Subscribe to Gizbot

ವಾಟ್ಸ್‌ಆಪ್‌ನಲ್ಲಿ ಪ್ರತಿದಿನ ಸೆಂಡ್ ಆಗುವ ಮೆಸೇಜ್‌ಗಳ ಸಂಖ್ಯೆ ಎಷ್ಟುಗೊತ್ತಾ?..ಶಾಕ್ ಆಗ್ರೀರಾ!!

Written By:

ಫೇಸ್‌ಬುಕ್ ಒಡೆತನದ ಪ್ರಖ್ಯಾತ ಮೆಸೇಂಜಿಂಗ್ ಜಾಲತಾಣ ವಾಟ್ಸ್‌ಆಪ್‌ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ.!! ವೈಬರ್, ಹೈಕ್ನಂತಹ ಆಪ್‌ಗಳಿಂದ ಸ್ಪರ್ಧೆ ಎದುರಿಸುತ್ತಿದ್ದರೂ ಬಳಕೆದಾರರ ವಾಟ್ಸ್‌ಆಪ್‌ ಪ್ರತಿದಿನ ಬಳಕೆದಾರರ ಸಂಖ್ಯೆಯು ವಿಶ್ವದಾದ್ಯಂತ ಈಗ 100 ಕೋಟಿಗೂ ಹೆಚ್ಚು ದಾಟಿದೆ ಎಂದು ವಾಟ್ಸ್ಆಪ್ ತಿಳಿಸಿದೆ.!!

ಕಳೆದ ವರ್ಷವಷ್ಟೆ ಪ್ರತಿತಿಂಗಳು ನಮ್ಮ ಬಳಕೆದಾರರ ಸಂಖ್ಯೆ 100 ಕೋಟಿಗಳಷ್ಟಿದೆ ಎಂದು ನಾವು ಪ್ರಕಟಿಸಿದ್ದೆವು. ಕೇವಲ ಒಂದೇ ವರ್ಷದಲ್ಲಿ ಸಂಬಂಧಿಗಳು, ಸ್ನೇಹಿತರ ಪ್ರತಿದಿನ ಸಂಪರ್ಕದಲ್ಲಿ ಇರುವ ಬಳಕೆದಾರರ ಸಂಖ್ಯೆಯೇ ಈಗ 100 ಕೋಟಿ ದಾಟಿದೆ ಎಂದು ವಾಟ್ಸ್‌ಅಪ್ ಪ್ರಕಟಿಸಿದೆ.!!

ಇನ್ನು ಇದರ ಜೊತೆಗೆ ವಾಟ್ಸ್‌ಆಪ್‌ ಮೂಲಕ ರವಾನೆಯಾಗಿರುವ ಸಂದೇಶ. ವಿಡಿಯೋ, ಬಗ್ಗೆ ಕುತೋಹಲ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದು, ಈ ಸಂದೇಶ ತಾಣದಲ್ಲಿ ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಇವುಗಳ ಹಂಚಿಕೆಯಾಗುತ್ತದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5,500 ಕೋಟಿಗಳಷ್ಟು ಸಂದೇಶ ರವಾನೆ!!

5,500 ಕೋಟಿಗಳಷ್ಟು ಸಂದೇಶ ರವಾನೆ!!

ನಿಮಗೆ ಗೊತ್ತಾ ವಾಟ್ಸ್‌ಆಪ್‌ನಲ್ಲಿ ಪ್ರತಿದಿವಸ 5,500 ಕೋಟಿಗಳಷ್ಟು ಮೆಸೇಜ್‌ಗಳು ಹರಿದಾಡುತ್ತವೆ. ಪ್ರಪಂಚದ ಜನಸಂಖ್ಯೆಗಿಂತಲೂ 7 ಪಟ್ಟು ಮೆಸೇಜ್‌ಗಳು ವಾಟ್ಸ್‌ಆಪ್‌ ರವಾನೆಯಾಗುತ್ತವೆ.!! ಅಂದರೆ ಸರಾಸರಿ ಬಳಕೆದಾರ ಪ್ರತಿದಿನ 55 ಕ್ಕಿಂತ ಹೆಚ್ಚು ಮೆಸೇಜ್‌ಗಳನ್ನು ಸೆಂಡ್ ಮಾಡುತ್ತಾನೆ!!

450 ಕೋಟಿ ಚಿತ್ರಗಳು, 100 ಕೋಟಿ ವಿಡಿಯೋ!!

450 ಕೋಟಿ ಚಿತ್ರಗಳು, 100 ಕೋಟಿ ವಿಡಿಯೋ!!

ವಾಟ್ಸ್‌ಆಪ್‌ನಲ್ಲಿ ಪ್ರತಿದಿವಸ 5,500 ಕೋಟಿಗಳಷ್ಟು ಮೆಸೇಜ್‌ಗಳು ಹರಿದಾಡಿದರೆ, 450 ಕೋಟಿ ಚಿತ್ರಗಳು ಜಾಗತಿಕ ಬಳಕೆದಾರರ ಮಧ್ಯೆ ವಿನಿಮಯಗೊಳ್ಳುತ್ತಿವೆ.!! ಇನ್ನು ವಿಶೇಷವಾಗಿ, ಪ್ರತಿ ದಿನ 100 ಕೋಟಿಗಳಷ್ಟು ವಿಡಿಯೊಗಳೂ ಬಳಕೆದಾರರ ಮಧ್ಯೆ ಹರಿದಾಡುತ್ತಿವೆ.!!

ಭಾರತ ಅತಿದೊಡ್ಡ ಮಾರುಕಟ್ಟೆ

ಭಾರತ ಅತಿದೊಡ್ಡ ಮಾರುಕಟ್ಟೆ

ವಾಟ್ಸ್‌ಆಪ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದ್ದು ವಿಶ್ವದಲ್ಲಿರುವ ವಾಟ್ಸ್‌ಆಪ್ ಬಳಕೆದಾರರಲ್ಲಿ ಭಾರತೀಯರೆ ಹೆಚ್ಚು ವಾಟ್ಸ್‌ಆಪ್ ಬಳಸುತ್ತಿದ್ದಾರೆ. ಪ್ರತಿ ತಿಂಗಳೂ 20 ಕೋಟಿಗೂ ಹೆಚ್ಚು ಬಳಕೆದಾರರು ಭಾರತದಲ್ಲಿ ಸಕ್ರಿಯವಾಗಿದ್ದಾರೆ.!!

60 ಭಾಷೆಗಳಲ್ಲಿ ಸಂದೇಶ ವಿನಿಮಯ

60 ಭಾಷೆಗಳಲ್ಲಿ ಸಂದೇಶ ವಿನಿಮಯ

ಪ್ರಪಮಚದ ಬಹುತೇಕ ಭಾಷೆಗಳಿಗೆ ವಾಟ್ಸ್‌ಆಪ್ ಸಪೋರ್ಟ್ ಮಾಡಲಿದ್ದು, ಇದೀಗ ವಾಟ್ಸ್‌ಆಪ್‌ ಮತ್ತಷ್ಟು ಅಪ್‌ಡೇಟ್ ಆಗಿದೆ. 60 ಭಾಷೆಗಳಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ವಾಟ್ಸ್‌ಆಪ್ ಒದಗಿಸಿದೆ.

ಓದಿರಿ:ಕೂಡಲೇ 3G/4G ವೊಡಾಫೋನ್ ಸಿಮ್ ಖರೀದಿಸಿ..ಈ ಆಫರ್ ಕೇಳಿಯೂ ಇರೊಲ್ಲಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The monthly active users of Facebook-owned WhatsApp are over 1.3 billion and it supports 60 languages globally. Over 4.5 billion photos are shared around the world on WhatsApp every day.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot