ಗೂಗಲ್ ನಿಂದ ಸ್ಮಾರ್ಟ್ ಫೋನ್ ಡಿಸ್ಪ್ಲೇ ಕ್ಲೀನ್ ಮಾಡುವ ಆಪ್

By Gizbot Bureau
|

ಗೂಗಲ್ ಈ ವರ್ಷ ಎರಡು ಎಫ್ರಿಲ್ ಫೂಲ್ ಪ್ರ್ಯಾಂಕ್ ಮಾಡಿದೆ.ಗೂಗಲ್ ಮ್ಯಾಪ್ ಆಪ್ ನಲ್ಲಿ ಕಂಪೆನಿಯು ಕ್ಲಾಸಿಕ್ ಆರ್ಕೇಡ್ ಗೇಮ್ ಸ್ನೇಕ್ ನ್ನು ಪರಿಚಯಿಸಿದೆ ಮತ್ತು ಹೊಸದಾಗಿ ಸ್ಕ್ರೀನ್ ಕ್ಲೀನರ್ ಫೀಚರ್ ನ್ನು ತನ್ನ ಫೈಲ್ಸ್ ಗೋ ಆಪ್ ನಲ್ಲಿ ಬಿಡುಗಡೆಗೊಳಿಸಿದೆ.

ಕೊಳೆ, ಕೀಟ, ಧೂಳು ತೆಗೆಯುವ ಆಪ್ :

ಕೊಳೆ, ಕೀಟ, ಧೂಳು ತೆಗೆಯುವ ಆಪ್ :

ಕಂಪೆನಿಯು ಹೊಸ ಫೀಚರ್ ಗಳನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಪರಿಚಯಿಸಿದ್ದು ಇದು ಹೊರಗಡೆಯಿಂದ ತಮ್ಮ ಸ್ಮಾರ್ಟ್ ಫೋನ್ ನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಹೊಸ ಫೀಚರ್ ನ ಹೆಸರಾಗಿರುವ ಸ್ಕ್ರೀನ್ ಕ್ಲೀನರ್ ನಿಮ್ಮ ಸ್ಮಾರ್ಟ್ ಫೋನ್ ಡಿಸ್ಪ್ಲೇಯಲ್ಲಿರುವ ಕೊಳೆ ಮತ್ತು ಕೀಟಗಳನ್ನು ತೆಗೆಯುವುದಕ್ಕೆ ಸಹಕಾರಿಯಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ಡಿಸ್ಪ್ಲೇಯಲ್ಲಿರುವ ಧೂಳು, ಕೊಳೆ ಮತ್ತು ಇತರೆ ಅನಗತ್ಯ ವಸ್ತುಗಳನ್ನು ತೆಗೆಯುವುದಕ್ಕೆ ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳುತ್ತದೆ.

ವೀಡಿಯೋ ಸಹಿತ ವಿವರಣೆ:

ಹೊಸ ಫೀಚರ್ ಬಗ್ಗೆ ಕಂಪೆನಿಯು ವೀಡಿಯೋ ಸಹಿತ ವಿವರಣೆಯನ್ನು ಕೂಡ ನೀಡಿದೆ.ಗೂಗಲ್ ಸ್ಮಾಡ್ಜ್ ಡಿಟೆಕ್ಟರ್ ಎಪಿಐ ನ್ನು ಗುರುತಿಸಿದ್ದು ಇದು ಡರ್ಟ್ (ಕೊಳೆ) ಮತ್ತು ಸ್ಮಾಡ್ಜ್ ಗಳನ್ನು ಡಿಸ್ಪ್ಲೇಯಿಂದ ತೆಗೆಯಲು ಸಹಕಾರಿಯಾಗಿದೆ. ಒಮ್ಮೆ ಗುರುತಿಸಿದ ನಂತರ ಮೈಕ್ರೋ ಚಲನೆಯ ಮೂಲಕ ಅವುಗಳನ್ನು ಟಾರ್ಗೆಟ್ ಮಾಡಲಾಗುತ್ತದೆ ಮತ್ತು ಸ್ಕ್ರೀನಿನಿಂದ ಅವುಗಳನ್ನು ತೆಗೆಯಲಾಗುತ್ತದೆ. ಒಮ್ಮೆ ಮುಗಿದ ನಂತರ ಈ ಫೀಚರ್ ಫೋನಿನ ವೈಬ್ರೇಟಿಂಗ್ ಮೋಟರ್ ನ್ನು ಬಳಸಿಕೊಳ್ಳುತ್ತದೆ ಮತ್ತು ಹಾಪ್ಟಿಕ್ ಕಂಟ್ರೋಲ್ ಮೂಲಕ ಮ್ಯಾಕ್ರೋ ವೈಬ್ರೇಷನ್ ಸೃಷ್ಟಿಸಿ ಅದರ ಮೂಲಕ ನಾನ್ ಸ್ಟಿಕ್ ಶೀಲ್ಡ್ ನ್ನು ಡಿವೈಸ್ ಸುತ್ತ ನಿರ್ಮಿಸುತ್ತದೆ ಮತ್ತು ನಿಮ್ಮ ಫೋನ್ ನ್ನು ಸ್ವಚ್ಛವಾಗಿ ಇಡುತ್ತದೆ.

ಫೀಚರ್ ಬಳಕೆ:

ಫೀಚರ್ ಬಳಕೆ:

ಇದನ್ನು ಬಳಸಲು ನಿಮ್ಮ ಆಪ್ ಅಪ್ ಡೇಟೆಡ್ ವರ್ಷನ್ ಆಗಿರಬೇಕು. ಫೈಲ್ಸ್ ಆಪ್ ನ್ನು ತೆರೆದ ಕೂಡಲೇ ನೀವು ಸ್ಕ್ರೀನ್ ಕ್ಲೀನರ್ ಆಯ್ಕೆಯನ್ನು ಗಮನಿಸುತ್ತೀರಿ ಮತ್ತು ಆದರಲ್ಲಿ ಆಕ್ಟಿವೇಟ್ ಬಟನ್ ಕೂಡ ಇರುತ್ತದೆ. ಆಕ್ಟಿವೇಟ್ ಬಟನ್ ನ್ನು ಕ್ಲಿಕ್ಕಿಸಿದ ನಂತರ ಈ ಫೀಚರ್ ಆಕ್ಟಿವೇಟ್ ಆಗುತ್ತದೆ ಮತ್ತು ಕ್ಲೀನ್ ಅಪ್ ಪ್ರೊಸೆಸ್ ಆರಂಭವಾಗುತ್ತದೆ. ಒಮ್ಮ ಮುಗಿದ ನಂತರ ನಿಮ್ಮ ಸ್ಕ್ರೀನಿನಲ್ಲಿ ಸ್ಪಾರ್ಕ್ಲಿಂಗ್ ಕ್ಲೀನ್ ಎಂಬ ಮೆಸೇಜ್ ನ್ನು ನೀವು ಕಾಣಬಹುದು.

ಯಾವುದರಲ್ಲಿ ಕೆಲಸ?

ಯಾವುದರಲ್ಲಿ ಕೆಲಸ?

ಈ ಫೀಚರ್ ಕಂಪೆನಿಯ 2017 ರಲ್ಲಿ ಪರಿಚಿತಗೊಂಡಿರುವ ಫೈಲ್ಸ್ ಗೋ ಆಪ್ ನ ಭಾಗವಾಗಿದೆ. ಈ ಆಪ್ ಆಂಡ್ರಾಯ್ಡ್ 5.0 ಮತ್ತು ಮೇಲಿನ ಎಲ್ಲಾ ವರ್ಷನ್ನಿನ ಆಂಡ್ರ್ಯಾಡ್ ಗಳಲ್ಲಿ ಕಂಪ್ಯಾಟೆಬಲ್ ಆಗಿದೆ. ಈ ಆಪ್ ನ್ನು ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಆರ್ಗನೈಜ್ ಮಾಡುವುದಕ್ಕಾಗಿ ಬಳಕೆ ಮಾಡಬಹುದು.

ನೆನಪಿಡಿ.. ಇದು ಎಪ್ರಿಲ್ ಫೂಲ್!

Best Mobiles in India

Read more about:
English summary
This April Fool's day, Google is 'offering' to clean your smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X