Subscribe to Gizbot

ಯಾವ ಆಂಡ್ರಾಯ್ಡ್‌ ಫೋನ್‌ನಲ್ಲೂ ಈ ಆಯ್ಕೆಗಳಿಲ್ಲ: ಹಾನರ್ 7X ನಲ್ಲಿ ಮಾತ್ರವೇ...!

Written By:

ಹಾನರ್ ಹೊಸದಾಗಿ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿರುವ ಹಾನರ್ 7X ಸ್ಮಾರ್ಟ್‌ಫೋನ್ ಸಖತ್ ಸದ್ದು ಮಾಡುತ್ತಿದ್ದು, ಆದರಲ್ಲಿಯೂ ಮಧ್ಯಮ ಸರಣಿಯ ಆಂಡ್ರಾಯ್ಡ್‌ ಫೋನ್ ವಿಭಾಗದಲ್ಲಿ ಹೆಚ್ಚು ಆಕರ್ಷಣಿಯವಾಗಿದ್ದು, ರೂ. 12,999ಕ್ಕೆ ದೊರೆಯುತ್ತಿದೆ. ತನ್ನ ವಿಶೇಷತೆಗಳ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. 18:9 ಅನುಪಾತದ ಡಿಸ್‌ಪ್ಲೇ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತಿದೆ.

ಯಾವ ಆಂಡ್ರಾಯ್ಡ್‌ ಫೋನ್‌ನಲ್ಲೂ ಈ ಆಯ್ಕೆಗಳಿಲ್ಲ: ಹಾನರ್ 7X ನಲ್ಲಿ ಮಾತ್ರವೇ...!

ಓದಿರಿ: ಜಿಯೋಗೆ ಶಾಕ್ ನೀಡಿದ BSNL: ರೂ.499ಕ್ಕೆ ಫೀಚರ್ ಫೋನ್, ರೂ.153ಕ್ಕೆ ವರ್ಷದ ಆಫರ್..!

ಅಮೆಜಾನ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಫೋನ್‌ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಒಳಗೊಂಡಿದೆ. ಕಿರನ್ 659 ಪ್ರೋಸೆಸರ್ ಜೊತೆಗೆ ಆಂಡ್ರಾಯ್ಡ್ 7.0ದಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ EMUI 5.1 ಸಹ ಇದರಲ್ಲಿ ಕಾಣಬಹುದಾಗಿದ್ದು, ಇದು ಈ ಫೋನಿನ ಜನಪ್ರಿಯತೆಯನ್ನು ಹೆಚ್ಚಿಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಮಾದರಿಯ ಅನುಭವ:

ಹೊಸ ಮಾದರಿಯ ಅನುಭವ:

ಆಂಡ್ರಾಯ್ಡ್ ನೊಂದಿಗೆ ಕಾಣಿಸಿಕೊಂಡಿರುವ EMUI 5.1 ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ. ಇದು ಸಿಂಪಲ್ ಮೋಡ್ ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ನೋಟಿಫಿಕೇಷನ್ ಮಾದರಿ ಸಹ ಬದಲಾಗಿದೆ. ಅಲ್ಲದೇ ಐಕಾನ್‌ಗಳು ಹೊಸ ಮಾದರಿಯನ್ನು ಮೈಗೂಡಿಸಿಕೊಂಡಿದ್ದು, ಇದು ಬಳಕೆದಾರರಿಗೆ ಹೊಸ ಲೋಕವನ್ನು ಪರಿಚಯ ಮಾಡಲಿದೆ.

ಸ್ಮಾರ್ಟ್‌ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಸ್ಮಾರ್ಟ್‌ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಇದಲ್ಲದೇ ಹಾನರ್ 7X ಸ್ಮಾರ್ಟ್‌ಫೋನಿನಲ್ಲಿ ಸ್ಮಾರ್ಟ್‌ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಇದು ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದು, ಇದು ಕೇವಲ ಫೋನ್ ಅನ್‌ಲಾಕ್ ಮಾಡಲು ಮಾತ್ರವೇ ಬಳಕೆ ಮಾಡಿಕೊಳ್ಳದೆ ಇನ್ನು ಅನೇಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಕಾಲ್ ಅಟೆಂಡ್ ಮಾಡಲು, ವಿಡಿಯೋ ರೆಕಾರ್ಡ್ ಮಾಡಲು, ಪಿಚ್ಚರ್ ಕ್ಲಿಕ್ ಮಾಡಲು ಎಲ್ಲಾ ಕೆಲಸಗಳಿಗೂ ಬಳಕೆಯಾಗಲಿದೆ.

ಸ್ಮಾರ್ಟ್‌ ಬ್ಯಾಟರಿ ಬಳಕೆ:

ಸ್ಮಾರ್ಟ್‌ ಬ್ಯಾಟರಿ ಬಳಕೆ:

ಇದಲ್ಲದೇ EMUI 5.1 ನಲ್ಲಿ ಸ್ಮಾರ್ಟ್‌ ಬ್ಯಾಟರಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದು ಪವರ್ ಸೇವಿಂಗ್ ಮೋಡ್ ಅನ್ನು ನೀಡಿದ್ದು, ಬಳಕೆದಾರರು ಇದರ ಬಳಕೆಯಿಂದಾಗಿ ತಮ್ಮ ಫೋನಿನ ಚಾರ್ಜ್ ಅನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದಾಗಿದೆ. ದೊಡ್ಡ ಸ್ಕ್ರಿನ್ ಇದರೂ ಸಹ ಉತ್ತಮ ಬಾಳಿಕೆ ಬರಲಿದೆ.

ಬಳಕೆಯೂ ಸುಲಭ:

ಬಳಕೆಯೂ ಸುಲಭ:

ಇದಲ್ಲದೇ ಹಾನರ್ 7Xನಲ್ಲಿ ನೀಡಿರುವ EMUI 5.1 ಬಳಕೆಯೂ ಅತ್ಯಂತ ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್‌ನಲ್ಲಿ ನೀಡುವ EMUI 5.1 ಬೇರೆ UI ಗಳಿಗಿಂತ ಸರಳವಾಗಿದೆ. ವಾಟ್ಸ್‌ಆಪ್‌ ನೋಟಿಫಿಕೇಷನ್ ಸೇರಿದಂತೆ ಎಲ್ಲಾ ಮಾದರಿಯೂ ಹೊಸದಾಗಿ ಕಾಣಿಸಿಕೊಂಡಿದೆ.

ಕನೆಕ್ಟಿವಿಟಿ:

ಕನೆಕ್ಟಿವಿಟಿ:

ಇದಲ್ಲದೇ EMUI 5.1 ನಲ್ಲಿ ವೈ-ಫೈ ರೌಟರ್ ಮಾದರಿಯಲ್ಲಿ ಕಾರ್ಯನಿರ್ವಸುವ ದಕ್ಷತೆಯನ್ನು ಹೊಂದಿದ್ದು, ಒಂದೇ ಸಮಯದಲ್ಲಿ 4 ಡಿವೈಸ್‌ಗಳಿಗೆ ಡೇಟಾವನ್ನು ಶೇರಿಂಗ್ ಮಾಡಲಿದೆ. ಅಲ್ಲದೇ ಡೇಟಾ ಟಾರ್ನ್ಫರ್ ಸಹ ಸುಲಭವಾಗಿ ಸಾಧ್ಯವಾಗಲಿದೆ. ಅಲ್ಲದೇ ಕ್ಲವ್ಡ್ ಸೇವೆಯೂ ಇದರಲ್ಲಿದೆ.

ಪ್ರೀ ಲೋಡ್ ಆಪ್ಸ್:

ಪ್ರೀ ಲೋಡ್ ಆಪ್ಸ್:

ಇದಲ್ಲದೇ EMUI 5.1 ನಲ್ಲಿ ಪ್ರಿಲೋಡ್‌ ಆಪ್‌ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಕಾಲ್ ರೆಕಾರ್ಡ್, ವೆದರ್, ಕಾಲ್ಯೂಕ್ಲೇಟರ್, FM ರೇಡಿಯೋ. ಸೇರಿದಂತೆ ವಿವಿಧ ಆಪ್‌ಗಳನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಸದ್ಯದ ಮಾರುಕಟ್ಟೆಯಲ್ಲಿ EMUI 5.1 ಅತ್ಯಂತ ಬೆಸ್ಟ್ ಎನ್ನುವ ಮಾತು ಬಳಕೆದಾರರಿಂದ ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 7X runs one the most feature rich custom skin- EMUI 5.1. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot