ಬಹುನೀರಿಕ್ಷಿತ ಆಂಡ್ರಾಯ್ಡ್ 'O' ಓರಿಯೊ ಬಿಡುಗಡೆ..!

ಸೂರ್ಯಗ್ರಹಣದ ಸಂದರ್ಭದಲ್ಲಿ ಗೂಗಲ್ ತನ್ನ ನೂತನ ಆಂಡ್ರಾಯ್ಡ್ 8.0 ಬಿಡುಗಡೆ ಮಾಡಿದ್ದು, ಈ ನೂತನ ಆಂಡ್ರಾಯ್ಡ್‌ಗೆ ಓರಿಯೊ ಎಂದು ನಾಮಕರಣವನ್ನು ಮಾಡಿದೆ.

|

ಸೂರ್ಯಗ್ರಹಣದ ಸಂದರ್ಭದಲ್ಲಿ ಗೂಗಲ್ ತನ್ನ ನೂತನ ಆಂಡ್ರಾಯ್ಡ್ 8.0 ಬಿಡುಗಡೆ ಮಾಡಿದ್ದು, ಈ ನೂತನ ಆಂಡ್ರಾಯ್ಡ್‌ಗೆ ಓರಿಯೊ ಎಂದು ನಾಮಕರಣವನ್ನು ಮಾಡಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಆಂಡ್ರಾಯ್ಡ್ 'O' ಹೆಸರು ಕೊನೆಗೂ ಓರಿಯೊ ಎಂದು ಘೋಷಣೆಯಾಗಿದೆ.

ಓದಿರಿ: ಗೂಗಲ್ -ಶಿಯೋಮಿ ಜುಗಲ್ ಬಂದಿ: ರೂ. 2000ಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್..!

ಈ ನೂತನ ಆಂಡ್ರಾಯ್ಡ್ ಮತ್ತಷ್ಟು ವೇಗವನ್ನು ಹೊಂದಿದ್ದು, ಹೆಚ್ಚು ಸೆಕ್ಯೂರ್ ಆಗಿದೆ ಮತ್ತು ಹೊಸ ಹೊಸ ಆಯ್ಕೆಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ 'O' ವಿಶೇಷತೆಗಳೇನು? ಇದರಲ್ಲಿರುವ ನೂತನ ಆಯ್ಕೆಗಳನ್ನು ಎಂಬುದನ್ನು ತಿಳಿದುಕೊಳ್ಳುವ.

ಮತ್ತೊಂದು ಸಿಹಿ ತಿಂಡಿ:

ಮತ್ತೊಂದು ಸಿಹಿ ತಿಂಡಿ:

ಪ್ರತಿ ಬಾರಿ ನೂತನ ಆಂಡ್ರಾಯ್ಡ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಗೂಗಲ್ ಹೊಸದೊಂದು ಸಿಹಿತಿಂಡಿಯ ಹೆಸರನ್ನು ಇಡುವುದು ವಾಡಿಕೆ. ಈ ಹಿನ್ನಲೆಯಲ್ಲಿ ಈ ಬಾರಿ ತನ್ನ ಆಂಡ್ರಾಯ್ಡ್‌ಗೆ O ನಿಂದ ಶುರುವಾಗ ಯಾವ ಹೆಸರನ್ನು ಇಡಲಿದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಓರಿಯೊ ಎಂದು ನಾಮಕರಣ ಮಾಡಿದರುವುದರಿಂದ ಎಲ್ಲಾ ಕುತೂಹಲಗಳಿಗೂ ತೆರೆಬಿದ್ದಿದೆ.

ಎರಡು ಪಟ್ಟು ಅಧಿಕ ವೇಗ:

ಎರಡು ಪಟ್ಟು ಅಧಿಕ ವೇಗ:

ಆಂಡ್ರಾಯ್ಡ್ 'O' ಎರಡು ಪಟ್ಟು ಅಧಿಕ ವೇಗವನ್ನು ಹೊಂದಿದೆ ಎನ್ನಲಾಗಿದೆ. ಈಗಾಗಲೇ ಬಳಗೆ ಮುಕ್ತವಾಗಿರುವ ಆಂಡ್ರಾಯ್ಡ್ ನ್ಯೂಗಾಗಿಂತಲೂ ಹೆಚ್ಚಿನ ವೇಗವನ್ನು ಹೊಂದಿದರಲಿದೆ. ಈ ಆಂಡ್ರಾಯ್ಡ್ ಮೊದಲಿಗೆ ಗೂಗಲ್ ಫೋನ್‌ಗಳಿಗೆ ಲಭ್ಯವಿರಲಿದೆ.

ಬ್ಯಾಕ್‌ಗ್ರೌಂಡ್ ಟಾಸ್ಕ್ ನಿರ್ವಾಹಣೆ:

ಬ್ಯಾಕ್‌ಗ್ರೌಂಡ್ ಟಾಸ್ಕ್ ನಿರ್ವಾಹಣೆ:

ಇದಲ್ಲದೇ ಬ್ಯಾಕ್‌ಗ್ರಾಂಡ್‌ನಲ್ಲಿ ನಡೆಯುವ ಟಾಸ್ಕ್‌ಗಳನ್ನು ಗೂಗಲ್ ಓರಿಯೊನೇ ನೋಡಿಕೊಳ್ಳಲಿದೆ. ಅಲ್ಲದೇ ಇದರಿಂದ ನಿಮ್ಮ ಬ್ಯಾಟರಿ ಬ್ಯಾಕಪ್ ಸಹ ಉತ್ತಮವಾಗಿರಲಿದೆ. ಜೊತೆಗೆ ಮೊಬೈಲ್ ವೇಗವು ಹೆಚ್ಚಾಗಿರಲಿದೆ.

ಆಟೋ ಫಿಲ್:

ಆಟೋ ಫಿಲ್:

ನೂತನ ಆಂಡ್ರಾಯ್ಡ್ ಓರಿಯೊದಲ್ಲಿ ನಿಮ್ಮ ಲಾಗ್‌ ಇನ್‌ಗಳನ್ನು ಆಂಡ್ರಾಯ್ಡ್ ನೆನಪಿಟ್ಟುಕೊಳ್ಳಲಿದ್ದು, ಈ ಹಿಂದೆ ಕ್ರೋಮ್ ಮತ್ತು ಐಓಎಸ್‌ನಲ್ಲಿ ಮಾತ್ರವೇ ಈ ಆಯ್ಕೆ ಲಭ್ಯವಿತ್ತು. ಸದ್ಯ ಇದು ಆಂಡ್ರಾಯ್ಡ್‌ಗೂ ದೊರೆಯುತ್ತಿದೆ. ಇದರಿಂದ ನಿಮ್ಮ ಫೇವರೆಟ್ ಆಪ್‌ಗಳ ಬಳಕೆ ಮತ್ತಷ್ಟು ಸಲುಭವಾಗಲಿದೆ.

Best Mobiles in India

English summary
google sort of stole the Solar Eclipse 2017’s thunder last night, when it finally announced Android Oreo. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X