2022ರಲ್ಲಿ ನಿರೀಕ್ಷಿಸಬಹುದಾದ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳು!

|

ಪ್ರಸ್ತುತ ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಫೋನಿನ ಮೂಲಕ ಸೆರೆ ಹಿಡಿದ ವಿಡಿಯೊ ಕ್ಲಿಪ್‌ಗಳನ್ನು ಎಡಿಟ್ ಮಾಡಿ ಅದಕ್ಕೆ ಆಕರ್ಷಕ ಆಕರ್ಷಕ ಟಚ್ ನೀಡುತ್ತಾರೆ. ಇನ್ನು ಸೋಶಿಯಲ್ ಪ್ಲಾಟ್‌ಫಾರ್ಮ್ ಗಳಲ್ಲಿ ವಿಡಿಯೋ ಶೇರ್ ಮಾಡುವ ಬಳಕೆದಾರರು ವಿಡಿಯೋ ಎಡಿಟಿಂಗ್‌ಗೆ ಹೆಚ್ಚಿನ ಗಮನ ನೀಡುತ್ತಾರೆ. ಈ ನಿಟ್ಟಿನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ವಿಡಿಯೋ ಎಡಿಟಿಂಗ್ ಆಪ್ಸ್‌ಗಳು ಲಭ್ಯವಿದ್ದು, ಹೊಸ ನಮೂನೆಯ ಫೀಚರ್ಸ್‌ಗಳನ್ನು ಒಳಗೊಂಡಿವೆ.

2022ರಲ್ಲಿ ನಿರೀಕ್ಷಿಸಬಹುದಾದ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳು!

ಹೌದು, ವಿಡಿಯೋ ಎಡಿಟಿಂಗ್ ಮಾಡಲು ಅನೇಕ ಅಪ್ಲಿಕೇಶನ್ ಗಳ ಆಯ್ಕೆ ಲಭ್ಯ ಇದೆ. ಆದರೆ ಕೆಲವೊಂದು ಆಪ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಎಡಿಟಿಂಗ್ ಮಾಡಲು ಸುಲಭ ಹಂತಗಳನ್ನು ಹೊಂದಿರುತ್ತವೆ. ಮತ್ತೆ ಕೆಲವು ಆಪ್‌ಗಳು ಬೇಸಿಕ್ ಎಡಿಟಿಂಗ್ ಆಯ್ಕೆಗಳನ್ನು ಮಾತ್ರ ಒಳಗೊಂಡಿರುತ್ತವೆ. ಆದರೆ ವೃತ್ತಿಪರ ವಿಡಿಯೋ ಎಡಿಟಿಂಗ್ ಟಚ್ ನೀಡುವ ಅಪ್ಲಿಕೇಶನ್ ಗಳನ್ನು ಹೆಚ್ಚಿನ ಬಳಕೆದಾರರು ಇಷ್ಟಪಡುತ್ತಾರೆ. ಹಾಗೆಯೇ ವಿಡಿಯೋಗಳಿಗೆ ಸಿನಿಮೀಯ ಲುಕ್ ಬರುವಂತೆ ವಿಡಿಯೋ ಎಡಿಟ್ ಮಾಡಲು ಅನೇಕರು ಇಷ್ಟಪಡುತ್ತಾರೆ. ಹಾಗಾದರೇ 2022ರಲ್ಲಿ ನಿರೀಕ್ಷಿಸಬಹುದಾದ ಬೆಸ್ಟ್‌ ವಿಡಿಯೋ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್‌ಶಾಟ್ - ವೀಡಿಯೊ ಮೇಕರ್
ಇನ್‌ಶಾಟ್ - ವೀಡಿಯೊ ಮೇಕರ್ ಆಪ್ ವಿಡಿಯೋ ಎಡಿಟಿಂಗ್ ಆಪ್‌ಗಳ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಈ ಆಪ್‌ ವೃತ್ತಿಪರ ವೈಶಿಷ್ಟ್ಯಗಳೊಂದಿಗೆ ಉಚಿತ ಹೆಚ್‌ಡಿ ವೀಡಿಯೊ ಎಡಿಟ್ ಮತ್ತು ವೀಡಿಯೊ ಮೇಕರ್ ಅಪ್ಲಿಕೇಶನ್ ಆಗಿದೆ. ಬಳಕೆದಾರರು ಸಂಗೀತ, ಪರಿವರ್ತನೆ ಪರಿಣಾಮಗಳು, ಟೆಕ್ಸ್ಟ್‌, ಎಮೋಜಿ ಮತ್ತು ಫಿಲ್ಟರ್‌ಗಳು, ಬ್ಲರ್ ಹಿನ್ನೆಲೆ ಸೇರಿದಂತೆ ಇನ್ನಷ್ಟು ಆಯ್ಕೆಗಳನ್ನು ಸೇರಿಸಲು ಅವಕಾಶ ಹೊಂದಿದೆ. ಅಲ್ಲದೇ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇತರೆ ಸೋಶೀಯಲ್ ತಾಣಗಳಿಗಾಗಿ ಸುಲಭವಾಗಿ ವೀಡಿಯೊಗಳನ್ನು ರಚಿಸಲು ಬಳಕೆದಾರರಿಗೆ ಸಹಾಯ ಮಾಡಬಹುದು. ಹಾಗೆಯೇ ಇನ್‌ಶಾಟ್ ಸಹ ಫೋಟೋ ಎಡಿಟರ್ ಆಗಿದ್ದು, ವಿವಿಧ ಥೀಮ್‌ಗಳು ಬಳಸಿಕೊಂಡು ಕೊಲಾಜ್‌ಗಳನ್ನು ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

2022ರಲ್ಲಿ ನಿರೀಕ್ಷಿಸಬಹುದಾದ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳು!

ಕೈನ್‌ಮಾಸ್ಟರ್ ಮೊಬೈಲ್ ವೀಡಿಯೊ ಎಡಿಟರ್‌
ಆಂಡ್ರಾಯ್ಡ್, ಕ್ರೋಮ್ ಓಎಸ್, ಐಫೋನ್ ಮತ್ತು ಐಪ್ಯಾಡ್‌ನಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ಗಳಲ್ಲಿ ಕೈನ್‌ಮಾಸ್ಟರ್ ಒಂದು. ವೀಡಿಯೊಗಳನ್ನು ನೀವು ಯುಟ್ಯೂಬ್‌ ಇಲ್ಲವೇ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲು ಬಯಸುವುದರೆ ಇದರಲ್ಲಿ ಅತ್ಯುತ್ತಮ ಫೀಚರ್ಸ್‌ ಮೂಲಕ ವೀಡಿಯೊಗಳನ್ನು ಸುಲಭವಾಗಿ ಎಡಿಟ್‌ ಮಾಡಬಹುದಾಗಿದೆ. ಆದರೆ 'ಕೈನ್‌ಮಾಸ್ಟರ್ ವಾಟರ್‌ಮಾರ್ಕ್' ಇಲ್ಲದೆ ಎಲ್ಲಾ ಫೀಚರ್ಸ್‌ಗಳನ್ನು ಪಡೆಯಲು ಮತ್ತು ವೀಡಿಯೊಗಳನ್ನು ಎಕ್ಸ್‌ಫೋರ್ಟ್‌ ಮಾಡಲು ನೀವು ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

2022ರಲ್ಲಿ ನಿರೀಕ್ಷಿಸಬಹುದಾದ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳು!

ವಿವಾ ವೀಡಿಯೊ ಮೇಕರ್
ವಿವಾ ವೀಡಿಯೊಮೇಕರ್ (Viva Video Editor) ಎಂಬುದು ವೀಡಿಯೊಗಳನ್ನು ಕತ್ತರಿಸಲು ಮತ್ತು ವೃತ್ತಿಪರರಂತೆ ಸಂಪಾದಿಸಲು ಬಳಸಲಾಗುವ ಮತ್ತೊಂದು ಅಪ್ಲಿಕೇಶನ್ ಆಗಿದೆ. ಈ ಆಪ್ ನಲ್ಲಿ ವೀಡಿಯೊವನ್ನು ಟ್ರಿಮ್ ಮಾಡುವ ಆಯ್ಕೆ, ವೀಡಿಯೊವನ್ನು ಕ್ರಾಪ್ ಮಾಡುವ ಆಯ್ಕೆ, ಮ್ಯೂಸಿಕ್ ಸೇರಿಸುವ ಆಯ್ಕೆ ಇವೆ. ಹಾಗೆಯೇ ಸ್ಟಿಕ್ಕರ್ ಸೇರಿಸಬಹುದಾಗಿದೆ. ಅಲ್ಲದೇ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಇತ್ಯಾದಿಗಳಿಗೆ ವೀಡಿಯೊಗಳನ್ನು ಸುಲಭವಾಗಿ ರಚಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಬಳಕೆದಾರರು 720p ನಲ್ಲಿ ವೀಡಿಯೊ ಸೆಂಡ್ ಮಾಡಬಹುದು.

YouCut - ವೀಡಿಯೊ ಮೇಕರ್
ಯು ಕಟ್ ವೀಡಿಯೊ ಮೇಕರ್ ಸಹ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಆಪ್ ಆಗಿ ಕಾಣಿಸಿಕೊಂಡಿದೆ. ಇದು ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್ ಹಾಗೂ ಇತರೆ ಸಾಮಾಜಿಕ ಮಾಧ್ಯಮ ತಾಣಗಳಿಗಾಗಿ ವಿಡಿಯೋ ತಯಾರಿಸಲು ಅತ್ಯುತ್ತಮ ಎನಿಸಿದೆ. ಬಳಕೆದಾರರು ಕೆಲವೇ ನಿಮಿಷಗಳಲ್ಲಿ ಯು ಕಟ್ ಆಪ್‌ ನೊಂದಿಗೆ ಫೋಟೋಗಳು ಅಥವಾ ವೀಡಿಯೊ ಕ್ಲಿಪ್‌ಗಳಿಂದ ವೀಡಿಯೊಗಳನ್ನು ರಚಿಸಬಹುದು. ಹವ್ಯಾಸಿ ಯಾವುದೇ ಅನುಭವವಿಲ್ಲದೆ ವೀಡಿಯೊವನ್ನು ಸುಲಭವಾಗಿ ಎಡಿಟ್ ಮಾಡಲು ಈ ಆಪ್ ಸೂಕ್ತ ಎನಿಸುತ್ತದೆ.

Best Mobiles in India

English summary
Top 5 Video Editing Apps for Android in 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X