Subscribe to Gizbot

ನಿಮ್ಮದು 3G ಫೋನಾ..? ಹೊಸ ವರ್ಷದಿಂದ ವಾಟ್ಸ್‌ಆಪ್‌ ಬಂದ್..! ಏನು ಮಾಡಬೇಕು..?

Written By:

ಭಾರತವಲ್ಲದೇ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಸೋಶಿಯಲ್ ಮೇಸೆಂಜಿಗ್ ತಾಣ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಫೇಸ್‌ಬುಕ್‌ ಒಡೆತನ್ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಹೊಸ ದೊಂದು ಶಾಕ್ ಅನ್ನು ನೀಡಿದೆ.

ನಿಮ್ಮದು 3G ಫೋನಾ..? ಹೊಸ ವರ್ಷದಿಂದ ವಾಟ್ಸ್‌ಆಪ್‌ ಬಂದ್..! ಏನು ಮಾಡಬೇಕು..?

ಓದಿರಿ: ಯಾವ ಆಂಡ್ರಾಯ್ಡ್‌ ಫೋನ್‌ನಲ್ಲೂ ಈ ಆಯ್ಕೆಗಳಿಲ್ಲ: ಹಾನರ್ 7X ನಲ್ಲಿ ಮಾತ್ರವೇ...!

ಹಳೇಯ ವಿಂಡೋಸ್‌, ಬ್ಲ್ಯಾಕ್‌ಬೆರಿ ಫೋನ್‌ಗಳಲ್ಲಿ ವಾಟ್ಸ್‌ಆಪ್‌ ಬಳಕೆ ಮಾಡಿಳ್ಳುತ್ತಿರುವವರು ಇನ್ನು ಮುಂದೆ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. 2017ರ ಡಿ.31ರಿಂದ ಅನೇಖ ಫೋನ್‌ಗಳಲ್ಲಿ ವಾಟ್ಸ್‌ಆಪ್ ಸ್ಥಗಿತಗೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರಣವೇನು?

ಕಾರಣವೇನು?

ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹೊಸ ಆಪ್‌ಡೇಟ್ ಅನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್‌ಆಪ್‌, ದಿನದಿಂದ ದಿನಕ್ಕೆ ಅತ್ಯಾಧುನಿಕ ಫೀಚರ್‌ಗಳನ್ನು ನೀಡುತ್ತಿದ್ದು, ಇದರಿಂದ ಅದರ ಗಾತ್ರವೂ ಎರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಹಳೇಯ ಫೋನ್‌ಗಳು ಇದಕ್ಕೆ ಸಪೋರ್ಟ್ ಮಾಡುವುದಿಲ್ಲ. ಇದರಿಂದಾಗಿ ವಾಟ್ಸ್‌ಆಪ್ ಹಳೇ ಫೋನ್‌ಗಳಲ್ಲಿ ತನ್ನ ಸೇವೆಯನ್ನು ನಿಲ್ಲಿಸುವುದಾಗಿ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.

ಯಾವ ಫೋನ್‌ಗಳು:

ಯಾವ ಫೋನ್‌ಗಳು:

ಈಗಾಗಲೇ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವ 'ಬ್ಲ್ಯಾಕ್‌ಬೆರಿ 10', 'ವಿಂಡೋಸ್‌ ಫೋನ್‌ 8.0' ಮತ್ತು 'ಆಂಡ್ರಾಯ್ಡ್ 4.0' ನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳು ಇನ್ನು ಮುಂದೆ ವಾಟ್ಸ್‌ಆಪ್‌ಗೆ ಸಫೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ.

How to save WhatsApp Status other than taking screenshots!! Kannada
ಆದರೂ ಯೋಚನೆ ಇಲ್ಲ:

ಆದರೂ ಯೋಚನೆ ಇಲ್ಲ:

'ಬ್ಲ್ಯಾಕ್‌ಬೆರಿ 10', 'ವಿಂಡೋಸ್‌ ಫೋನ್‌ 8.0' ಮತ್ತು 'ಆಂಡ್ರಾಯ್ಡ್ 4.0' ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿರುವುವರು ಸದ್ಯ ಇನ್‌ಸ್ಟಾಲ್ ಆಗಿರುವ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಆಪ್‌ಡೇಟ್ ದೊರೆಯುವುದಿಲ್ಲ ಮತ್ತು ಹೊಸ ದಾಗಿ ವಾಟ್ಸ್‌ಆಪ್ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಹೊಸ ಫೋನ್ ಖರೀದಿಸಿ:

ಹೊಸ ಫೋನ್ ಖರೀದಿಸಿ:

ಈಗಾಗಲೇ ಹಲವಾರು ಶಾಪಿಂಗ್‌ ತಾಣಗಲು ಹೊಸ ವರ್ಷದ ಅಂಗವಾಗಿ ಹೊಸ ಹೊಸ ಆಫರ್‌ ಗಳನ್ನು ಪರಿಚಯ ಮಾಡುತ್ತಿದ್ದು, ಕಡಿಮೆ ಬೆಲೆಗೆ ಉತ್ತಮ ಫೋನ್‌ಕೊಳ್ಳಲು ಇದು ಉತ್ತಮ ಸಮಯವಾಗಿದೆ. ಈ ಹಿನ್ನಲೆಯಲ್ಲಿ ನೀವು ಹೊಸ ಫೋನ್‌ ಖರೀದಿಸಬೇಕು ಎನ್ನುವ ಪ್ಲಾನ್‌ ಮಾಡಿದರೆ ಇದೇ ಸರಿಯಾದ ಸಮಯ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp to Stop Working on December 31. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot