ಬಳಕೆದಾರರೇ ಇಲ್ಲಿ ನೋಡಿ ಬದಲಾಗಿದೆ ವಾಟ್ಸ್ಆಪ್ ..!!
ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್‌ಆಪ್, ಫೇಸ್‌ಬುಕ್ ಮಾಲೀಕತ್ವಕ್ಕೆ ಸೇರಿದ ಮೇಲೆ ಹಲವಾರು ಬದಲಾವಣೆಯನ್ನು ಮಾಡಿಕೊಂಡಿದೆ. ಇದೇ ಮಾದರಿಯಲ್ಲಿ ಈ ಬಾರಿ ಹೊಸದೊಂದು ಆಯ್ಕೆಯನ್ನು ನೀಡಿದೆ.
ವಾಟ್ಸ್‌ಆಪ್ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ವಿಶ್ವದ ಅತೀ ಹೆಚ್ಚಿನ ಮಂದಿ ಬಳಕೆ ಮಾಡುತ್ತಿರುವ ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್‌ಆಪ್, ಫೇಸ್‌ಬುಕ್ ಮಾಲೀಕತ್ವಕ್ಕೆ ಸೇರಿದ ಮೇಲೆ ಹಲವಾರು ಬದಲಾವಣೆಯನ್ನು ಮಾಡಿಕೊಂಡಿದೆ. ಇದೇ ಮಾದರಿಯಲ್ಲಿ ಈ ಬಾರಿ ಹೊಸದೊಂದು ಆಯ್ಕೆಯನ್ನು ನೀಡಿದೆ.

ಓದಿರಿ: ಅಮೆಜಾನ್ ನಲ್ಲಿ ನೋಕಿಯಾ ಪ್ರೀ ಬುಕಿಂಗ್ ಶುರು: ಭರ್ಜರಿ ಆಫರ್ ಇದೆ..!
ಈ ಹೊಸ ಆಪ್‌ಡೇಟ್ ಆಂಡ್ರಾಯ್ಡ್ ಬಳಕೆದಾರರಿಗೆ ದೊರೆಯುತ್ತಿದ್ದು, ಈ ಹೊಸ ಆಯ್ಕೆಯೂ ವಾಟ್ಸ್ಆಪ್ ಖ್ಯಾತಿಯನ್ನು ಇನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎನ್ನಲಾಗಿದೆ. ಬೇರೆ ಸೋಶಿಯಲ್ ಮೆಸೆಂಜಿಗ್ ಆಪ್ ಗಳಲ್ಲಿ ಇಲ್ಲದಂತಹ ಆಯ್ಕೆಯನ್ನು ವಾಟ್ಸ್ ಆಪ್ ಈ ಬಾರಿ ನೀಡುತ್ತಿದೆ.

ಎಲ್ಲಾ ಮಾದರಿಯ ಫೈಲ್ ಗಳನ್ನು ಕಳುಹಿಸಬಹುದು:
ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ತಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಮಾದರಿಯ ಫೈಲ್ ಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇತ್ತಿಚೇಗೆ ವಾಟ್ಸ್ ಆಪ್ ಕೇಲವ ಮೇಸೆಂಜಿಗ್ ಮಾತ್ರವಲ್ಲ ಮಾಹಿತಿ ವಿನಿಮಯಕ್ಕೂ ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಹೊಸ ಆಯ್ಕೆಯೂ ದೊರೆತಿದೆ.

ಮೀಡಿಯಾ ಬಲ್ಕ್ ಕಳುಹಿಸಬಹುದು:
ಇದೇ ಮಾದರಿಯಲ್ಲಿ ನಿಮ್ಮಲ್ಲಿರುವ ಫೋಟೋ ಇಲ್ಲವೇ ಆಲ್ಬಮ್ ಗಳನ್ನು ಒಟ್ಟಾಗಿ ಬಲ್ಕ್ ಆಗಿ ಸೆಂಡ್ ಮಾಡುವ ಅವಕಾಶವನ್ನು ವಾಟ್ಸ್ ಆಪ್ ಮಾಡಿಕೊಟ್ಟಿದೆ. ಈ ಹಿಂದೆ ಒಂದರ ಹಿಂದೆ ಒಂದನ್ನು ಕಳುಹಿಸಬೇಕಾಗಿತ್ತು.

ಮೇಸೆಜ್ ರಿಕಾಲ್:
ತಪ್ಪಿ ಕಳುಹಿಸಿದ ಮೇಸೆಜ್ ಆನ್ನು ಹಿಂಪಡೆಯುವ ಅವಕಾಶವನ್ನು ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡುತ್ತಿದೆ. ಬಹಳ ದಿನಗಳಿಂದ ಈ ಆಯ್ಕೆಯನ್ನು ನೀಡುವಂತೆ ಬಳಕೆದಾರು ಮನವಿ ಮಾಡುತ್ತಿದ್ದರೂ ಎನ್ನಲಾಗಿದೆ.

ವಾಟ್ಸ್ ಆಪ್ ಕಾಲ್ ಕೂಡ ಬದಲಾಗಿದೆ:
ಇದಲ್ಲದೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ವಾಟ್ಸ್ ಆಪ್ ಕಾಲ್ ಇಂಟರ್ಫೇಸ್ ಸಹ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ. ಇದು ಸಹ ಬಳಕೆದಾರಿಗೆ ಹೊಸ ಅನುಭವನ್ನು ನೀಡಲಿದೆ.


Click it and Unblock the Notifications








