Subscribe to Gizbot

ವಾಟ್ಸ್ಆಪ್ ಸ್ಟೇಟಸ್ ಹೈಡ್ ಮಾಡುವುದೇಗೆ..? ಇನ್ನು ಹಲವು ವಾಟ್ಸ್ಆಪ್ ಸೀಕ್ರೆಟ್‌ಗಳು..!

Written By:
ನಾವು ದಿನನಿತ್ಯ ಬಳಸುತ್ತಿರುವ ಮೆಸೆಂಜಿಗ್ ಆಪ್ ಫೇಸ್‌ಬುಕ್, ಒಡೆತನಕ್ಕೆ ಸೇರಿದ ವಾಟ್ಸ್ಆಪ್ ಅನ್ನು ಇಂದು ಪ್ರಪಂಚದಲ್ಲಿ ಸರಿ ಸುಮಾರು ಒಂದು ಬಿಲಿಯನ್ ಮಂದಿ ಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ. ಈ ಆಪ್‌ನಲ್ಲಿ ಹತ್ತು ಹಲವು ವಿಶೇಷತೆಗಳಿದ್ದು, ನಾವು ಒಮ್ಮೆಯೂ ಬಳಸದ ವಿಷೇಶತೆಗಳ ಕುರಿತ ಮಾಹಿತಿ ಇಲ್ಲಿದೆ.

ವಾಟ್ಸ್ಆಪ್ ಸ್ಟೇಟಸ್ ಹೈಡ್ ಮಾಡುವುದೇಗೆ..? ಇನ್ನು ಹಲವು ವಾಟ್ಸ್ಆಪ್ ಸೀಕ್ರೆಟ್‌ಗಳು

ಇಂದಿನ ದಿನದಲ್ಲಿ ಕೇವಲ ಯುವಕ ಯುವತಿಯರು ಅಲ್ಲದೇ ಹಿರಿಯರು ಸಹ ವಾಟ್ಸ್ಆಪ್ ಬಳಕೆಗೆ ಮುಂದಾಗಿದ್ದಾರೆ. ಕೇವಲ ಮನೋರಂಜನೆ ಮಾತ್ರವಲ್ಲದೇ ಮಾಹಿತಿ ವಿನಿಮಯಕ್ಕೆ, ವಾಯ್ಸ್ ಮೇಲ್ ಕಳುಹಿಸುವುದಕ್ಕೆ, ಪೋನಿನಲ್ಲಿ ಮಾತನಾಡುವುದು ಸೇರಿದಂತೆ ದಾಖಲೆಗೆಳ ಮತ್ತು ಪೋಟೋಗಳ ವಿನಿಮಯದ ಮಾಧ್ಯಮವಾಗಿಯೂ ಬಳಕೆಯಾಗುತ್ತಿದೆ. ಹಿನ್ನಲೆಯಲ್ಲಿ ವಾಟ್ಸ್ಆಪ್ ವಿಷೇಶತೆಗಳು ಈ ಕೆಳಕಡಂತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್ಆಪ್ ವಾಯ್ಸ್ ಕಾಲಿಂಗ್ ನೊಂದಿಗೆ ಮೇಸೆಜ್:

ವಾಟ್ಸ್ಆಪ್ ವಾಯ್ಸ್ ಕಾಲಿಂಗ್ ನೊಂದಿಗೆ ಮೇಸೆಜ್:

ನೀವು ವಾಟ್ಸ್ಆಪ್ ಮೂಲಕ ವಾಯ್ಸ್ ಕಾಲ್ ಮಾಡಿ ನಿಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ ಅದರೊಂದಿಗೆ ಇನ್ನೊಬ್ಬ ಸ್ನೇಹಿತರೊಂದಿಗೂ ಮೇಸೆಜ್ ಮೂಲಕ ಚಾಟ್ ನಡೆಸಬಹುದಾಗಿದೆ. ನೀವು ಪೋನಿನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಕೆಳಗೆ ನೀಡಿರುವ ಮೇಸೆಜ್ ಸಿಂಬಲ್ ಅನ್ನು ಒತ್ತುವ ಮೂಲಕ ನೀವು ಚಾಟ್ ವಿಂಡೋವನ್ನು ಪ್ರವೇಶಿಸಬಹುದಾಗಿದೆ.

ವಾಯ್ಸ್ ಟೈಪಿಂಗ್:

ವಾಯ್ಸ್ ಟೈಪಿಂಗ್:

ನೀವು ವಾಟ್ಸ್ಆಪ್ ಚಾಟಿಂಗ್ ನಡೆಸುವ ಸಂದರ್ಭಗಳಲ್ಲಿ ಮೇಸೆಜ್ ಟೈಪ್ ಮಾಡಲು ಸಮಯವಿಲ್ಲದ ಸಂದರ್ಭದಲ್ಲಿ ಮೈಕ್ ಅನ್ನು ಒತ್ತಿ ಹಿಡಿದು ವಾಯ್ಸ್ ಮೇಸೆಜ್ ಹೇಳಿದರೆ ಅದು ಹಾಗೇಯೆ ಮೇಸೆಜ್ ಮಾದರಿಯಲ್ಲಿ ಟೈಪ್ ಆಗಲಿದೆ. ಆದರೆ ಇದು ಸಣ್ನ ಪುಟ್ಟ ವಾಕ್ಯಗಳಿಗೆ ಮಾತ್ರ ಸೀಮಿತವಾಗಿದೆ. ' how are you' 'I am fine' ಈ ರೀತಿಯ ವಾಕ್ಯ ರಚನೆಗೆ ಸಹಾಯಕಾರಿಯಾಗಿದೆ.

ಹೋಮ್ ಸ್ಕ್ರಿನ್‌ನಲ್ಲಿ ಮುಖ್ಯವಾದ ನಂಬರ್‌ಗಳು:

ಹೋಮ್ ಸ್ಕ್ರಿನ್‌ನಲ್ಲಿ ಮುಖ್ಯವಾದ ನಂಬರ್‌ಗಳು:

ನೀವು ಜಾಸ್ತಿ ಯಾರೊಂದಿಗೆ ಚಾಟಿಂಗ್ ನಡೆಸುವಿರೋ ಅಂತಹ ವ್ಯಕ್ತಿಯ ನಂಬರ್‌ ಅನ್ನು ನಿಮ್ಮ ಮೊಬೈಲ್‌ನ ಹೋಮ್ ಸ್ಕ್ರಿನ್‌ ನಲ್ಲಿ ಶಾರ್ಟ್‌ಕಟ್ ಆಗಿ ಇಟ್ಟುಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ವಾಟ್ಸ್ಆಪ್ ನಲ್ಲಿ ಕಾಂಟೆಕ್ ಮೇಲೆ ಲಾಂಗ್ ಪ್ರೈಸ್ ಮಾಡಿ ಸಂದರ್ಭದಲ್ಲಿ ಕಾಣುವ ಮೂರು ಚುಕ್ಕಿಗಳಲ್ಲಿ ಇರುವ ಆಯ್ಕೆಗಳಲ್ಲಿ 'ಆಡ್ ಶಾರ್ಟ್‌ಕಟ್' ಆಯ್ಕೆ ಮಾಡಿಕೊಂಡರೆ ನಿಮ್ಮ ಹೋಮ್ ಸ್ಕ್ರಿನ್‌ನಲ್ಲಿ ನೀವು ಬಯಸಿದ ನಂಬರ್ ಬಂದು ಕೂರಲಿದೆ.

ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡಬಹುದು;

ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡಬಹುದು;

ಇಷ್ಟುದಿನ ವಾಟ್ಸ್‌ಆಪ್ ನಿಂದ ಡೊಡ್ಡ ಪ್ರಮಾಣದ ಡಾಕ್ಯುಮೆಂಟ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಸದ್ಯ ನೀಡಿರುವ ಹೊಸ ಆಪ್‌ಡೇಟ್‌ನಲ್ಲಿ ಗೂಗಲ್ ಡ್ರೈವ್ , ಡ್ರಾಪ್‌ ಬಾಕ್ಸ್, ಮೂಲಕ ಕ್ಲೌಡ್‌ನಲ್ಲಿಯೇ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದಾಗಿದೆ.

ಲಾಸ್ಟ್ ಸಿನ್, ಸ್ಟೇಟಸ್ ಹೈಡ್ ಮಾಡುವುದೇಗೆ..?

ಲಾಸ್ಟ್ ಸಿನ್, ಸ್ಟೇಟಸ್ ಹೈಡ್ ಮಾಡುವುದೇಗೆ..?

ಇನ್ನು ಹಲವು ಮಂದಿ ವಾಟ್ಸ್ಆಪ್‌ ಬಳಕೆದಾರರಿಗೆ ತಮ್ಮ ಲಾಸ್ಟ್‌ ಸಿನ್ ಮತ್ತು ಸ್ಟೇಟಸ್ ಹೈಡ್ ಮಾಡುವುದು ಹೇಗೆ ಎಂಬುದೇ ತಿಳಿದಿಲ್ಲ. ಸ್ಟೇಟಸ್ ಹಾಕಲು ಮನಸಿಲ್ಲದವರು ಕಡೆ ಪಕ್ಷ ಒಂದು ಚುಕ್ಕೆಯನ್ನು ಇಡುತ್ತಾರೆ. ಆದರೆ ನಿಮ್ಮ ಸ್ಟೇಟಸ್ ಹೈಡ್ ಮಾಡಬಹುದಾಗಿದೆ. ವಾಟ್ಸ್ಆಪ್ ಸೆಟ್ಟಿಂಗ್ಸ್‌ನಲ್ಲಿ ಪ್ರೈವಸಿ ಆಯ್ಕೆಯಲ್ಲಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೋಬಡಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕು ನಿಮ್ಮ ಸ್ಟೇಟಸ್ ಹೈಡ್ ಆಗಲಿದೆ. ಲಾಸ್‌ ಸಿನ್ ಸಹ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
WhatsApp is now more useful and more fun. The messaging platform recently announced Call Back and Voicemail options, and is reportedly working on a video calling feature. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot