ಡಬ್‌ಸ್ಮ್ಯಾಶ್ ಕಲಾವಿದರ ರೀತಿ ಫೋನ್‌ನಲ್ಲಿಯೇ ವಿಡಿಯೋ ಎಡಿಟ್ ಮಾಡುವುದು ಹೇಗೆ!!?

By: Precilla Dias

ಇಂದು ಸ್ಮಾರ್ಟ್ ಫೋನ್ ಎಂಬುವುದು ಕೇವಲ ಫೋನ್ ಮಾಡಲು ಇಲ್ಲವೇ ಮೇಸೆಜ್ ಮಾಡಲು ಮಾತ್ರವೇ ಬಳಕೆ ಮಾಡುವ ಕಾಲವೂ ಹೊಯಿತು. ಇಂದಿನ ಸ್ಮಾರ್ಟ್ ಫೋನ್ ಗಳು ಅಂಗೈನಲ್ಲಿರುವ ಪ್ರಪಂಚವಾಗಿದೆ. ಇದೇ ಮಾದರಿಯಲ್ಲಿ ಇಂದು ಸ್ಮಾರ್ಟ್ ಫೋನ್ ಗಳು ಫೋಟೊ ತೆಗೆಯಲು ಮತ್ತು ವಿಡಿಯೋ ಮಾಡಲು ಸಹ ಬಳಕೆ ಮಾಡಲಾಗುತ್ತಿದೆ.

ಡಬ್‌ಸ್ಮ್ಯಾಶ್ ಕಲಾವಿದರ ರೀತಿ ಫೋನ್‌ನಲ್ಲಿಯೇ ವಿಡಿಯೋ ಎಡಿಟ್ ಮಾಡುವುದು ಹೇಗೆ!!?

ಅದಕ್ಕಾಗಿ ಇಂದು ಮಾರುಕಟ್ಟೆಯಲ್ಲಿ ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬಂದಿವೆ. ಈ ಹಿನ್ನಲೆಯಲ್ಲಿ ಮೊಬೈಲ್ ನಲ್ಲಿ ಫಿಲ್ಮ್ ಮೇಕಿಂಗ್ ಮಾಡಲು ಲಭ್ಯವಿರುವ ಟಾಪ್ ಆಪ್ ಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಡೋಬ್ ಪ್ರಿಮಿಯರ್ ಕ್ಲಿಪ್:

ಆಡೋಬ್ ಪ್ರಿಮಿಯರ್ ಕ್ಲಿಪ್:

ಫೋಟೋ ಮತ್ತು ವಿಡಿಯೋ ಎಡಿಟಿಂಗ್ ನಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಆಡೋಬ್ ಮೊಬೈಲ್ ನಲ್ಲಿ ವಿಡಿಯೋ ಎಡಿಟ್ ಮಾಡುವ ಸಲುವಾಗಿ ಆಡೋಬ್ ಪ್ರಿಮಿಯರ್ ಕ್ಲಿಪ್ ಆಪ್ ಬಿಡುಗಡೆ ಮಾಡಿದೆ. ಇದು ಇಮೇಜ್ ಗಳನ್ನು ಬಳಸಿಕೊಂಡು ವಿಡಿಯೋ ಮಾಡಲು ಶಕ್ತವಾಗಿದೆ. ಅಲ್ಲದೇ ವಿಡಿಯೋಗಳನ್ನು ಸ್ಲೋಮೊಷನ್ ಮಾದರಿಯಲ್ಲಿ ಮಾಡಲಿದೆ. ಇಲ್ಲಿ ಎಡಿಟ್ ಮಾಡುವ ವಿಡಿಯೋವನ್ನು ಟ್ವೀಟರ್, ಫೇಸ್ ಬುಕ್ ಮತ್ತು ಯುಟ್ಯುಬ್ ನಲ್ಲಿ ಆಪ್ ಲೋಡ್ ಮಾಡಬಹುದಾಗಿದೆ. ಇದನ್ನು ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಬಹುದಾಗಿದೆ.

ಫನಿಮೆಟ್ ವಿಡಿಯೋ ಎಫೆಕ್ಟ್ ಎಡಿಟರ್:

ಫನಿಮೆಟ್ ವಿಡಿಯೋ ಎಫೆಕ್ಟ್ ಎಡಿಟರ್:

ಈ ಆಪ್ ನಲ್ಲಿ 15ಕ್ಕೂ ಹೆಚ್ಚು ವಿಡಿಯೋ ಎಫೆಕ್ಟ್ ಗಳನ್ನು ಕಾಣಬಹುದಾಗಿದೆ. ಮ್ಯೂಸಿಕ್ ವಿಡಿಯೋಗಳನ್ನು ಮಾಡಬಹುದಾಗಿದೆ. ಅಲ್ಲದೇ ಸಿಂಪಲ್ ವಿಡಿಯೋಗಳನ್ನು ಮಾಡಬಹುದಾಗಿದೆ. ಇದನ್ನು ಪ್ಲೇ ಸ್ಟೋರಿನಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ.

ಮೂವಿ ಮೇಕರ್ ಫಿಲ್ಮ್ ಮೇಕರ್:

ಮೂವಿ ಮೇಕರ್ ಫಿಲ್ಮ್ ಮೇಕರ್:

ಈ ಆಪ್ ನಲ್ಲಿ ವಿಡಿಯೋ ಎಡಿಟಿಂಗ್ ಮಾಡುವ ಸಂದರ್ಭದಲ್ಲಿ ಫಿಲ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯಲಿದೆ. ಅಲ್ಲದೇ ಮೊಷನ್ ಎಫೆಕ್ಟ್ ಮತ್ತು ಅನಿಮೆಷನ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ವಿಡಿಯೋ ಎಡಿಟಿಂಗ್ ಮಾಡುವುದು ಸುಲಭವಾಗಿದೆ. ಈ ಆಪ್ ಅನ್ನು ಪ್ಲೇ ಸ್ಟೋರಿನಲ್ಲಿ ಯಾವುದೇ ಹಣವನ್ನು ನೀಡದೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ವಿಡಿಯೋ ಎಡಿಟರ್:

ವಿಡಿಯೋ ಎಡಿಟರ್:

ಇದೊಂದು ಸಿಂಪಲ್ ವಿಡಿಯೋ ಎಡಿಟಿಂಗ್ ಆಪ್ ಆಗಿದ್ದು, ಬೆಸೆಕ್ ಆಗಿ ವಿಡಿಯೋಗಳನ್ನು ಎಡಿಟ್ ಮಾಡಿಕೊಡಲಿದೆ. ಇದರಲ್ಲಿ ದೊಡ್ಡ ದೊಡ್ಡ ವಿಡಿಯೋಗಳನ್ನು ಎಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಸಹ ಉಚಿತ ಆಪ್ ಆಗಿದೆ.

 ವಿಡಿಯೋ ಶೋ:

ವಿಡಿಯೋ ಶೋ:

ಇಲ್ಲಿ ವಿಡಿಯೋ ಎಡಿಟ್ ಮಾಡುವ ಸಂದರ್ಭದಲ್ಲಿ ಹಿನ್ನಲೆಯಲ್ಲಿ ಉತ್ತಮ ಮ್ಯೂಸಿಕ್ ಗಳನ್ನು ಅಳವಡಿಸಲು ಹೆಚ್ಚಿನ ಆಯ್ಕೆಗಳಿದೆ. ಡಬ್ಲಿಂಗ್ ಮಾಡಬಹುದಾಗಿದೆ. ಸ್ಲೋ ಮೋಷನ್, ಫಾಸ್ಟ್ ಮೋಷನ್ ವಿಡಿಯೋ ಗಳನ್ನು ಎಡಿಟ್ ಮಾಡಬಹುದಾಗಿದೆ. ಮ್ಯೂಸಿಕ್ ವಿಡಿಯೋ ಗಳನ್ನು ಮಾಡಲು ಇದು ಹೇಳಿ ಮಾಡಿಸಿದಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A couple of years ago, we used to edit even a small video with minimum duration in our PC or laptop. Of course, Video editing is one of the heaviest tasks that needs a decent specification to support the process.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot