Home
Apps

ಅಸ್ತಮಾ ನಿಯಂತ್ರಣಕ್ಕೆ ಮೊಬೈಲ್‌ ಆಪ್‌ ಸಹಾಯ..!

By Gizbot Bureau

ಮೊಬೈಲ್‌ ಅನ್ವೇಷಣೆಯಿಂದ ಆರೋಗ್ಯ, ಕೃಷಿ, ವಿಜ್ಞಾನ, ಕ್ರೀಡೆ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಹೌದು, ಈಗ ಮೊಬೈಲ್‌ ಆಪ್‌ ಸಹಾಯದಿಂದ ಅನಿಯಂತ್ರಿತ ಅಸ್ತಮಾವನ್ನು ನಿರ್ವಹಣೆ ಮಾಡಬಹುದಾಗಿದೆ. ಈ ಆಪ್‌ ಶ್ವಾಸಕೋಶದ ಕಾರ್ಯವನ್ನು ಮಾಪನ ಮಾಡಿ ವೈದ್ಯರು ನೀಡುವ ಚಿಕಿತ್ಸೆಯನ್ನು ಸ್ವಯಂಚಾಲಿತವಾಗಿ ಶಿಫಾರಸು ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಸಮರ್ಪಕ ನಿರ್ವಹಣೆ

ಅನಿಯಂತ್ರಿತ ಅಸ್ತಮಾದಿಂದ ಬಳಲುತ್ತಿರುವ ಜನರು ಉಸಿರಾಟದ ತೊಂದರೆ ಅಥವಾ ಅಸ್ತಮಾ ದಾಳಿಯನ್ನು ಅನುಭವಿಸುತ್ತಾರೆ. ಅಸಮರ್ಪಕ ನಿರ್ವಹಣೆ ಅಥವಾ ಔಷಧಿಗಳ ಅಸಮರ್ಪಕ ಬಳಕೆಯು ಈ ಪರಿಸ್ಥಿತಿಯನ್ನು ಸೃಷ್ಟಿಸಿರುತ್ತದೆ. ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ನಡೆಸಿದ ಅಧ್ಯಯನವು ಶ್ವಾಸಕೋಶದ ಕಾರ್ಯ ಮತ್ತು ಮೊಬೈಲ್ ಫೋನ್‌ನಲ್ಲಿನ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆಯ ಹೊಂದಾಣಿಕೆ ಮಾಡುವ ಅಲ್ಗಾರಿದಮ್ ಅನಿಯಂತ್ರಿತ ಆಸ್ತಮಾವನ್ನು ನಿರ್ವಹಿಸುವಲ್ಲಿ ಸಮರ್ಥ ಸಾಧನವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ.

ವೈರ್‌ಲೆಸ್‌ ಸ್ಪಿರೋಮೀಟರ್ ಬಳಕೆ

ವೈರ್‌ಲೆಸ್‌ ಸ್ಪಿರೋಮೀಟರ್ ಬಳಕೆ

ಶ್ವಾಸಕೋಶದ ಕ್ರಿಯೆಯ ಮಾಪನಕ್ಕಾಗಿ, ಫೋನ್‌ನ್ನು ವೈರ್‌ಲೆಸ್ ಸ್ಪಿರೋಮೀಟರ್‌ಗೆ ಸಂಪರ್ಕಿಸಲಾಗಿರುತ್ತದೆ. ಉಸಿರಾಟದ ಲಕ್ಷಣಗಳನ್ನು ನೋಂದಾಯಿಸುವ ಈ ಆಪ್, ಚಿಕಿತ್ಸೆಯ ಬಗ್ಗೆ ದೃಶ್ಯ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಯುರೋಪಿಯನ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧಕರು ತಿಳಿಸಿದ್ದಾರೆ.

ಅಸ್ತಮಾ ಟ್ಯೂನರ್ ಸಹಾಯ

ಅಸ್ತಮಾ ಟ್ಯೂನರ್ ಸಹಾಯ

"ಅಸ್ತಮಾ ಟ್ಯೂನರ್" ಎಂಬ ವ್ಯವಸ್ಥೆ ಅಸ್ತಮಾ-ಆರೈಕೆ ಮಾರ್ಗಸೂಚಿಗಳಿಗೆ ಅನುಗುಣವಾಗಿ ಶ್ವಾಸಕೋಶದ ಕಾರ್ಯ ಮತ್ತು ರೋಗ ಲಕ್ಷಣಗಳನ್ನು ವಿಶ್ಲೇಷಿಸುತ್ತದೆ ಎಂದು ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧನಾ ಸಮೂಹದ ನಾಯಕ ಜಾರ್ನ್ ನಾರ್ಡ್‌ಲಂಡ್ ಹೇಳಿದ್ದಾರೆ.

ಔಷಧಿಗಳ ನಿರ್ವಹಣೆ

ಔಷಧಿಗಳ ನಿರ್ವಹಣೆ

ಬಳಕೆದಾರರು ಬಳಸಬೇಕಾದ ಇನ್‌ಹೇಲರ್‌ ಚಿತ್ರವನ್ನು ಸಹ ಆಪ್‌ನಲ್ಲಿ ಸ್ವೀಕರಿಸುತ್ತಾರೆ. ಔಷಧಿಗಳ ನಿರ್ವಹಣೆಯ ಸೂಚನೆ ಪಡೆಯುತ್ತಾರೆ ಮತ್ತು ಔಷಧಿಯ ಪ್ರಮಾಣವನ್ನು ಹೆಚ್ಚಿಸಬೇಕೇ ಅಥವಾ ಕಡಿಮೆ ಮಾಡಬೇಕೆ ಎಂಬ ಶಿಫಾರಸುಗಳನ್ನು ಆಪ್‌ ನೀಡುತ್ತದೆ ಎಂದು ನಾರ್ಡ್‌ಲಂಡ್‌ ಹೇಳುತ್ತಾರೆ.

77 ಜನರ ಮೇಲೆ ಅಧ್ಯಯನ

77 ಜನರ ಮೇಲೆ ಅಧ್ಯಯನ

ಮೊಬೈಲ್ ಟೆಲಿಫೋನ್ ಆಪ್‌ಗೆ ಸಂಪರ್ಕಗೊಂಡಿರುವ ವೈರ್‌ಲೆಸ್ ಸ್ಪಿರೋಮೀಟರ್ ಮೂಲಕ ಶ್ವಾಸಕೋಶದ ಕಾರ್ಯವನ್ನು ಅಳೆಯಲು ಆಸ್ತಮಾ ಟ್ಯೂನರ್ ಸಹಾಯ ಮಾಡುತ್ತದೆ. ಈ ಅಧ್ಯಯನವು 6 ವರ್ಷ ಮೇಲ್ಪಟ್ಟ 77 ಅನಿಯಂತ್ರಿತ ಆಸ್ತಮಾ ಪೀಡಿತರನ್ನು ಒಳಗೊಂಡಿದ್ದು, ಇವರಲ್ಲಿ ಅರ್ಧದಷ್ಟು ಮಕ್ಕಳು ಮತ್ತು ಹದಿಹರೆಯದವರಾಗಿದ್ದಾರೆ.

ಡಿಜಿಟಲ್‌ ಆರೈಕೆ

ಡಿಜಿಟಲ್‌ ಆರೈಕೆ

ಸಾಂಪ್ರದಾಯಿಕ ಆರೈಕೆಗಿಂತ ಡಿಜಿಟಲ್ ಉಪಕರಣದಿಂದ ಅಸ್ತಮಾ ರೋಗ ಹೆಚ್ಚು ಸುಧಾರಿಸಿದೆ ಎಂದು ನಾವು ನೋಡಬಹುದು. ವಯಸ್ಕ ರೋಗಿಗಳು ವಾರಕ್ಕೊಮ್ಮೆಯಾದರೂ ಉಪಕರಣ ಬಳಸುತ್ತಾರೆ ಮತ್ತು ಅವರು ಔಷಧಿ ತೆಗೆದುಕೊಳ್ಳುವುದನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಾರೆ ಎಂದು ನಾರ್ಡ್‌ಲಂಡ್ ಹೇಳಿದ್ದಾರೆ.

Best Mobiles in India

English summary
This App Will Help Asthma Patients To Manage Uncontrolled Asthma
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+