಡ್ ಪ್ರೈವೆಸಿ ಅನ್ನು ಆಯ್ಕೆಮಾಡಿ. ನಂತರ ಪ್ರೈವೆಸಿ ಟ್ಯಾಬ್ ಗೆ ಹೋಗಿ ," ಹೂ ಕ್ಯಾನ್ ಸೀ ಯುವರ್ ಕನೆಕ್ಷನ್ಸ್" ಮೇಲೆ ಕ್ಲಿಕ್ ಮಾಡಿ. ಇದನ್ನು "ಓನ್ಲಿ ಯೂ" ಗೆ ಬದಲಾಯಿಸಿ.

  ಎಕ್ಸ್ಟೆನ್ಶನ್ ಡೌನ್ಲೋಡ್ ಮಾಡಿ

  ನೀವು ಯಾವುದೇ ಹೊಸ ಉದ್ಯೋಗಾವಕಾಶಗಳನ್ನು ಕಳೆದು ಕೊಳ್ಳಲು ಬಯಸದಿದ್ದರೆ ಲಿಂಕ್ಡ್ಇನ್ ನ ಕ್ರೋಮ್ ಎಕ್ಸ್ಟೆನ್ಶನ್ ಅನ್ನು ತಪ್ಪದೇ ಡೌನ್ಲೋಡ್ ಮಾಡಿ. ಈ ಮೂಲಕ ನಿಮಗೆ ಯಾವುದೇ ಹೊಸ ನೋಟಿಫಿಕೇಶನ್ ಬಂದರೂ ನೀವು ತಕ್ಷಣ ಅದನ್ನು ತಿಳಿಯಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  LinkedIn is one of the worlds largest professional-oriented platform that connects millions of sales rep, marketers and you can also follow your favorite business professionals. Today, we have compiled a list of features that you should know about.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more