ಗೂಗಲ್‌ನ "ಫೈಲ್ಸ್ ಗೋ" ಆಪ್ ನಿಮ್ಮ ಫೋನಿನಲ್ಲಿ ಇರಲೇಬೇಕು!!..ಏಕೆ ಗೊತ್ತಾ?

ಸ್ಮಾರ್ಟ್‌ಫೋನಿನ ಮೆಮೊರಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸ್ಮಾರ್ಟ್‌ಪೋನ್ ಹ್ಯಾಂಗಿಂಗ್ ತೊಂದರೆಗೆ ಸಿಲುಕುತ್ತದೆ ಮತ್ತು ಫೋನಿನ ವೇಗವು ಕೂಡ ಕಡಿಮೆಯಾಗುತ್ತದೆ.

|

ಸ್ಮಾರ್ಟ್‌ಫೋನಿನ ಮೆಮೊರಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸ್ಮಾರ್ಟ್‌ಪೋನ್ ಹ್ಯಾಂಗಿಂಗ್ ತೊಂದರೆಗೆ ಸಿಲುಕುತ್ತದೆ ಮತ್ತು ಫೋನಿನ ವೇಗವು ಕೂಡ ಕಡಿಮೆಯಾಗುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್ ಬಳಕೆದಾರರ ಸಮಸ್ಯೆಗಳಲ್ಲಿಯೇ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಫೋನ್ ಮೆಮೊರಿ ನಿರ್ವಹಣೆ ಎನ್ನಬಹುದು.!!

ಆದರೆ, ಸ್ಮಾರ್ಟ್‌ಫೋನ್ ಮೆಮೊರಿ ಉಳಿಸುವುದು ಹೇಗೆ? ಎಂಬ ಪ್ರಶ್ನೆ ನಿಮಗೆ ಮೂಡಿದ್ದರೆ ನೀವು ಖಂಡಿತ ಗೂಗಲ್‌ನ "ಫೈಲ್ಸ್ ಗೋ" ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ!! ಏಕೆಂದರೆ, ಗೂಗಲ್‌ನ "ಫೈಲ್ಸ್ ಗೋ" ಆಪ್ ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿ ನಿರ್ವಹಣೆ ಮಾಡಲು ಹೆಚ್ಚು ಸಹಾಯಕಾರಿ ಆಪ್.!

 ಗೂಗಲ್‌ನ

ಹಾಗಾದರೆ, ಮೆಮೊರಿ ಉಳಿಸಲು ಗೂಗಲ್‌ನ "ಫೈಲ್ಸ್ ಗೋ" ಆಪ್ ಹೇಗಿದೆ? ಗೂಗಲ್‌ನ "ಫೈಲ್ಸ್ ಗೋ" ಆಪ್ ಬಳಕೆದಾರರಿಗೆ ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.! ಮತ್ತು ಅತ್ಯುತ್ತಮವಾದ ಗೂಗಲ್‌ನ "ಫೈಲ್ಸ್ ಗೋ" ಆಪ್ ಡೌನ್‌ಲೋಡ್ ಮಾಡಿ.!!

ಏನಿದು

ಏನಿದು "ಫೈಲ್ಸ್ ಗೋ" ಆಪ್?

ಸ್ಮಾರ್ಟ್‌ಫೋನ್ ಮೆಮೊರಿ ಎಷ್ಟಿದ್ದರೂ ಕೂಡ ಫೋನಿನ ಮೆಮೊರಿ ನಿರ್ವಹಣೆ ಬಹಳ ಅಗತ್ಯ.! ಹಾಗಾಗಿ, ಸ್ಮಾರ್ಟ್‌ಫೋನ್ ಫೋನ್ ಮೆಮೊರಿ ಎಷ್ಟು ಖಾಲಿಬಿಡಬೇಕು?, ಯಾವ ಆಪ್‌ಗಳನ್ನು ಮಾತ್ರ ಇಟ್ಟಿಕೊಳ್ಳಬೇಕು?, ಯಾವ ಆಪ್‌ ಎಷ್ಟು ಜಾಗವನ್ನು ತಿನ್ನುತ್ತದೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಆಪ್ ಈ "ಫೈಲ್ಸ್ ಗೋ".!!

ಸ್ಮಾರ್ಟ್‌ಫೋನ್ ಮೆಮೊರಿಯ ಬಗ್ಗೆ ಮಾಹಿತಿ!!

ಸ್ಮಾರ್ಟ್‌ಫೋನ್ ಮೆಮೊರಿಯ ಬಗ್ಗೆ ಮಾಹಿತಿ!!

ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಷ್ಟು ಬಳಸಲಾಗುತ್ತಿದೆ ಮತ್ತು ಫೋನ್ ಮೆಮೊರಿಯನ್ನು ಖಾಲಿ ಮಾಡಲು ಸಹಾಯ ಮಾಡುವ ಶಿಫಾರಸುಗಳನ್ನು ನೀಡುವ ಆಯ್ಕೆಯನ್ನು ಗೂಗಲ್‌ನ "ಫೈಲ್ಸ್ ಗೋ" ಆಪ್ ಮೂಲಕ ನೀಡಲಾಗಿದೆ.! ನಿಮ್ಮ ಫೋನ್ ಮೆಮೊರಿಯ ಬಗ್ಗೆ ಎಲ್ಲಾ ಮಾಹಿತಿಗಳನ್ನು ಈ ಆಪ್ ತಿಳಿಸಿಕೊಡುತ್ತದೆ.!!

ಅನಗತ್ಯ ಫೈಲ್‌ಗಳ ಬಗ್ಗೆ ಎಚ್ಚರಿಕೆ!!

ಅನಗತ್ಯ ಫೈಲ್‌ಗಳ ಬಗ್ಗೆ ಎಚ್ಚರಿಕೆ!!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅನಗತ್ಯ ಫೈಲ್‌ಗಳೇನಾದರೂ ಬೀಡುಬಿಟ್ಟಿದ್ದರೆ ಅದರ ಬಗ್ಗೆ "ಫೈಲ್ಸ್ ಗೋ" ಆಪ್ ಎಚ್ಚರಿಸುತ್ತದೆ. ನೀವು ಕಳೆದ 30 ದಿನಗಳಲ್ಲಿ ಬಳಸದಿರುವ ಅಪ್ಲಿಕೇಷನ್‌ಗಳು, ಅನಗತ್ಯ ಫೈಲ್ಗಳು, ಆಡಿಯೊ ಫೈಲ್ಗಳು ಅಥವಾ ನಕಲಿ ಫೈಲ್‌ಗಳ ಬಗ್ಗೆ "ಫೈಲ್ಸ್ ಗೋ" ಆಪ್ ನೋಟಿಫಿಕೇಷನ್‌ಗಳನ್ನು ನೀಡುತ್ತದೆ.!!

ಫೈಲ್ಸ್ ವೀವರ್!!

ಫೈಲ್ಸ್ ವೀವರ್!!

"ಫೈಲ್ಸ್ ಗೋ" ಆಪ್ ತೆರೆದರೆ ಆಪ್ ಕೆಳಗೆ ಬಲಭಾಗದಲ್ಲಿ ಫೈಲ್ಸ್ ಎಂಬ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯಲ್ಲಿ ಸ್ಮಾರ್ಟ್‌ಫೋನಿನ ಪ್ರತಿಯೊಂದು ಫೈಲ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಯಾವ ಪೈಲ್ ಎಷ್ಟು ಗಾತ್ರದಲ್ಲಿದೆ ಎಂಬುದನ್ನು ನೋಡಿ ನೇರವಾಗಿ ಆ ಫೈಲನ್ನು ಡಿಲೀಟ್ ಮಾಡಬಹುದಾಗಿದೆ.!!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

"ಫೈಲ್ಸ್ ಗೋ" ಸೆಟ್ಟಿಂಗ್ಸ್!!

"ಫೈಲ್ಸ್ ಗೋ" ಆಪ್ ಸೆಟ್ಟಿಂಗ್ಸ್ ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ. ಲೋ ಸ್ಟೋರೇಜ್, ಡೌನ್‌ಲೋಡ್ ಫೈಲ್ಸ ಮತ್ತು ಲಾರ್ಜ್ ಸ್ಟೋರೇಜ್ ಫೋಲ್ಡರ್‌ ಹೀಗೆ ಹಲವು ಆಯ್ಕೆಗಳ ಬಗ್ಗೆ ಅಧಿಸೂಚನೆಗಳನ್ನು ಕಳುಹಿಸುವ ಸೆಟ್ಟಿಂಗ್ಸ್ ಅನ್ನು "ಫೈಲ್ಸ್ ಗೋ" ಆಪ್ ಸೆಟ್ಟಿಂಗ್ಸ್ ಮೂಲಕ ಮಾಡಬಹುದಾಗಿದೆ.!

ಬೆಂಗಳೂರಿನಲ್ಲಿ ಮೊದಲ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ!!..ಚಾರ್ಜಿಂಗ್ ದರ ಎಷ್ಟು ಗೊತ್ತಾ?ಬೆಂಗಳೂರಿನಲ್ಲಿ ಮೊದಲ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ!!..ಚಾರ್ಜಿಂಗ್ ದರ ಎಷ್ಟು ಗೊತ್ತಾ?

Best Mobiles in India

English summary
One of Google's latest Android apps helps manage storage, easily share files on your phone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X