ವಾಟ್ಸ್‌ಆಪ್‌ನಲ್ಲಿಯೂ ಶುರುವಾಗಲಿದೆ ಆಡ್‌ಗಳು: ಬೇರೆ ಆಪ್ ಹುಡುಕಿಕೊಳ್ಳಿ..!

|

ಇಷ್ಟು ದಿನ ಯಾವುದೇ ಮೂಲಗಳಿಂದ ಆದಾಯವನ್ನು ಗಳಿಕೆ ಮಾಡದೆ ಕಾರ್ಯನಿರ್ವಹಿಸುತ್ತಿದ್ದ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್, ಇನ್ನು ಮುಂದೆ ದೊಡ್ಡ ಮಟ್ಟದ ಆದಾಯ ನಿರೀಕ್ಷೆಯಲ್ಲಿದೆ. ಇಷ್ಟು ದಿನ ಉಚಿತವಾಗಿ ಸೇವೆ ನೀಡಿದ್ದ ವಾಟ್ಸ್‌ಆಪ್, ಹೊಸ ಮೂಲದಿಂದ ಆದಾಯದ ನಿರೀಕ್ಷೆಯಲ್ಲಿದೆ. ಇದರಿಂದಾಗಿ ಫೇಸ್‌ಬುಕ್‌ಗೆ ದೊಡ್ಡ ಮಟ್ಟದ ಲಾಭವಾಗಲಿದೆ.

ವಾಟ್ಸ್‌ಆಪ್‌ನಲ್ಲಿಯೂ ಶುರುವಾಗಲಿದೆ ಆಡ್‌ಗಳು: ಬೇರೆ ಆಪ್ ಹುಡುಕಿಕೊಳ್ಳಿ..!

ಈಗಾಗಲೇ ವಿಶ್ವದಲ್ಲಿಯೇ ಅತ್ಯಧಿಕ ಮಂದಿ ವಾಟ್ಸ್ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಂಡೋಸ್. ಆಂಡ್ರಾಯ್ಡ್ ಮತ್ತು iOSಗಳಲ್ಲಿ ಹೆಚ್ಚಿನ ಮಂದಿ ಸೋಶಿಯಲ್ ಮೇಸೆಜಿಂಗ್ ಆಪ್ ವಾಟ್ಸ್‌ಆಪ್ ಬಳಸಿಕೊಳ್ಳುತ್ತಿದ್ದು, ಸುಮಾರು ಒಂದು ಬಿಲಿಯನ್‌ಗಳ ಅಧಿಕ ಮಂದಿ ತಿಂಗಳಲ್ಲಿ ಈ ಆಪ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರು ಭಾರತದಲ್ಲಿಯೇ ಇದ್ದಾರೆ ಎನ್ನಲಾಗಿದೆ.

ವಾಟ್ಸ್‌ಆಪ್‌ನಲ್ಲಿ ಆಡ್‌ಗಳು:

ವಾಟ್ಸ್‌ಆಪ್‌ನಲ್ಲಿ ಆಡ್‌ಗಳು:

ಇನ್ನು ಮುಂದೆ ವಾಟ್ಸ್‌ಆಪ್‌ನಲ್ಲಿ ಬಳಕೆದಾರರಿಗೆ ಆಡ್‌ ಗಳನ್ನು ಪ್ರದರ್ಶಿಸಲು ಫೇಸ್‌ಬುಕ್ ಯೋಜನೆಯನ್ನು ರೂಪಿಸಿದೆ. ಈಗಾಗಲೇ ಫೇಸ್‌ಬುಕ್ ಮಾಲೀಕತ್ವಕ್ಕೆ ಸೇರಿಕೊಂಡಿರುವ ಎಲ್ಲಾ ಆಪ್‌ಗಳಲ್ಲಿಯೂ ನೀವು ಆಡ್‌ಗಳನ್ನು ಕಾಣಬಹುದಾಗಿದೆ. ವಾಟ್ಸ್‌ಆಪ್ ಮಾತ್ರವೇ ಇದಕ್ಕೆ ಹೊರತಾಗಿತ್ತು, ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್‌ನಲ್ಲಿಯೂ ಶೀಘ್ರವೇ ಆಡ್ ಕಾಣಿಸಿಕೊಳ್ಳಲಿದೆ.

iOSನಲ್ಲಿ ಮೊದಲಿಗೆ:

iOSನಲ್ಲಿ ಮೊದಲಿಗೆ:

ಪ್ರೀಮಿಯಮ್ ಬಳಕೆದಾರರ ಸಾಲಿಗೆ ಸೇರಿಕೊಂಡಿರುವ iOS ಬಳಕೆದಾರರಿಗೆ ಮೊದಲಿಗೆ ವಾಟ್ಸ್‌ಆಪ್‌ನಲ್ಲಿ ಆಡ್‌ಗಳು ಕಾಣಿಸಿಕೊಳ್ಳಳಿದೆ. ಇದಾದ ನಂತರದಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಯೂ ಆಡ್‌ಗಳನ್ನು ನಾವು ಕಾಣಬಹುದಾಗಿದೆ. ಇದರಿಂದಾಗಿ ಫೇಸ್‌ಬುಕ್ ಗೆ ದೊಡ್ಡ ಮಟ್ಟದಲ್ಲಿ ಆದಾಯವು ಹರಿದುಬರಲಿದೆ ಎನ್ನಲಾಗಿದೆ.

ಫೇಸ್‌ಬುಕ್ ಆಡ್:

ಫೇಸ್‌ಬುಕ್ ಆಡ್:

ಸದ್ಯ ಮಾರುಕಟ್ಟೆಯಲ್ಲಿ ಪರ್ಸನಲೈಜ್ಡ್ ಆಡ್‌ಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಟ್ ಆಗಿರುವ ಹಿನ್ನಲೆಯಲ್ಲಿ ಆ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗುತ್ತಿರುವ ಫೇಸ್‌ಬುಕ್ ಆಡ್‌ಗಳನ್ನು ವಾಟ್ಸ್‌ಆಪ್‌ನಲ್ಲಿಯೂ ಪ್ರದರ್ಶಿಸುವ ಸಾಧ್ಯತೆ ಹೆಚ್ಚಾಗಿದೆ.

ಬದಲಾವಣೆ:

ಬದಲಾವಣೆ:

ಮಾರುಕಟ್ಟೆಯಲ್ಲಿ ಇದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ. ಒಂದು ರೀತಿಯಲ್ಲಿ ಫೇಸ್‌ಬುಕ್ಕಿಗೆ ಅದಾಯವನ್ನು ತಂದುಕೊಟ್ಟರೆ, ಇನ್ನೊಂದು ಮಾದರಿಯಲ್ಲಿ ಬಳಕೆದಾರರು ಆಡ್ ಕಿರಿ ಕಿರಿಯಿಂದಾಗಿ ಮತ್ತೊಂದು ಆಪ್‌ ಕಡೆಗೆ ಮುಖ ಮಾಡಿದರೂ ಆಶ್ಚರ್ಯವಿಲ್ಲ.

Best Mobiles in India

English summary
WhatsApp on iOS could soon start showing ads to users, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X