ಈಗ ಮಾಡಿ ಟ್ರೂಕಾಲರ್ ನಿಂದ ಗೂಗಲ್ ಡ್ಯುಯೊ ಬಳಸಿ ವೀಡಿಯೋ ಕರೆ

By: Tejaswini P G

ಈಗಾಗಲೇ ಹಲವಾರು ಫೀಚರ್ಗಳೊಂದಿಗೆ ಜನರ ಮನಸ್ಸು ಗೆದ್ದಿರುವ ಟ್ರೂಕಾಲರ್, ತನ್ನ ಬತ್ತಳಿಕೆಗೆ ಮತ್ತೊಂದು ಫೀಚರನ್ನು ಸೇರಿಸಿದೆ.ಗೂಗಲ್ ಡ್ಯುಯೋ ಜೊತೆಗೆ ಕೈಜೋಡಿಸಿರುವ ಟ್ರೂಕಾಲರ್ ಈಗ ಬಳಕೆದಾರರಿಗೆ ನೀಡಲಿದೆ ಹೊಸ ಸಾಮರ್ಥ್ಯ. ನೀವೀಗ ಮಾಡಬಹುದು ವೀಡಿಯೋ ಕರೆ ನೇರವಾಗಿ ಟ್ರೂಕಾಲರ್ ಆಪ್ನಿಂದ, ಆಂಡ್ರಾಯ್ಡ್ ಮತ್ತು iOS ಎರಡು ಪ್ಲಾಟ್ಫಾರ್ಮ್ಗಳಲ್ಲೂ.

ಈಗ ಮಾಡಿ ಟ್ರೂಕಾಲರ್ ನಿಂದ ಗೂಗಲ್ ಡ್ಯುಯೊ ಬಳಸಿ ವೀಡಿಯೋ ಕರೆ

ಈ ಹೊಸ ಫೀಚರ್ನಿಂದ ಟ್ರೂಕಾಲರ್ ತನ್ನ 250 ಮಿಲಿಯನ್ಗಳಿಗೂ ಅಧಿಕ ಬಳಕೆದಾರರಿಗೆ ಉತ್ತಮ ಗುಣಮಟ್ಟದ ವೀಡಿಯೋ ಕರೆಮಾಡುವ ಸಾಮರ್ಥ್ಯವನ್ನು ನೀಡುತ್ತಿದೆ.ಈ ಅಪ್ಡೇಟ್ನೊಂದಿಗೆ ಟ್ರೂಕಾಲರ್ ಬಳಕೆದಾರರು, ಟ್ರೂಕಾಲರ್ ಆಪ್ ನ ಮೂಲಕ ಕೇವಲ ಒಂದು ಕ್ಲಿಕ್ನಲ್ಲಿ ಡ್ಯುಯೋ ವೀಡಿಯೋ ಕರೆ ಮಾಡಬಹುದು.

ಅಲ್ಲದೆ ಕರೆಯಲ್ಲಿ ಇದ್ದಂತೆಯೇ ಯಾವುದೇ ಅಡೆತಡೆ ಇಲ್ಲದೆ ವೈಫೈ ಹಾಗೂ ಸೆಲ್ಯುಲಾರ್ ಡೇಟಾಗಳ ಮಧ್ಯೆ ಸ್ವಿಚ್ ಮಾಡಬಹುದು. ಈಗಾಗಲೇ ತಿಳಿಸಿದಂತೆ ಈ ಫೀಚರ್ ಆಂಡ್ರಾಯ್ಡ್ ಹಾಗೂ iOS ಬಳಕೆದಾರರಿಬ್ಬರಿಗೂ ಲಭ್ಯವಿದೆ.

ವೀಡಿಯೋ ಕರೆ ಫೀಚರ್ ಒಂದು ಅನುಮತಿ ಆಧಾರಿತ ಫೀಚರ್ ಆಗಿದ್ದು, ನೀವು ಯಾವಾಗ ಬೇಕಾದರೂ ಈ ಫೀಚರ್ ಅನ್ನು ಸಕ್ರಿಯ ಅಥವ ನಿಷ್ಕ್ರಿಯಗೊಳಿಸಬಹುದು. ಏಪ್ರಿಲ್ನಲ್ಲಿ ಫ್ಲ್ಯಾಷ್ ಮೆಸೇಜಿಂಗ್ ಫೀಚರ್ ಆನ್ನು ಬಳಕೆದಾರರಿಗೆ ನೀಡಿದ್ದ ಟ್ರೂಕಾಲರ್, ಈಗ ಈ ಟ್ರೂಕಾಲರ್-ಗೂಗಲ್ ಡ್ಯುಯೋದ ಏಕೀಕರಣದೊಂದಿಗೆ ವೀಡಿಯೋ ಕರೆ ಬಯಸುವ ಗ್ರಾಹಕರಿಗೆ ಅವರಿಗಿಷ್ಟವಾದ ರೀತಿಯಲ್ಲಿ ಕಮ್ಯುನಿಕೇಟ್ ಮಾಡುವ ಅವಕಾಶವನ್ನು ನೀಡಿದೆ.

ನಿತಾ ಅಂಬಾನಿ ಬಳಸುವ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ!!

ಈ ಹೊಸ ಫೀಚರ್ನ ಬಿಡುಗಡೆ ಕುರಿತು ಮಾತಾಡಿದ ಟ್ರೂಕಾಲರ್ ನ ವಿಪಿ ಆಫ್ ಪ್ರಾಡಕ್ಟ್, ರಿಶಿತ್ ಝುನ್ಝುನ್ವಾಲಾ ಹೀಗೆ ಹೇಳಿದ್ದಾರೆ " ಕೆಲವೊಮ್ಮೆ ತಮ್ಮ ಅನಿಸಿಕೆ ಹಾಗೂ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಕೇವಲ ವಾಯ್ಸ್ ಅಥವಾ ಟೆಕ್ಸ್ಟ್ ಮಾಧ್ಯಮಗಳು ಸಾಕಾಗುವುದಿಲ್ಲ. ಮುಖಾಮುಖಿಯಾಗಿ ಸಂಭಾಷಿಸುವ ಅನುಭವವನ್ನು ಬೇರೆ ಮಾಧ್ಯಮಗಳು ನೀಡುವುದಿಲ್ಲ.

ನಾವು ಟ್ರೂಕಾಲರ್ ಬಳಕೆದಾರರಿಗೆ ಒನ್-ಸ್ಟಾಪ್ ಕಮ್ಯುನಿಕೇಶನ್ ಪ್ಲ್ಯಾಟ್ಫಾರ್ಮ್ ನೀಡುವತ್ತ ನಮ್ಮ ಮುಂದಿನ ಹೆಜ್ಜೆಯನ್ನು ನಿಮ್ಮೆಲ್ಲರ ಮುಂದೆ ಘೋಷಿಸಲು ಸಂತೋಷಿಸಿತ್ತೇವೆ.ಗೂಗಲ್ ನಂತಹ ಶ್ರೇಷ್ಠ ಪಾರ್ಟ್ನರ್ ಹೊಂದಿರುವ ಕಾರಣ ನಾವು ಕೋಟ್ಯಂತರ ಬಳಕೆದಾರರಿಗೆ ಗೂಗಲ್ ಡ್ಯುಯೋ ಮೂಲಕ ಉತ್ತಮ ಗುಣಮಟ್ಟದ ವೀಡಿಯೋ ಕರೆ ಅನುಭವವನ್ನು ನೀಡಲು ಸಾಧ್ಯವಾಗುತ್ತಿದೆ".

"ವೀಡಿಯೋ ಕಾಲಿಂಗ್ ಯಾವುದೇ ಪ್ಲ್ಯಾಟ್ಫಾರ್ಮ್ ನಲ್ಲೂ ಕೆಲಸಮಾಡಬೇಕು. ವೀಡಿಯೋ ಕಾಲಿಂಗ್ ಅನ್ನು ಸರಳ, ಫಾಸ್ಟ್ ಹಾಗೂ ಎಲ್ಲರಿಗೂ ಸಿಗುವಂತೆ ಮಾಡುವುದೇ ನಮ್ಮ ಗುರಿ.ಈ ಏಕೀಕರಣದೊಂದಿಗೆ ನಾವು ಬಳಕೆದಾರರಿಗೆ ಉತ್ತಮ ವೀಡಿಯೋ ಕಾಲಿಂಗ್ ಅನುಭವವನ್ನು ನೀಡಲು ಸಾಧ್ಯವಾಗಿದೆ" ಎಂದಿದ್ದಾರೆ ಗೂಗಲ್ ಡ್ಯುಯೋ ನ ಮುಖ್ಯಸ್ಥ ಅಮಿತ್ ಫುಲೇ.Read more about:
English summary
Now users will to make video calls directly through the Truecaller app on both Android and iOS platforms.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot