ಇಂಪಾದ ಹಾಡುಗಳನ್ನು ಕೇಳಲು ಇಲ್ಲಿವೆ ಐದು ಆಪ್‌ಗಳು

|

ಬೇಸರ ಆದಾಗ, ಸಂತೋಷ ಆದಾಗ ಅಷ್ಟೇ ಯಾಕೆ ಸತ್ತಾಗ, ಬದುಕಿದ್ದಾಗಲೂ ಸಂಗೀತ ಬೇಕು. ಅಷ್ಟರಮಟ್ಟಿಗೆ ಇಂದು ನಾವೆಲ್ಲಾ ಇದಕ್ಕೆ ಮಾರುಹೋಗಿದ್ದೇವೆ. ಈ ಸಂಗೀತದ ಬೇಡಿಕೆಯನ್ನು ಈಡೇರಿಸಲೆಂದೇ ಹಲವಾರು ಆಪ್‌ಗಳನ್ನು ಒದಗಿಸಲಾಗಿದೆ. ಹಿಂದೆ ಮೆಮೋರಿ ಕಾರ್ಡ್‌ನಲ್ಲಿ ಅಥವಾ ಕ್ಯಾಸೆಟ್‌ಗಳ ಮೂಲಕ ಸಂಗೀತ ಆಲಿಸುತ್ತಿದೆವು. ಆದರೆ ಆ ಕಾಲ ಹಿಂದೆ ಸರಿದು ಸಂಗೀತ ಲೋಕ ಫುಲ್‌ ಅಪ್‌ಡೇಟ್‌ ಆಗಿದೆ. ಈಗ ನಿಮಗೆ ಅನುಕೂಲ ಆಗುವಂತೆ ಪ್ರಮುಖ ಸಂಗೀತ ಆಲಿಸುವ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಸಂಗೀತ

ಹೌದು, ಸಂಗೀತದ ಮಾಯೆಯೇ ಅಷ್ಟು. ಎಲ್ಲರನ್ನೂ ತನ್ನತ್ತ ಸೆಳೆದು ಬಿಡುತ್ತದೆ. ಒಂದೇ ಆಪ್‌ನಲ್ಲಿ ಜಗತ್ತಿನ ಎಲ್ಲಾ ಹಾಡುಗಳನ್ನು ಕೇಳುವ ಅವಕಾಶ ನೀಡಲಾಗಿದೆ. ಇದಕ್ಕೆ ಅನುಗುಣವಾಗಿ ಹಲವಾರು ಆಪ್‌ಗಳು ಜನ್ಮತಾಳಿವೆ. ನಿಮಗೆ ಸಹಾಯಕವಾಗಲೆಂದೇ ನಾವು ಈ ಲೇಖನದಲ್ಲಿ ಪ್ರಮುಖ ಸಂಗೀತ ಆಪ್‌ಗಳ ಬಗ್ಗೆ ವಿವರಣೆ ನೀಡಿದ್ದೇವೆ.

ಸ್ಪಾಟಿಫೈ( spotify )

ಸ್ಪಾಟಿಫೈ( spotify )

ಈ ಆಪ್‌ ಜಗತ್ತಿನಲ್ಲೇ ಹೆಸರು ಮಾಡಿರುವ ಸಂಗೀತ ಅಪ್‌ ಅಗಿದೆ. ಇದನ್ನು ಮಿಲಿಯನ್‌ ಗಟ್ಟಲೆ ಜನರು ಈಗಾಗಲೇ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಆಲ್ಬಮ್‌ ಸಾಂಗ್‌, ಪೋಡ್‌ಕಾಸ್ಟ್ ಹಾಗೂ ಇನ್ನಿತರ ಫೀಚರ್ಸ್‌ಗಳಿವೆ. ಜಾಹೀರಾತು ಮುಕ್ತ ಸಂಗೀತವನ್ನು ಆಲಿಸುವ ಆಯ್ಕೆಯನ್ನು ಸಹ ನೀಡಲಾಗಿದೆ. ಆದರೆ ಡೌನ್‌ಲೋಡ್‌ ಮಾಡಿಕೊಂಡರೆ ಮಾತ್ರ ಈ ಸೌಲಭ್ಯ. ಅದಕ್ಕೂ ಮಿಗಿಲಾಗಿ ಜಾಹೀರಾತಿನಿಂದ ಮಕ್ತಿ ಪಡೆಯಬೇಕು ಎಂದುಕೊಂಡರೆ ನೀವು ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದು.

ಜಿಯೋ ಸಾವನ್‌(jiosaavn)

ಜಿಯೋ ಸಾವನ್‌(jiosaavn)

ಸಂಗೀತ ವಿಭಾಗದಲ್ಲಿ ಹೆಚ್ಚಿನ ಬಳಕೆದಾರರಿಗೆ ಈ ಆಪ್‌ ಗೊತ್ತಿರುತ್ತದೆ. ಅತೀ ವೇಗವಾಗಿ ಜನಮನ್ನಣೆ ಗಳಿಸುತ್ತಿರುವ ಆಪ್‌ನಲ್ಲಿ ಇದೂ ಸಹ ಪ್ರಮುಖವಾದ ಆಪ್‌ ಆಗಿದೆ. ಅನ್‌ಲಿಮಿಟೆಡ್‌ ಬಾಲಿವುಡ್‌, ಇಂಗ್ಲಿಷ್‌ ಸೇರಿದಂತೆ ಭಾರತದ ಸ್ಥಳೀಯ ಭಾಷೆಗಳ ಸಂಗೀತದ ಆಯ್ಕೆಗಳನ್ನು ನೀಡಲಿದೆ. ಇದರಲ್ಲಿ ನಿಮ್ಮದೇ ಆದ ಫೆವರಿಟ್‌ ಲಿಸ್ಟ್‌ನ್ನು ಸಹ ಕ್ರಿಯೇಟ್‌ ಮಾಡಿಕೊಳ್ಳಬಹುದು. ಇದರಲ್ಲೂ ಪ್ರೀಮಿಯಂ ಆಯ್ಕೆ ಜೊತೆಗೆ ಪಾಡ್‌ಕಾಸ್ಟ್‌ ಫೀಚರ್ಸ್‌ ಸಹ ಇದೆ. ಆಪ್‌ನಲ್ಲಿ ಕರೋಕೆ, ಲಿರಿಕ್ಸ್ ಸಹ ಇದ್ದು, ಇದು 320kbps ಆಡಿಯೋನಲ್ಲಿ ಸ್ಟ್ರೀಮ್‌ ಆಗಲಿದೆ.

ಗಾನ( Gaana)

ಗಾನ( Gaana)

ಗಾನ ಸಂಗೀತ ಲೋಕದ ಪ್ರಮುಖ ಆಪ್‌ ಆಗಿದೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಆಪ್‌ನಲ್ಲಿ ಇದೂ ಒಂದು. 30 ಕ್ಕೂ ಹೆಚ್ಚು ಮಿಲಿಯನ್‌ ಹಾಡುಗಳ ಸಂಗ್ರಹ ಈ ಆಪ್‌ನಲ್ಲಿದೆ. ಹಾಗೆಯೇ ಭಾರತದ ಎಲ್ಲಾ ಪ್ರಾದೇಶಿಕ ಭಾಷೆ ಹಾಡುಗಳನ್ನು ಈ ಅಪ್‌ನಲ್ಲಿ ಆಲಿಸಬಹುದಾಗಿದೆ. ಆದರೆ ಈ ಆಪ್‌ನಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಹಾಡುಗಳಿಲ್ಲ. ಇದರಲ್ಲೂ ಸಹ ಲಿರಿಕ್ಸ್‌ ಆಯ್ಕೆ ನೀಡಲಾಗಿದೆ. ಇನ್ನೊಂದು ವಿಶೇಷ ಆಯ್ಕೆ ಎಂದರೆ ಈ ಆಪ್‌ ಓಪನ್‌ ಮಾಡಿ ನಿಮಗೆ ಯಾವ ಹಾಡು ಬೇಕು ಅದನ್ನು ಗುನುಗಿದರೆ ಆ ಹಾಡು ಪ್ಲೇ ಆಗುತ್ತದೆ. ಇದರಲ್ಲಿ ಗಾನ + ಚಂದಾದಾರಿಕೆ ಆಯ್ಕೆ ನೀಡಲಾಗಿದೆ, ಇದು ಹೆಚ್‌ಡಿ ಕ್ವಾಲಿಟಿ ಹಾಡುಗಳನ್ನು ನೀಡಲಿದ್ದು,ಇದರಲ್ಲಿ ರೇಡಿಯೋವನ್ನೂ ಸಹ ಆಲಿಸಬಹುದಾಗಿದೆ.

ವಿಂಕ್‌ ಮ್ಯೂಸಿಕ್‌ (Wynk Music)

ವಿಂಕ್‌ ಮ್ಯೂಸಿಕ್‌ (Wynk Music)

ಈ ಆಪ್‌ ಏರ್‌ಟೆಲ್‌ ಕಂಪೆನಿಯ ಮ್ಯೂಸಿಕ್‌ ಆಪ್‌ ಆಗಿದೆ. ಇದು ಮೊದಲ ಬಾರಿಗೆ ಉಚಿತ ಸಂಗೀತ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿದ ಆಪ್‌ ಆಗಿದೆ. ಇದು ಏರ್‌ಟೆಲ್‌ ಸಿಮ್‌ ಬಳಕೆದಾರರಿಗೆ ಮಾತ್ರ ಸೀಮಿತ. ಇತರೆ ಬಳಕೆದಾರರೂ ಸಹ ಸಂಗೀತ ಆಲಿಸಬಹುದು. ಆದರೆ ತಿಂಗಳಿಗೆ ಕೇವಲ 100 ಸಾಂಗ್‌ಗಳು ಮಾತ್ರ. ಈ ಆಪ್‌ ಸಹ ಹಿಂದಿ ಹಾಗೂ ಇಂಗ್ಲಿಷ್‌ ಹೊರತುಪಡಿಸಿ ಉಳಿದ ಎಲ್ಲಾ ಸ್ಥಳೀಯ ಭಾಷೆಯಲ್ಲಿನ ಹಾಡುಗಳನ್ನು ಅಲಿಸಲು ಅವಕಾಶ ನೀಡಿದೆ. ಇದರಲ್ಲಿ ಹೆಚ್‌ಡಿ ಮ್ಯೂಸಿಕ್‌ ಸ್ಟ್ರೀಮಿಂಕ್‌ ಆಯ್ಕೆ ಇದೆ. ಹಾಗೆಯೇ ನೀವೇ ಹಾಡಿನ ಮೊದಲ ಪಲ್ಲವಿ ಹಾಡುವುದರ ಮೂಲಕ ಸಂಗೀತವನ್ನು ಹುಡುಕಿಕೊಂಡು ಆಲಿಸಬಹುದಾಗಿದೆ.

ಆಪಲ್‌ ಮ್ಯೂಸಿಕ್(Apple music)

ಆಪಲ್‌ ಮ್ಯೂಸಿಕ್(Apple music)

ನಿಮ್ಮ ಬಳಿ ಆಪಲ್‌ ಮೊಬೈಲ್‌ ಇದ್ದರೆ ಈ ಆಪ್‌ ಬಗ್ಗೆ ತಿಳಿದೇ ಇರುತ್ತದೆ. ಆಂತರಿಕ ಆಪಲ್ ಮ್ಯೂಸಿಕ್ ಅಪ್ಲಿಕೇಶನ್ ಸದಸ್ಯತ್ವ ಚಂದಾದಾರಿಕೆ ಬೆಲೆಯನ್ನು ಒಳಗೊಂಡಿದೆ. ಅಷ್ಟೇ ಅಲ್ಲಾ ಜಗತ್ತಿನ ಎಲ್ಲಾ ಸಂಗೀತವನ್ನು ನೀವು ಆಲಿಸಬಹುದಾಗಿದೆ. ಇದು ಸಂಪೂರ್ಣವಾಗಿ ಜಾಹೀರಾತು ಮುಕ್ತವಾಗಿದೆ. ಅದರ ಜೊತೆಗೆ ನೆಚ್ಚಿನ ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Best Mobiles in India

English summary
There is no one who does not listen to songs in the world. Here are the top songs listening apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X