ಯೂಟ್ಯೂಬ್‌ನಲ್ಲಿ ಒಮ್ಮೆಯಾದರೂ ಈ ಫೀಚರ್ಸ್‌ ಬಳಕೆ ಮಾಡಿ ನೋಡಿ!

|

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬಹು ಬೇಡಿಕೆಯ ವಿಡಿಯೋ ಪ್ಲಾಟ್‌ಫಾರ್ಮ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನರು ಯೂಟ್ಯೂಬ್‌ ತಾಣದಲ್ಲಿ ಯಾವುದೇ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ ಜೊತೆಗೆ ಮಾಹಿತಿ ವಿಡಿಯೋ ರೂಪ ದಲ್ಲಿಯೂ ಸಿಗಲಿದೆ. ಇನ್ನು ಬಳಕೆದಾರರಿಗೆ ಅನುಕೂಲವಾಗಲೆಂದು ಯೂಟ್ಯೂಬ್‌ನಲ್ಲಿ ಕೆಲವು ಅತ್ಯುತ್ತಮ ಫೀಚರ್ಸ್‌ಗಳ ಆಯ್ಕೆ ಸಹ ಇದೆ. ಆದ್ರೆ ಅವುಗಳ ಬಗ್ಗೆ ಕೆಲವು ಬಳಕೆದಾರರಿಗೆ ತಿಳಿದಿರುವುದಿಲ್ಲ.

ಯೂಟ್ಯೂಬ್‌ ಸರ್ಚ್

ಹೌದು, ಯೂಟ್ಯೂಬ್‌ ಅಧಿಕ ಸಕ್ರಿಯ ಬಳಕೆದಾರರ ಬಳಗವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕೆಲವು ಅನುಕೂಲಕರ ಫೀಚರ್ಸ್‌ಗಳನ್ನು ಯೂಟ್ಯೂಬ್‌ ತಾಣ ಪಡೆದುಕೊಂಡಿದೆ. ಅವುಗಳಲ್ಲಿ ಡಾರ್ಕ್‌ಮೋಡ್ ಸೌಲಭ್ಯ, ವಿಡಿಯೊ ವೀಕ್ಷಣೆಗೆ ಹಲವು ಕೆಟಗೇರಿ ಆಯ್ಕೆ, ಹಿಸ್ಟರ್ ಕ್ಲಿಯರ್‌ ಮಾಡುವ ಆಯ್ಕೆ ಹೀಗೆ ಬಳಕೆದಾರಿಗೆ ಹಲವು ಫೀಚರ್ಸ್‌ಗಳನ್ನು ನೀಡಿದ್ದು, ಜೊತೆಗೆ ಸುರಕ್ಷತೆಯ ದೃಷ್ಠಿಯಿಂದಯೂ ಕೆಲವು ಫೀಚರ್ಸ್‌ಗಳನ್ನು ನೀಡಿದೆ. ಹಾಗಾದರೆ ಯೂಟ್ಯೂಬ್‌ನಲ್ಲಿ ನ ಕೆಲವು ವಿಶೇಷ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಯೂಟ್ಯೂಬ್‌ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡಿ

ಯೂಟ್ಯೂಬ್‌ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡಿ

ಯೂಟ್ಯೂಬ್‌ ಸರ್ಚ್‌ನಲ್ಲಿ ಏನೇ ಹುಡುಕಿದರೂ, ಅದು ಬೇರೊಬ್ಬರು ಸೋಡಿದಾಗ ಕಾಣದಂತೆ ಇಡಲು ಆಗಾಗಾ ಹಿಸ್ಟರಿ ಕ್ಲಿಯರ್ ಮಾಡುತ್ತಿರಿ. ಹಿಸ್ಟರಿ ಕ್ಲಿಯರ್ ಮಾಡಲು ಕೆಲವು ಸರಳ ಆಯ್ಕೆಗಳು ಇವೆ. ಪ್ರೊಫೈಲ್ ಚಿತ್ರ > ಸೆಟ್ಟಿಂಗ್‌ಗಳು > ಹಿಸ್ಟರಿ ಮತ್ತು ಗೌಪ್ಯತೆ > ಮತ್ತು ವಾಚ್ ಹಿಸ್ಟರಿ ಕ್ಲಿಯರ್ ನ್ಯಾವಿಗೇಟ್ ಮಾಡುವ ಮೂಲಕ ಹುಡುಕಾಟ ಹಿಸ್ಟರಿ ಡಿಲೀಟ್ ಮಾಡಬಹುದಾಗಿದೆ.

ಡಬಲ್-ಟ್ಯಾಪ್ ಟೈಮರ್

ಡಬಲ್-ಟ್ಯಾಪ್ ಟೈಮರ್

ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸುವಾಗ ವಿಡಿಯೊ ಫಾರ್ವರ್ಡ್ ಮಾಡಲು/ ಮುಂದಕ್ಕೆ ಹೋಗಲು ಈ ಆಯ್ಕೆ ಬಳಕೆ ಮಾಡಬಹುದಾಗಿದೆ. ಬಳಕೆದಾರರು 10 ಸೆಕೆಂಡುಗಳವರೆಗೆ ಫಾರ್ವರ್ಡ್‌ ಅಥವಾ ಬ್ಯಾಕ್‌ವರ್ಡ್ ಮಾಡಬಹುದಾಗಿದೆ. ಎರಡು ಬಾರಿ ಟ್ಯಾಪ್ ಮಾಡಬೇಕಿರುತ್ತದೆ. ಈ ಆಯ್ಕೆಯನ್ನು ಬೇಕಿದ್ದರೇ 5, 15, 20, 30 ಅಥವಾ 60 ಸೆಕೆಂಡುಗಳಿಗೆ ಬದಲಾಯಿಸಬಹುದು.

ವಿಡಿಯೊ ಲಿಂಕ್ ಶೇರ್ ಮಾಡಿ

ವಿಡಿಯೊ ಲಿಂಕ್ ಶೇರ್ ಮಾಡಿ

ಯೂಟ್ಯೂಬ್‌ ನಲ್ಲಿನ ವಿಡಿಯೊ ಲಿಂಕ್‌ಗಳನ್ನು ಬಳಕೆದಾರರು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಿಗೆ ಶೇರ್ ಮಾಡುವ ಆಯ್ಕೆ ಇದೆ. ಹಾಗೆಯೇ ವಿಡಿಯೊದಲ್ಲಿ ನಿರ್ದಿಷ್ಟ ಭಾಗವನ್ನು ವೀಕ್ಷಿಸಲು ಅನುವು ಮಾಡಲು URL ನಲ್ಲಿ ಸೆಟ್ ಮಾಡಬಹುದಾದ ಆಯ್ಕೆ ಇದೆ. ಉದಾಹರಣೆ: URL ಕೊನೆಯಲ್ಲಿ t = 1m45s (ವಿಡಿಯೊದ ನಿರ್ದಿಷ್ಟ ಭಾಗದ ಸಮಯ/ ಸೆಕೆಂಡ) ನಮೂದಿಸುವುದು.

Incognito ಮೋಡ್

Incognito ಮೋಡ್

ಯೂಟ್ಯೂಬ್‌ನಲ್ಲಿ ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ.

ಡೇಟಾ ಬಳಕೆ ಲಿಮಿಟ್ ಮಾಡುವ ಆಯ್ಕೆ

ಡೇಟಾ ಬಳಕೆ ಲಿಮಿಟ್ ಮಾಡುವ ಆಯ್ಕೆ

ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತಿದ್ದರೇ ಬಹುಬೇಗನೆ ಡೇಟಾ ಖಾಲಿಯಾಗುತ್ತದೆ ಎನ್ನುವವರು ಇದ್ದಾರೆ. ಹೀಗೆ ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೊ ವೀಕ್ಷಿಸುವಾಗ ಬಳಕೆ ಮಿತಿಗೊಳಿಸುವ ಆಯ್ಕೆಯನ್ನು ಬಳಸಬಹುದಾಗಿದೆ. ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವುದು > ಸೆಟ್ಟಿಂಗ್‌ಗಳು> ಸಾಮಾನ್ಯ > ಮೊಬೈಲ್ ಡೇಟಾ ಬಳಕೆಯನ್ನು ಮಿತಿಗೊಳಿಸಿ. ಇದು Wi-Fi ಗೆ ಸಂಪರ್ಕಗೊಂಡಾಗ ಮಾತ್ರ HD ವೀಡಿಯೊವನ್ನು ಸ್ಟ್ರೀಮ್ ಮಾಡುತ್ತದೆ.

Best Mobiles in India

English summary
These YouTube Features May Improve User Experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X