ವಾರದ ನಂತರ ಗೂಗಲ್ ಪ್ಲೇಸ್ಟೋರ್ ಗೆ ಮರಳಿದ ಯುಸಿ ಬ್ರೌಸರ್

By Tejaswini P G
|

ಕಳೆದ ವಾರ ಗೂಗಲ್ ಯುಸಿ ಬ್ರೌಸರ್ ಅನ್ನು ತನ್ನ ಪ್ಲೇಸ್ಟೋರ್ ನಿಂದ ತೆಗೆದು ಹಾಕಿತ್ತು. ಈಗ ಒಂದು ವಾರದ ನಂತರ ಅಲಿಬಾಬಾ ಒಡೆತನದ ಮೊಬೈಲ್ ಬ್ರೌಸರ್ ಮತ್ತೆ ಪ್ಲೇಸ್ಟೋರ್ ಗೆ ಮರಳಿ ಬಂದಿದೆ.

ವಾರದ ನಂತರ ಗೂಗಲ್ ಪ್ಲೇಸ್ಟೋರ್ ಗೆ ಮರಳಿದ ಯುಸಿ ಬ್ರೌಸರ್

ಯುಸಿವೆಬ್ ಯುಸಿ ಬ್ರೌಸರ್ ನ ಹೊಸ ಆವೃತ್ತಿಯೊಂದು ಈಗ ಗೂಗಲ್ ಪ್ಲೇಸ್ಟೋರ್ ನಲ್ಲಿ ಮತ್ತೆ ಡೌನ್ಲೋಡ್ ಗೆ ಲಭ್ಯವಿದೆ ಎಂದು ನಿನ್ನೆ ತಿಳಿಸಿದೆ. ಈ ಮೊದಲೇ ವರದಿ ಮಾಡಿರುವಂತೆ, ಗೂಗಲ್ ಯುಸಿ ಬ್ರೌಸರ್ ಅನ್ನು ತನ್ನ ಪ್ಲೇಸ್ಟೋರ್ ನಿಂದ ಯಾವುದೇ ಪೂರ್ವ ಸೂಚನೆಯಿಲ್ಲದೆ ತೆಗೆದು ಹಾಕಿತ್ತು. ನಂತರ ಯುಸಿವೆಬ್ ಇದರ ಹಿಂದಿನ ಕಾರಣವನ್ನು ತಿಳಿಸುತ್ತಾ ಹೇಳಿಕೆಯೊಂದನ್ನು ನೀಡಿತ್ತು. ಈ ಹೇಳಿಕೆಯ ಅನುಸಾರ ಯುಸಿ ಬ್ರೌಸರ್ ನ ನಿರ್ದಿಷ್ಟ ಸೆಟ್ಟಿಂಗ್ ಒಂದು ಗೂಗಲ್ ನ ಪಾಲಿಸಿ ಗೆ ಹೊಂದಿಕೆಯಾಗದಿದ್ದ ಕಾರಣ ಗೂಗಲ್ ಈ ಕ್ರಮವನ್ನು ಕೈಗೊಂಡಿತ್ತು.

"ಯುಸಿ ಬ್ರೌಸರ್ ಪ್ಲೇಸ್ಟೋರ್ನಲ್ಲಿ ಇರದಿದ್ದ ಈ ಅಲ್ಪ ಸಮಯದಲ್ಲಿ ನಾವು ನಮ್ಮ ಪ್ರತಿಯೊಂದು ತಾಂತ್ರಿಕ ಸೆಟ್ಟಿಂಗ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದೇವೆ. ಇದೇ ಸಂದರ್ಭದಲ್ಲಿ ನಾವು ಯುಸಿ ಬ್ರೌಸರ್ ನ ಬಳಕೆದಾರರಿಗೆ ಅದರ ಮೇಲಿದ್ದ ಅತಿಯಾದ ಪ್ರೀತಿಯನ್ನು ಕೂಡ ಗಮನಿಸಿದ್ದೇವೆ. ಅವರ ಈ ವಿಶ್ವಾಸದ ಫಲವಾಗಿ ಯುಸಿ ಬ್ರೌಸರ್ ನ ಇನ್ನೊಂದು ಆವೃತ್ತಿಯಾದ ಯುಸಿ ಬ್ರೌಸರ್ ಮಿನಿ ಯನ್ನು ಅವರು ತಮ್ಮದಾಗಿಸಿದ್ದು, ಅದು ಪ್ಲೇಸ್ಟೋರ್ ನ ಉಚಿತ ಆಪ್ಸ್ ವಿಭಾಗದಲ್ಲಿ ಉಚ್ಛ ಸ್ಥಾನಕ್ಕೇರಿದೆ" ಎಂದು ಅಲಿಬಾಬಾ ಮೊಬೈಲ್ ಬಿಸ್ನೆಸ್ ಗ್ರೂಪ್ ನ ಅಂತರಾಷ್ಟ್ರೀಯ ಬಿಸ್ನೆಸ್ ವಿಭಾಗದ ಮುಖ್ಯಸ್ಥರಾದ ಯಂಗ್ ಲೀ ಹೇಳಿದ್ದಾರೆ.

ಸರಿಯಾಗಿ ತರಕಾರಿ ಸೇವಿಸಲು ವಿಜ್ಞಾನಿಗಳು ಲಾಂಚ್ ಮಾಡಿದ್ದಾರೆ ಸರಿಯಾಗಿ ತರಕಾರಿ ಸೇವಿಸಲು ವಿಜ್ಞಾನಿಗಳು ಲಾಂಚ್ ಮಾಡಿದ್ದಾರೆ "ವೆಜ್ ‌ಈಜೀ'' ಆಪ್!!

ಯುಸಿ ಬ್ರೌಸರ್ ಮೊಬೈಲ್ ಬ್ರೌಸರ್ಗಳ ಪೈಕಿ ಅತ್ಯಂತ ಜನಪ್ರಿಯವಾಗಿದ್ದು ಕಳೆದ ಒಂದು ತಿಂಗಳಿನಲ್ಲಿ 500 ಮಿಲಿಯನ್ ಡೌನ್ಲೋಡ್ಗಳನ್ನು ಕಂಡಿದೆ. ಅಲ್ಲದೆ ಭಾರತದಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಹೆಗ್ಗಳಿಕೆ ಇದರದ್ದು.

ಯುಸಿ ಬ್ರೌಸರ್ ಇಷ್ಟೊಂದು ಜನಪ್ರಿಯತೆ ಗಳಿಸಿದ್ದರೂ ಯುಸಿ ಬ್ರೌಸರ್ ತನ್ನ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎನ್ನುವ ಆರೋಪಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಹೀಗಾಗಿ ಕಳೆದ ವಾರ ಗೂಗಲ್ ಪ್ಲೇಸ್ಟೋರ್ ನಿಂದ ಯುಸಿ ಬ್ರೌಸರ್ ಕಾಣೆಯಾದಾಗ ಜನರು ಡೇಟಾ ಸುರಕ್ಷತೆಯ ಕೊರತೆ ಅಥವಾ ಅಪಾಯಕಾರಿ ಪ್ರೊಮೋಶನ್ ಇದಕ್ಕೆ ಕಾರಣವಿರಬಹುದೆಂದು ಸಂದೇಹ ವ್ಯಕ್ತಪಡಿಸಿದ್ದರು.

ಯುಸಿ ವೆಬ್ ನಂತರ ನೀಡಿದ ಹೇಳಿಕೆಯಿಂದ ಇಂತಹ ಊಹಾಪೋಹಗಳಿಗೆ ತೆರೆಬಿದ್ದಿತ್ತು. ಏನೇ ಆಗಲಿ, ಎಲ್ಲರ ಅಚ್ಚುಮೆಚ್ಚಿನ ಯುಸಿ ಬ್ರೌಸರ್ ಮತ್ತೆ ಗೂಗಲ್ ಪ್ಲೇಸ್ಟೋರ್ ಗೆ ಬಂದಿರುವುದು ಸಂತೋಷದ ವಿಷಯವೇ ಸರಿ!

Best Mobiles in India

Read more about:
English summary
UCWeb said yesterday that an updated version of UC Browser is now available for download on Google Play.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X