ನೂತನ ಆಂಡ್ರಾಯ್ಡ್ ಓರಿಯೊನಲ್ಲಿದೆ ಹೊಸ ಆಚ್ಚರಿಗಳು: ಇಲ್ಲಿದೇ ನೋಡಿ.!

Written By:

ಜಗತ್ತಿನ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್ ಓಎಸ್‌ ಗೂಗಲ್ ಒಡೆತನದ ಆಂಡ್ರಾಯ್ಡ್ ಆಗಿದ್ದು, ಸದ್ಯ ಆಂಡ್ರಾಯ್ಡ್ ತನ್ನ ನೂತನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಹಲವಾರು ನೂತನ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ನೂತನ ಆಂಡ್ರಾಯ್ಡ್ ಓರಿಯೊನಲ್ಲಿದೆ ಹೊಸ ಆಚ್ಚರಿಗಳು: ಇಲ್ಲಿದೇ ನೋಡಿ.!

ಓದಿರಿ: ಬಹುನೀರಿಕ್ಷಿತ ಆಂಡ್ರಾಯ್ಡ್ 'O' ಓರಿಯೊ ಬಿಡುಗಡೆ..!

ನೂತನ ಆಂಡ್ರಾಯ್ಡ್‌ಗೆ ಜನಪ್ರಿಯ ಬಿಸ್ಕಟ್ ಓರಿಯೊ ಹೆಸರು ಇಡಲಾಗಿದ್ದು, ಇದು ಆಂಡ್ರಾಯ್ಡ್ 8.0 ಆವೃತ್ತಿಯಾಗಿದೆ. ಈ ನೂತನ ಆವೃತ್ತಿಯಲ್ಲಿ ಬಳಕೆದಾರರಿಗೆ ಆಚ್ಚರಿಯ ಆಯ್ಕೆಗಳನ್ನು ನೀಡಿದ್ದು, ಇದು ಸ್ಮಾರ್ಟ್‌ಫೋನ್ ಅನ್ನು ಇನಷ್ಟು ಸ್ಮಾರ್ಟ್ ಆಗಿಸುವ ಕಾರ್ಯವನ್ನು ಮಾಡಲಿದೆ. ಈ ಹಿನ್ನಲೆಯಲ್ಲಿ ಹೊಸದೇನಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಿಚ್ಚರ್ ಇನ್ ಪಿಚ್ಚರ್:

ಪಿಚ್ಚರ್ ಇನ್ ಪಿಚ್ಚರ್:

ನೂತನ ಆಂಡ್ರಾಯ್ಡ್ ಓರಿಯೊದಲ್ಲಿ ನೀವು ಒಂದೇ ಬಾರಿಗೆ ಒಂದೇ ಸ್ಕ್ರಿನ್‌ನಲ್ಲಿ ಎರಡು ಕಾರ್ಯವನ್ನು ಮಾಡಬಹುದು. ಅದುವೇ ಮಲ್ಟಿ ವಿಂಡೋ ಆಯ್ಕೆ ಇಲ್ಲವಾದರು. ನೀವು ವಿಡಿಯೋ ನೋಡುತ್ತಿರುವ ಸಂದರ್ಭದಲ್ಲಿಯೇ ಮೇಸೆಜ್ ಸ್ವೀಕರಿಸಿ ಅದಕ್ಕೆ ರಿಪ್ಲೇ ಸಹ ಮಾಡಬಹುದಾಗಿದೆ.

ನೋಟಿಫಿಕೇಷನ್:

ನೋಟಿಫಿಕೇಷನ್:

ಈ ಬಾರಿ ಆಂಡ್ರಾಯ್ಡ್ ನೋಟಿಫಿಕೇಷನ್ ಐಓಎನ್‌ನಲ್ಲಿ ಇದ್ದ ಆಯ್ಕೆಯನ್ನು ಎರವಲು ಪಡೆದುಕೊಂಡಿದ್ದು, ನೋಟಿಫಿಕೇಷನ್ ನೋಡುವ ಸಲುವಾಗಿ ನೀವು ಶಾರ್ಟ್ ಕಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಅದನ್ನು ಕ್ಲಿಯರ್ ಮಾಡುವುದು ಸುಲಭವಾಗಲಿದೆ.

ಆಂಡ್ರಾಯ್ಡ್ ಇನ್ಸ್‌ಟೆಂಟ್ ಆಪ್ಸ್:

ಆಂಡ್ರಾಯ್ಡ್ ಇನ್ಸ್‌ಟೆಂಟ್ ಆಪ್ಸ್:

ಗೂಗಲ್ ಈಗಾಗಲೇ ಇನ್ಸ್‌ಟೆಂಟ್ ಆಪ್ಸ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಇದು ಆಂಡ್ರಾಯ್ಡ್ ಓರಿಯೊದಿಂದಲೇ ಶುರುವಾಗಲಿದೆ. ಇದರಲ್ಲಿ ನೀವು ಆಪ್‌ಗಳನ್ನು ಇನ್‌ಸ್ಟಾಲ್ ಮಾಡದೆ ಬ್ರೌಸ್ ಮಾಡಬಹುದಾಗಿದೆ.

ಕನೆಕ್ಟವಿಟಿ:

ಕನೆಕ್ಟವಿಟಿ:

ಈ ಹೊಸ ಓಎಸ್‌ನಲ್ಲಿ ಕನೆಕ್ಟವಿಟಿಯೂ ಉತ್ತಮವಾಗಿದೆ ಎನ್ನಲಾಗಿದೆ. ಹೈ ಕ್ವಾಲಿಟಿ ಬ್ಲೂಟೂಟ್ ಆಡಿಯೋ, Wi-Fi ಅವೇರ್ ಹೊಂದಿದ್ದು, ಇಂಟರ್ನೆಟ್ ಇಲ್ಲದೆಯೂ Wi-Fi ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

ಗೂಗಲ್ ಪ್ಲೇ ಪ್ರೋಟೆಕ್ಟ್:

ಗೂಗಲ್ ಪ್ಲೇ ಪ್ರೋಟೆಕ್ಟ್:

ಗೂಗಲ್ ನೂತನವಾಗಿ ಪರಿಚಯ ಮಾಡಿರುವ ಗೂಗಲ್ ಪ್ಲೆ ಪ್ರೋಟೆಕ್ಟ್ ಆಯ್ಕೆಯೂ ಓರಿಯೊದಲ್ಲಿ ಲಭ್ಯವಿರಲಿದೆ. ಇದು ಫೇಕ್ ಆಪ್‌ಗಳನ್ನು ಮತ್ತು ಮಾಲ್ವೇರ್ ಗಳನ್ನ ತಡೆಯುವ ಕಾರ್ಯವನ್ನು ಮಾಡಲಿದೆ.

ದೀರ್ಘ ಬ್ಯಾಟರಿ ಬಾಳಿಕೆ:

ದೀರ್ಘ ಬ್ಯಾಟರಿ ಬಾಳಿಕೆ:

ಆಂಡ್ರಾಯ್ಡ್ ಓರಿಯೊದಲ್ಲಿ ಮೊಬೈಲ್ ಬ್ಯಾಟರಿಯನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಹೆಚ್ಚಿನ ಬಾಳಿಕೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Introducing Android 8.0 Oreo™. Smarter, faster, more powerful and sweeter than ever. The world's favorite cookie is your new favorite Android release. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot