Subscribe to Gizbot

ಇನ್ಮುಂದೆ ವಾಟ್ಸ್ಆಪ್‌ನಲ್ಲಿಯೂ ಅಧಿಕೃತ ಖಾತೆ ಗುರುತಿಸಬಹುದು!!..ಹೇಗೆ ಗೊತ್ತಾ?

Written By:

ಏನಾದರು ಹೊಸತನವನ್ನು ತರುತ್ತಲೇ ಇರುವ ಫೇಸ್‌ಬುಕ್ ಇದೀಗ ತನ್ನ ಒಡೆತನದಲ್ಲಿರುವ ವಾಟ್ಸಪ್‍ನಲ್ಲಿಯೂ ಅಧಿಕೃತ ಖಾತೆಗಳು ಗುರುತಿಸುವ ಆಯ್ಕೆಯನ್ನು ತರಲು ಮುಂದಾಗಿದೆ.!! ಹಾಗಾಗಿ, ಇನ್ನು ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿರುವಂತೆ ಸೆಲೆಬ್ರಿಟಿಗಳ, ಅಥವ ಯಾವುದೇ ಕಂಪೆನಿಗಳ ಅಧಿಕೃತ ನಂಬರ್‌ಗಳನ್ನು ನೀವು ಬಹಳ ಸುಲಭವಾಗಿ ಗುರುತಿಸಬಹುದಾಗಿದೆ.!!

ಸೆಲೆಬ್ರಿಟಿ ಅಥವಾ ಬಿಸಿನೆಸ್ ಪೇಜ್ ಹೆಸರಿನ ಸಮೀಪವೇ ಹಸಿರು ಬಣ್ಣದ ಮಧ್ಯೆ ಬಿಳಿ ಟಿಕ್‌ಮಾರ್ಕ್ ಚಿಹ್ನೆಯನ್ನು ವಾಟ್ಸಪ್ ನೀಡಲಿದೆ. ಮೆಸೇಜ್‌ಗಳು ಅಧಿಕೃತವಾದ ಪೇಜ್‌ನಿಂದಲೇ ಬಂದಿದೆ ಎಂದು ಬಳಕೆದಾರರಿಗೆ ಗುರುತಿಸಲು ಚಾಟ್ ಮಾಡುವ ವೇಳೆ ಹಳದಿ ಬಣ್ಣದ ಮೆಸೇಜ್ ಬರುತ್ತದೆ ಎನ್ನಲಾಗಿದೆ.!!

ಬಿಸಿನೆಸ್ ಪೇಜ್ ಹೊಂದಿರುವವರಿಗೆ ಹೊಸ ವಿಶೇಷತೆ ಸೇರಿಸಲು ವಾಟ್ಸಪ್ ಈಗಾಗಲೇ ಪರೀಕ್ಷೆ ನಡೆಸುತ್ತಿದ್ದು, ಅಧಿಕೃತ ವಾಟ್ಸಪ್ ನಂಬರ್ ಹೊಂದಿರುವ ಬಳಕೆದಾರರು ಇನ್ನು ಟಿಕ್ ಮಾರ್ಕ್ ಪಡೆಯಬಹುದಾಗಿದೆ. ಇನ್ನು ಟಿಕ್‌ಮಾರ್ಕ್ ಆಗಿರುವ ಚಾಟ್‌ಗಳನ್ನು ಬಳಕೆದಾರರು ಬ್ಲಾಕ್ ಮಾಡಬಹುದು ಎಂದು ವಾಟ್ಸಪ್ ತಿಳಿಸಿದೆ.

ಇನ್ಮುಂದೆ ವಾಟ್ಸ್ಆಪ್‌ನಲ್ಲಿಯೂ ಅಧಿಕೃತ ಖಾತೆ ಗುರುತಿಸಬಹುದು!!..ಹೇಗೆ ಗೊತ್ತಾ?

ವಾಟ್ಸ್‌ಆಪ್‌ನಲ್ಲಿ ಹೊಸದಾಗಿ ಬರಲಿರುವ ಈ ಫೀಚರ್ಸ್ ಇನ್ನು ಆರಂಭಿಕ ಹಂತದಲ್ಲಿದ್ದು ವಾಟ್ಸಪ್ ಬೀಟಾದ ಆಂಡಾಯ್ಡ್ ಬಳಕೆದಾರರಿಗೆ ಶೀಘ್ರದಲ್ಲಿಯೇ ಲಭ್ಯವಾಗಲಿದೆ. ಪರೀಕ್ಷಾರ್ಥವಾಗಿ ಕೆಲ ಬುಸಿನೆಸ್ ಪೇಜ್‌ಗಳಿಗೆ ಈ ವಿಶೇಷತೆ ನೀಡಿದ ಬಳಿಕ ಈ ಸೇವೆ ಎಲ್ಲ ಬಳಕೆದಾರರಿಗೆ ಸಿಗಲಿದೆ.!!

WhatsApp Tips

ಓದಿರಿ: ಕೂಡಲೇ 'ಸರಾಹ್ ಆಪ್' ಡಿಲೀಟ್ ಮಾಡಿ..ರಹಸ್ಯವಲ್ಲ ಈ ಆಪ್‌!!

Read more about:
English summary
WhatsApp Users can choose to block the businesses.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot