ಗೂಗಲ್ ಪ್ಲೇ ಸ್ಟೋರಿನಲ್ಲಿ ‘ಮೇಡ್ ಫಾರ್ ಇಂಡಿಯಾ’ ಆಯ್ಕೆ.!

ಇದು ಭಾರತೀಯ ಬಳಕೆದಾರರಿಗೆ ಸಹಾಯ ಮಾಡಲಿದ್ದು, ಆಪ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡಲಿದೆ. ಇದು ಭಾರತೀಯ ಡೆವಲಪರ್ ಗಳಿಗೂ ಸಹಾಯವಾಗಲಿದ್ದು, ತಮ್ಮ ಸ್ಥಳೀಯ ಬಿಸನೆಸ್ ಅನ್ನು ಅಭಿವೃದ್ಧಿ ಮಾಡಿಕೊಳ್ಳಬಹುದಾಗಿದೆ.

By Lekhaka
|

ಬೆಂಗಳೂರಿನಲ್ಲಿ ನಡೆದ ಮೊದಲ ಆಪ್ ಏಕ್ಸಲೆನ್ಸ್ ಸಬ್ ಮಿಟ್ ಫಾರ್ ಡೆವಲಪರ್ಸ್ ನಲ್ಲಿ ಗೂಗಲ್ ಭಾರತದಲ್ಲಿ ನಿರ್ಮಿಸಿದ ಮತ್ತು ಭಾರತಕ್ಕಾಗಿಯೇ ನಿರ್ಮಿಸಿದ ಆಪ್ ಗಳಿಗಾಗಿ ಮೇಡ್ ಫಾರ್ ಇಂಡಿಯಾ ಎನ್ನುವ ಕ್ಯಾಟಗಿರಿಯನ್ನು ನಿರ್ಮಿಸುವುದಾಗಿ ತಿಳಿಸಿದ್ದು, ಇಲ್ಲಿ ಭಾರತದಲ್ಲಿ ಬಳಕೆ ಮಾಡಿಕೊಳ್ಳಲು ಸೂಕ್ತವಾದ ಆಪ್ ಗಳನ್ನು ಮಾತ್ರವೇ ನೀಡಲಿದೆ.

ಗೂಗಲ್ ಪ್ಲೇ ಸ್ಟೋರಿನಲ್ಲಿ ‘ಮೇಡ್ ಫಾರ್ ಇಂಡಿಯಾ’ ಆಯ್ಕೆ.!

ಇದು ಭಾರತೀಯ ಬಳಕೆದಾರರಿಗೆ ಸಹಾಯ ಮಾಡಲಿದ್ದು, ಆಪ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡಲಿದೆ. ಇದು ಭಾರತೀಯ ಡೆವಲಪರ್ ಗಳಿಗೂ ಸಹಾಯವಾಗಲಿದ್ದು, ತಮ್ಮ ಸ್ಥಳೀಯ ಬಿಸನೆಸ್ ಅನ್ನು ಅಭಿವೃದ್ಧಿ ಮಾಡಿಕೊಳ್ಳಬಹುದಾಗಿದೆ.

ಗೇಮ್ ಮತ್ತು ಆಪ್ಲಿಕೇಷನ್ ಗಳಿಗೆ ಇದು ಅನ್ವಯವಾಗಲಿದ್ದು, ದೇಶದಲ್ಲಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಸಹಾಯ ಮಾಡುವ ಸಲುವಾಗಿ ಗೂಗಲ್ ಈ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ. ಇದಲ್ಲದೇ ಈ ಆಪ್ ಗಳು ಕಡಿಮೆ ಸ್ಪೀಡ್ ಹೊಂದಿರುವ ನೆಟ್ ವರ್ಕ್ನಲ್ಲಿಯೂ ಕಾರ್ಯನಿರ್ವಹಿಸುವಂತೆ ಮಾಡುವ ಪ್ಲಾನ್ ಮಾಡುತ್ತಿದೆ.

ಅಲ್ಲದೇ ಈ ಆಪ್ ಗಳನ್ನು ಕಡಿಮೆ ಗಾತ್ರದಲ್ಲಿ ಹೆಚ್ಚು ಕಾರ್ಯದಕ್ಷಯೆಯಿಂದ ಕೂಡಿರುವಂತೆ ಮಾಡುವ ಗುರಿಯನ್ನು ಗೂಗಲ್ ಹೊಂದಿದ್ದು, ಆಲ್ಲದೇ ಕೆಲವು ಆಪ್ ಗಳನ್ನು ಆಫ್ ಲೈನಿನಲ್ಲಿಯೂ ಕಾರ್ಯನಿರ್ವಹಿಸುವಂತೆ ಮಾಡುವ ಯೋಜನೆಯನ್ನು ಗೂಗಲ್ ಹೊಂದಿದೆ ಎನ್ನಲಾಗಿದೆ.

ಜಿಯೋ ಫೋನ್‌ನಲ್ಲಿ ಏನಿದೆ-ಏನಿಲ್ಲ ಕುರಿತ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.!ಜಿಯೋ ಫೋನ್‌ನಲ್ಲಿ ಏನಿದೆ-ಏನಿಲ್ಲ ಕುರಿತ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.!

ಭಾರತೀಯರಿಗಾಗಿಯೇ ಆಪ್ ಗಳನ್ನು ನಿರ್ಮಿಸಲು ಗೂಗಲ್ ಉತ್ಸುಕವಾಗಿದ್ದು, ವ್ಯಾಲೆಟ್ ಸೇರಿದಂತೆ ಹೆಚ್ಚು ಬಳಸುವ ಆಪ್ ಗಳನ್ನು ಹೆಚ್ಚು ಚಾಲ್ತಿಗೆ ತರುವುದಲ್ಲದೇ ಹೆಚ್ಚಿನ ಸುರಕ್ಷತೆಯನ್ನು ನೀಡುವುದೇ ಗೂಗಲ್ ಆಶಯವಾಗಿದೆ ಎನ್ನಲಾಗಿದೆ. ದಿನದಿಂದ ದಿನಕ್ಕೆ ಭಾರತೀಯರ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿರುವುದೇ ಕಾರಣ.

Best Mobiles in India

Read more about:
English summary
Google Play store has a new category for apps which is just for indian users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X