India

ವಾಟ್ಸ್‌ಆಪ್ ಸ್ಟೇಟಸ್ ಇಷ್ಟ ಆಯ್ತಾ? ಡೌನ್‌ಲೋಡ್‌ ಮಾಡ್ಕೊಳ್ಳಿ..! ಸಿಂಪಲ್‌ ಟ್ರಿಕ್‌..!

By GizBot Bureau
|

ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ವೈಶಿಷ್ಟ್ಯವು ಪರಿಚಯವಾದಾಗಿನಿಂದಲೂ ಗುಡ್ ಮಾರ್ನಿಂಗ್ ಮೆಸೇಜ್ ಗಳು, ವೀಡಿಯೋಗಳು, ಫೋಟೋ ಗಳು, ಹಬ್ಬಹರಿದಿನಗಳ ವಿಷ್ ಗಳನ್ನು ತಮ್ಮ ಎಲ್ಲಾ ಕಾಂಟ್ಯಾಕ್ಟ್ ಗೆ ಕಳಿಸುವುದನ್ನು ಬಿಟ್ಟು ಸ್ಟೇಟಸ್ ಹಾಕುವ ಅಭ್ಯಾಸವನ್ನು ಭಾರತೀಯರು ರೂಢಿ ಮಾಡಿಕೊಂಡರು. ಸ್ಟೇಟಸ್ ನಲ್ಲಿರುವ ವೀಡಿಯೋಗಳನ್ನು ಅಪ್ ಲೋಡ್ ಮಾಡುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ ಮತ್ತು ದೊಡ್ಡ ಕೆಲಸವಾಗಿಯೂ ಇರುವುದಿಲ್ಲ.

ಅಷ್ಟೇ ಯಾಕೆ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಹೆಚ್ಚಿನ ಮಂದಿ ಇದನ್ನು ನೋಡುತ್ತಾರೆ. ಹೆಚ್ಚು ಜನರು ನೋಡಿದಾಗ ಹೆಚ್ಚು ಪ್ರಸಿದ್ಧಿಯನ್ನು ಆ ಸ್ಟೇಟಸ್ ಪಡೆದುಕೊಳ್ಳುತ್ತದೆ. ಆದರೆ ಒಂದು ವೇಳೆ ಯಾರದ್ದೋ ಸ್ಟೇಟಸ್ ನಿಮಗೆ ಇಷ್ಟವಾದಲ್ಲಿ ಅದನ್ನು ಡೌನ್ ಲೋಡ್ ಮಾಡಬೇಕು ಎಂದೆನಿಸಿದರೆ ಅದು ಸಾಧ್ಯವಿಲ್ಲ ಅಲ್ಲವೇ?

ವಾಟ್ಸ್‌ಆಪ್ ಸ್ಟೇಟಸ್ ಇಷ್ಟ ಆಯ್ತಾ? ಡೌನ್‌ಲೋಡ್‌ ಮಾಡ್ಕೊಳ್ಳಿ..! ಸಿಂಪಲ್‌ ಟ್ರಿಕ್

ಒಂದು ವೇಳೆ ಇಷ್ಟವಾಗಿದ್ದು ಸ್ಟೇಟಸ್ ಫೋಟೋವಾದರೆ ಅದನ್ನು ಸ್ಕ್ರೀನ್ ಶಾಟ್ ತೆಗೆದು ಕ್ರಾಪ್ ಮಾಡಿ ಸೇವ್ ಮಾಡಿಕೊಳ್ಳಬಹುದು. ಆದರೆ ಒಂದು ವೇಳೆ ಅದು ವೀಡಿಯೋ ಆಗಿದ್ದರೆ ಹೇಗೆ ಅದನ್ನು ಪಡೆದುಕೊಳ್ಳುವುದು. ಇಲ್ಲಿಯವರೆಗೆ ನೀವು ಸ್ಟೇಟಸ್ ಹಾಕಿದವರ ಬಳಿಯೇ ಸೆಂಡ್ ಮಾಡುವಂತೆ ಕೋರಬೇಕಿತ್ತು. ಇಲ್ಲದೇ ಇದ್ದರೆ ಆ ವೀಡಿಯೋ ಅವರ ಸ್ಟೇಟಸ್ ನಿಂದ 24 ಘಂಟೆಯ ನಂತರ ಅಳಿಸಿ ಹೋಗುತ್ತದೆ.

ಇತ್ತೀಚೆಗೆ ನಡೆದ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ನ ಕಾನ್ಫರೆನ್ಸ್ ಒಂದರಲ್ಲಿ ಸಂಸ್ಥೆ ತಿಳಿಸಿರುವಂತೆ ಸುಮಾರು 450 ಮಿಲಿಯನ್ ಮಂದಿ ವಾಟ್ಸ್ ಆಪ್ ಸ್ಟೇಟಸ್ ವೈಶಿಷ್ಟ್ಯವನ್ನು ಸದ್ಯ ಬಳಸುತ್ತಿದ್ದಾರೆ. ಇದರಿಂದಲೇ ನೀವು ತಿಳಿದುಕೊಳ್ಳಬಹುದು ಇದರ ಪ್ರಸಿದ್ಧಿ ಎಷ್ಟರಮಟ್ಟಿಗೆ ದೊಡ್ಡದಾಗಿದೆ ಎನ್ನುವುದನ್ನು ಅಲ್ಲವೇ?

ವಾಟ್ಸ್ ಆಪ್ ಸ್ಟೇಟಸ್ ನ ಇಮೇಜ್ ಮತ್ತು ವೀಡಿಯೋಗಳನ್ನು ಸೇವ್ ಮಾಡಿಕೊಳ್ಳುವುದಕ್ಕೆ ಎರಡು ವಿಧಾನಗಳಿವೆ. ಮೊದಲನೆಯದು ಯಾವುದೇ ಥರ್ಡ್ ಪಾರ್ಟಿ ಆಪ್ ಗಳನ್ನು ಡೌನ್ ಲೋಡ್ ಮಾಡುವ ಅಗತ್ಯತೆ ಇಲ್ಲ ಅಥವಾ ನಿಮ್ಮ ಫೋನ್ ನಲ್ಲಿ ಯಾವುದೇ ರಿಸ್ಟ್ರಿಕ್ಷನ್ ಗಳನ್ನು ಬೈಪಾಸ್ ಮಾಡುವ ಅಗತ್ಯತೆ ಇಲ್ಲ. ಇದು ತುಂಬಾ ಸರಳವಾಗಿರುವ ಮತ್ತು ಕಷ್ಟರಹಿತವಾಗಿರುವ ಒಂದು ವಿಧಾನವಾಗಿದೆ. ಎರಡನೆಯದು ಥರ್ಡ್ ಪಾರ್ಟಿ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು.

ಇದರಲ್ಲಿ ನೀವು ಪ್ರೈವೆಸಿ ಪಾಲಿಸಿಗಳನ್ನು ಗಂಭೀರವಾಗಿ ಪರೀಕ್ಷಿಸಬೇಕಾಗುತ್ತದೆ ಮತ್ತು ಆ ಮೂಲಕ ನಿಮ್ಮ ಡಾಟಾಗಳು ಸೇಫ್ ಆಗಿರಲಿವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ. ನೀವು ಇನ್ನೊಬ್ಬರ ವಾಟ್ಸ್ ಆಪ್ ಸ್ಟೇಟಸ್ ನ್ನು ಗಮನಿಸಿದಾಗ, ಈ ಆಪ್ ಗಳು '.status’ ಅನ್ನೋ ಹೆಸರಿನ ಒಂದು ಟೆಂಪರರಿ ಫೋಲ್ಡರ್ ನಲ್ಲಿ ಸೇವ್ ಮಾಡಿ ಇಡುತ್ತದೆ. ಈ ಫೋಲ್ಡರ್ ವಾಟ್ಸ್ ಆಪ್ ನ ಪೇರೆಂಟ್ ಫೋಲ್ಡರ್ ನಲ್ಲಿ ಹಿಡನ್ ಆಗಿರುತ್ತದೆ ಯಾಕೆಂದರೆ ಅದಕ್ಕೆ ಕಾಪಿರೈಟ್ ನ ಸಮಸ್ಯೆ ಎದುರಾಗುತ್ತದೆ.

ವಾಟ್ಸ್‌ಆಪ್ ಸ್ಟೇಟಸ್ ಇಷ್ಟ ಆಯ್ತಾ? ಡೌನ್‌ಲೋಡ್‌ ಮಾಡ್ಕೊಳ್ಳಿ..! ಸಿಂಪಲ್‌ ಟ್ರಿಕ್

ಇದನ್ನು ನೀವು ಫೈಲ್ ಮ್ಯಾನೇಜರ್ ನ ಮೆನು ಆಯ್ಕೆ ಬಳಸಿ ಅನ್ ಹೈಡ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಫೈಲ್ ಮ್ಯಾನೇಜರ್ ನ ನೇಟಿವ್ ಫೋಲ್ಡರ್ ಅನ್ ಹೈಡ್ ಮಾಡಲು ಅವಕಾಶ ನೀಡದೇ ಇದ್ದಲ್ಲಿ, ಗೂಗಲ್ ಪ್ಲೇ ಸ್ಟೋರ್ ಮೂಲಕ ಬೇರೆ ಯಾವುದಾದರೂ ಫೈಲ್ ಎಕ್ಸ್ ಪ್ಲೋರರ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಮತ್ತು ಲೋಕೇಷನ್ ನ್ನು ನೇವಿಗೇಟ್ ಮಾಡಿಕೊಳ್ಳಬೇಕು ಮತ್ತು ನಂತರ ಫೋಲ್ಡರ್ ನ್ನು ವಿಸಿಬಲ್ ಮಾಡಿಕೊಳ್ಳಿ.

ಇದೇ ಮೆಥೆಡ್ ನ್ನು ವಾಟ್ಸ್ ಆಪ್ ಐಓಎಸ್ ನಲ್ಲೂ ಅನುಸರಿಸಬೇಕು. ಹೀಗೆ ಮಾಡುವುದರಿಂದಾಗಿ ನೀವು ಇತರರ ಸ್ಟೇಟಸ್ ಫೋಟೋವನ್ನು ಗ್ಯಾಲರಿಯಲ್ಲಿ ಸೇವ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಈ ವಿಧಾನದಿಂದ ನೀವು ಕೇವಲ ಫೋಟೋವನ್ನು ಮಾತ್ರ ಸೇವ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂಬುದು ನೆನಪಿರಲಿ

ಎರಡನೇ ವಿಧಾನವು ನೀವು ಥರ್ಡ್ ಪಾರ್ಟಿ ಆಪ್ ಗಳನ್ನು ಡೌನ್ ಲೋಡ್ ಮಾಡುವುದಾಗಿದ್ದು ಅದಕ್ಕಾಗಿ 'Story Saver for WhatsApp’ ನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಈ ಆಪ್ ನ್ನು ಇನ್ಸ್ಟಾಲ್ ಮಾಡಿ ಅಥವಾ ಎಪಿಕೆ ಫೈಲ್ ನ್ನು ಸೈಡ್ ಲೋಡ್ ಮಾಡಿ. ವಾಟ್ಸ್ ಆಪ್ ಸ್ಟೇಟಸ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾದ ಹಲವು ಆಪ್ ಗಳು ಲಭ್ಯವಿದೆ.

ಅದನ್ನು ಇನ್ಸ್ಟಾಲ್ ಮಾಡಿದ ನಂತರ ನೀವು ಆಪ್ ನ್ನು ತೆರೆಯಿರಿ ಮತ್ತು ಆಪ್ ಸ್ವಯಂಚಾಲಿತವಾಗಿ ನಿಮ್ಮ ವಾಟ್ಸ್ ಆಪ್ ಅಕೌಂಟಿಗೆ ಕನೆಕ್ಟ್ ಆಗುತ್ತದೆ.ಈಗ, 'Recent Stories’ ನ್ನು ಟ್ಯಾಪ್ ಮಾಡಿ ಮತ್ತು ಯಾವ ಸ್ಟೋರಿಯನ್ನು ನೀವು ಡೌನ್ ಲೋಡ್ ಮಾಡಬೇಕೋ ಅದನ್ನು ಟ್ಯಾಪ್ ಮಾಡಿ. ನಂತರ ಡೌನ್ ಲೋಡ್ ಬಟನ್ ನ್ನು ಒತ್ತಿ. ಈ ಬಟನ್ ನಿಮ್ಮ ಸ್ಕ್ರೀನಿನ ಬಲ ಕಾರ್ನರ್ ನಲ್ಲಿ ಇರುತ್ತದೆ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿರುವ ಎಲ್ಲಾ ಚಿತ್ರಗಳು ಮತ್ತು ವೀಡಿಯೋಗಳು ನಿಮ್ಮ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ.

Most Read Articles
Best Mobiles in India

English summary
WhatsApp trick! Liked someone’s WA status message picture, video? Now, you can download it – Here is how. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X