ಜಿಯೋ ಫೋನ್ ನಲ್ಲಿ ಲಭ್ಯವಾಗಲಿದೆ ವಾಟ್ಸ್ ಆಪ್ ವಾಯ್ಸ್ ಕಾಲ್ – ಫೀಚರ್ ಪಡೆಯುವುದು ಹೇಗೆ ಇಲ್ಲಿದೆ ನೋಡಿ

By Gizbot Bureau
|

ಇತ್ತೀಚೆಗೆ ಹೆಚ್ಚಿನವರು ಕರೆ ಮಾಡುವುದಕ್ಕೂ ಕೂಡ ವಾಟ್ಸ್ ಆಪ್ ಬಳಸುತ್ತಾರೆ. ಆದರೆ ಈ ಸೌಲಭ್ಯ ಜಿಯೋ ಫೋನ್ ಗಳಲ್ಲಿ ಇಷ್ಟು ದಿನ ಇಲ್ಲದೆ ಇದ್ದದ್ದು ಜಿಯೋ ಬಳಕೆದಾರರ ನಿರಾಸೆಗೆ ಕಾರಣವಾಗಿತ್ತು. ಆದರೀಗ ಈ ನಿರಾಸೆ ದೂರವಾಗಿದೆ.

ಜಿಯೋ ಫೋನ್ ನಲ್ಲಿ ಲಭ್ಯವಾಗಲಿದೆ ವಾಟ್ಸ್ ಆಪ್ ವಾಯ್ಸ್ ಕಾಲ್

ಕಿಯೋಸ್ ಗೆ ಅಂತಿಮವಾಗಿ ವಾಯ್ಸ್ ಕಾಲ್ ನ್ನು ವಾಟ್ಸ್ ಆಪ್ ಸಂಸ್ಥೆ ಸೇರಿಸಿದೆ.512ಎಂಬಿ ಮೆಮೊರಿ ವ್ಯವಸ್ಥೆ ಇರುವ ಎಲ್ಲಾ ಸ್ಮಾರ್ಟ್ ಫೀಚರ್ ಫೋನ್ ಗಳಲ್ಲಿ ಈ ಫೀಚರ್ ಫೋನ್ ಲಭ್ಯವಾಗಲಿದೆ. ಹಾಗಾದ್ರೆ ವಾಟ್ಸ್ ಆಪ್ ಕಾಲ್ ಫೀಚರ್ ನ್ನು ಎಲ್ಲಿ ಹೇಗೆ ಪಡೆಯಬೇಕು ಜಿಯೋ ಫೋನ್ ನಲ್ಲಿ ಎಂದು ಯೋಚಿಸುತ್ತಿದ್ದೀರಾ? ಹಂತಹಂತವಾಗಿರುವ ವಿವರಣೆಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಪ್ರಮುಖ ಅಗತ್ಯತೆಗಳನ್ನು ಮೊದಲು ನೋಡೋಣ

. ಅತೀ ಕಡಿಮೆ ಎಂದರೂ 512ಎಂಬಿಮೆಮೊರಿ ಇರುವ ಕಿಯೋ ಓಎಸ್ ಫೋನ್ ಬೇಕು

.ವಾಟ್ಸ್ ಆಪ್ ನ ನೂತನ ವರ್ಷನ್ 2.2110.41 ಇರಬೇಕು

ವಾಟ್ಸ್ ಆಪ್ ನಲ್ಲಿ ವಾಯ್ಸ್ ಕಾಲ್ ಫೀಚರ್ ಪಡೆಯುವುದು ಹೇಗೆ?

ಕಿಯೋ ಓಎಸ್ ನಲ್ಲಿ ವಾಟ್ಸ್ ಆಪ್ ವಾಯ್ಸ್ ಕಾಲ್ ಫೀಚರ್ ನ್ನು ಪಡೆಯುವುದಕ್ಕಾಗಿ ಮೊದಲು ಬಳಕೆದಾರರು ವಾಟ್ಸ್ ಆಪ್ ನ ನೂತನ ವರ್ಷನ್ 2.2110.41 ಗೆ ಅಪ್ ಡೇಟ್ ಮಾಡಿಕೊಳ್ಳಬೇಕು.ಅದಕ್ಕಾಗಿ ಕಿಯೋ ಓಎಸ್ ನ ಆಪ್ ಸ್ಟೋರ್ ಗೆ ತೆರಳಿ. ವಾಟ್ಸ್ ಆಪ್ ನ್ನು ಹುಡುಕಾಡಿ ಮತ್ತು ಇನ್ಸ್ಟಾಲ್ ಮಾಡಿ ಅಪ್ ಡೇಟ್ ಕೊಡಿ. ನಂತರ ನಿಮಗೊಂದು ಅಪ್ ಡೇಟ್ ಆಗಿರುವ ನೋಟಿಫಿಕೇಷನ್ ಸಿಗುತ್ತದೆ.

ಜಿಯೋಫೋನ್ ಅಥವಾ ಜಿಯೋಫೋನ್ 2 ನಲ್ಲಿ ವಾಟ್ಸ್ ಆಪ್ ವಾಯ್ಸ್ ಕಾಲ್ ಮಾಡುವುದು ಹೇಗೆ?

1. ಫೋನ್ ನಲ್ಲಿ ವಾಟ್ಸ್ ಆಪ್ ನ್ನು ತೆರೆಯಿರಿ

2. ಕಾಂಟ್ಯಾಕ್ಟ್ ನ ಚಾಟ್ ವಿಂಡೋವನ್ನು ತೆರೆಯಿರಿ

3. ಆಪ್ಶನ್ ನ್ನು ತೆರೆಯುವುದಕ್ಕಾಗಿ ಕೀಪ್ಯಾಡಿನ ಮೇಲ್ಬಾಗದ ಬಲಭಾಗದ ಬಟನ್ ನ್ನು ತೆರೆಯಿರಿ

4. ಇಲ್ಲಿ ಮಧ್ಯವಿರುವ ಬಟನ್ ನ್ನು ಬಳಸಿ ವಾಯ್ಸ್ ಕಾಲ್ ಆಯ್ಕೆಯನ್ನು ತೆರೆಯಿರಿ ಓಕೆ ಬಟನ್ ನ್ನು ತೆರೆಯಿರಿ.

ಇಷ್ಟಾದ ನಂತರ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಕರೆಯ ವಿವರಣೆ ಇರುತ್ತದೆ. ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ವ್ಯಕ್ತಿ ಅಥವಾ ನೀವು ಡಯಲ್ ಮಾಡಿದ ವ್ಯಕ್ತಿಗೆ ಕರೆ ಹೋಗುತ್ತಿರುವ ಮಾಹಿತಿ ಗೋಚರವಾಗುತ್ತದೆ.

Best Mobiles in India

Read more about:
English summary
WhatsApp Voice Calls On JioPhone Available Now; Steps To Make WhatsApp Call On JioPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X