ಫೋನಿನಲ್ಲಿ ಸುಲಭವಾಗಿ ವಿಡಿಯೊ ಎಡಿಟ್ ಮಾಡಲು ಈ ಆಪ್ಸ್‌ ಬೆಸ್ಟ್!

|

ಸ್ಮಾರ್ಟ್‌ಫೋನ್‌ಗಳ ಮೂಲಕ ವಿಡಿಯೊ ಸೆರೆಹಿಡಿದಿರುತ್ತಿರಿ ಆದರೆ ಎಷ್ಟೋ ಸಲ ನೀವು ರೇಕಾರ್ಡ್‌ ಮಾಡಿದ ವಿಡಿಯೊ ಹಾಗೇ ಪ್ಲೇ ಮಾಡಿ ವೀಕ್ಷಿಸಿರುತ್ತಿರಿ. ಆದರೆ ರೇಕಾರ್ಡ್‌ ಮಾಡಿದ ವಿಡಿಯೊಗಳನ್ನು ಎಡಿಟಿಂಗ್ ಆಪ್‌ಗಳ ಮೂಲಕ ಎಡಿಟ್‌ ಮಾಡಿ ಆಕರ್ಷಕ ಟಚ್ ನೀಡಬಹುದಾಗಿದೆ. ಅದಕ್ಕಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ವಿಡಿಯೋ ಎಡಿಟಿಂಗ್ ಆಪ್ಸ್‌ಗಳು ಲಭ್ಯವಿದ್ದು, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ.

ವಿಡಿಯೊಗಳನ್ನು

ಹೌದು, ಬಹುತೇಕ ಬಳಕೆದಾರರು ಚಿಕ್ಕ-ಪುಟ್ ವಿಡಿಯೊಗಳನ್ನು ಅವರೇ ಎಡಿಟ್ ಮಾಡಿ ಸೋಶಿಯಲ್‌ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿತ್ತಾರೆ. ಈ ನಿಟ್ಟಿನಲ್ಲಿ ಕ್ಚಿಕ್‌ ಆಗಿ ವಿಡಿಯೊ ಎಡಿಟಿಂಗ್‌ ಮಾಡುವ ಆಪ್‌ಗಳು ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ವಿಡಿಯೊ ಎಡಿಟಿಂಗ್ ಆಪ್‌ಗಳು ಬೇಸಿಕ್ ಎಡಿಟಿಂಗ್ ಫೀಚರ್ಸ್‌ ಜೊತೆಗೆ ನೂತನ ಆಯ್ಕೆಗಳನ್ನು ಒಳಗೊಂಡಿವೆ. ಈ ಲೇಖನದಲ್ಲಿ ಬೆಸ್ಟ್‌ ವಿಡಿಯೊ ಎಡಿಟಿಂಗ್ ಆಪ್‌ಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

VivaCut- ವಿವಾ ಕಟ್

VivaCut- ವಿವಾ ಕಟ್

ವಿವಾಕಟ್ ಆಪ್‌ ವೀಡಿಯೊ ಎಡಿಟಿಂಗ್‌ನ ಪ್ರಮುಖ ಆಪ್‌ಗಳಲ್ಲಿ ಒಂದಾಗಿದೆ. ಈ ಆಪ್‌ನಲ್ಲಿ ಹಲವಾರು ಫೀಚರ್ಸ್‌ಗಳಿವೆ. ಹಾಗೆಯೇ ಡಬಲ್ ಎಕ್ಸ್‌ಪೋಶರ್‌ ಆಯ್ಕೆ ಇದ್ದು, ಕ್ಲಿಪ್‌ಗಳನ್ನು ಒಟ್ಟಿಗೆ ಸಂಯೋಜಿಸಬಹುದು. ನಿಮ್ಮ ವೀಡಿಯೊ ತುಣುಕುಗಳಿಗೆ ನೀವು ಚಿತ್ರಗಳನ್ನು ಸೇರಿಸಬಹುದು. ಕಂಪನಿಯು ಶೀಘ್ರದಲ್ಲೇ 'ಅನಿಮೇಟೆಡ್ ಟೆಕ್ಸ್ಟ್' ಆಯ್ಕೆಯನ್ನು ತರಲು ಯೋಜಿಸುತ್ತಿದೆ.

InShot- ಇನ್‌ಶಾಟ್‌

InShot- ಇನ್‌ಶಾಟ್‌

ಸರಳವಾಗಿ ವಿಡಿಯೊ ಎಡಿಟ್‌ ಮಾಡುವ ಆಪ್‌ಗಳ ಪೈಕಿ ಇನ್‌ಶಾಟ್‌ ಸಹ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಆಪ್‌ ಇನ್ಶಾಟ್ ಫಿಲ್ಟರ್‌ಗಳು, ವೀಡಿಯೊ ಟ್ರಿಮ್ಮಿಂಗ್ ಮತ್ತು ಶಾರ್ಟ್ ವೀಡಿಯೊಗಳನ್ನು ಎಡಿಟ್‌ ಮಾಡುವ ಆಯ್ಕೆಗಳು ಇವೆ. ಜೊತೆಗೆ ಮ್ಯೂಸಿಕ್, ಗ್ರಿಡ್‌ ಸೇರಿದಂತೆ ಹಲವು ಆಕರ್ಷಕ ಆಯ್ಕೆಗಳು ಇದರಲ್ಲಿವೆ.

VideoShow- ವಿಡಿಯೊ ಶೋ

VideoShow- ವಿಡಿಯೊ ಶೋ

ಸಾಮಾಜಿಕ ಮಾಧ್ಯಮ ತುಣುಕುಗಳನ್ನು ಎಡಿಟ್ ಮಾಡಲು ವೀಡಿಯೊ ಶೋ ಉತ್ತಮ ಅಪ್ಲಿಕೇಶನ್ ಆಗಿದೆ. ಹೆಚ್‌ಡಿ ವೀಡಿಯೊಗಳನ್ನು ರಫ್ತು ಮಾಡಲು ಈ ಅಪ್ಲಿಕೇಶನ್ ಅನುಮತಿಸುತ್ತದೆ. ಮ್ಯೂಸಿಕ್ ಸೇರಿಸಬಹುದಾಗಿದೆ. ಹಲವಯ ಫಿಲ್ಟರ್‌ಗಳ ಆಯ್ಕೆಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ.

PowerDirector- ಪವರ್‌ ಡೈರೆಕ್ಟರ್

PowerDirector- ಪವರ್‌ ಡೈರೆಕ್ಟರ್

ಪವರ್‌ಡೈರೆಕ್ಟರ್ ಆಪ್‌ ಅಗತ್ಯ ಹಾಗೂ ಆಕರ್ಷಕ ವಿಡಿಯೊ ಎಡಿಟಿಂಗ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಈ ಆಪ್‌ನಲ್ಲಿ ಕ್ವಿಕ್‌ ಆಗಿ ವಿಡಿಯೊ ಎಡಿಟ್ ಮಾಡಬಹುದಾಗಿದೆ. ಮ್ಯೂಸಿಕ್ ಸೇರಿಸುವ, ಬ್ಯಾಕ್‌ಗ್ರೌಂಡ್‌ ಬದಲಿಸುವ, ವಿಡಿಯೊ ಸ್ಟೆಬಿಲೈಜರ್ ಹಾಗೂ ಫಿಲ್ಟರ್‌ಗಳು ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ.

Film Maker Pro- ಫಿಲ್ಮ್ ಮೇಕರ್ ಪ್ರೊ

Film Maker Pro- ಫಿಲ್ಮ್ ಮೇಕರ್ ಪ್ರೊ

ಫಿಲ್ಮ್ ಮೇಕರ್ ಪ್ರೊ ವಿಡಿಯೊ ಎಡಿಟಿಂಗ್ ಅಪ್ಲಿಕೇಶನ್ ಅತ್ಯುತ್ತಮ ಆಂಡ್ರಾಯ್ಡ್‌ ಆಪ್‌ ಆಗಿದೆ. FX, ಟೆಂಪ್ಲೆಟ್, 100 ಉಚಿತ ಮ್ಯೂಸಿಕ್ ಆಯ್ಕೆಗಳು, ಸೇರಿದಂತೆ ಸ್ಟಿಕ್ಕರ್ ಆಯ್ಕೆಗಳು ಸಹ ಈ ಆಪ್‌ ಒಳಗೊಂಡಿದೆ.

Most Read Articles
Best Mobiles in India

English summary
There are quite a few compelling video editing apps for Android. That was not the case in the past, where you really had to look hard for something decent.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X