ವರ್ಕ್‌ ಫ್ರಂ ಹೋಮ್‌: ವಿಡಿಯೊ ಕಾನ್ಫರೆನ್ಸ್‌ಗೆ ಇಲ್ಲಿವೆ ಅತ್ಯುತ್ತಮ ಆಪ್ಸ್‌!

|

ದೇಶದಲ್ಲಿ ಕೊರೊನಾ ವೈಸರ್‌ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ 21 ದಿನಗಳ ಲಾಕ್‌ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಮನೆಯಲ್ಲಿಯೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ಹಲವು ಖಾಸಗಿ ಕಂಪನಿಗಳು (ವರ್ಕ್ ಫ್ರಂ ಹೋಮ್) ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಸದ್ಯ ಮನೆಯಿಂದ ಕೆಲಸ ನಿರ್ವಹಿಸಲು ಕೆಲವು ಆಪ್ಸ್‌ಗಳು ಪೂರಕ ನೆರವು ಒದಗಿಸುತ್ತವೆ.

ಉದ್ಯೋಗಿಗಳು ಮನೆಯಿಂದ ಕೆಲಸ

ಹೌದು, ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸಿದರೂ ಸಹ ಕೆಲವು ಸಂದರ್ಭಗಳಲ್ಲಿ ಸಹದ್ಯೋಗಿಗಳ ಜೊತೆಗೆ ಕೆಲಸದ ಕುರಿತಾಗಿ ಚರ್ಚೆ ಮಾಡಬೇಕಿರುತ್ತದೆ. ಗುಂಪು ಸಭೆ, ಚರ್ಚೆ, ಕೆಲಸದ ಮಾಹಿತಿ ವಿನಿಮಯ ಮಾಡುವುದು ಅನಿವಾರ್ಯ ಇರುತ್ತದೆ. ಇಂತಹ ಕೆಲಸಗಳಿಗೆ ವಿಡಿಯೊ ಕಾನ್ಫರೆನ್ಸ್‌ ಬೆಂಬಲಿಸುವ ಅಪ್ಲಿಕೇಶನ್‌ಗಳು ಹೆಚ್ಚು ಸಹಕಾರಿಯಾಗಿವೆ. ಇಂತಹ ಆಪ್ಸ್‌ ಬಳಸಿ ಆನ್‌ಲೈನ್ ಮೂಲಕ ಸುಲಭವಾಗಿ ಸಂವಹನ ನಡೆಸಬಹುದಾಗಿದೆ. ಹಾಗಾದರೆ ಅತ್ಯುತ್ತಮ ವಿಡಿಯೊ ಕಾನ್ಫರೆನ್ಸ್‌ ಆಪ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜೂಮ್-Zoom

ಜೂಮ್-Zoom

ಜೂಮ್ ಆಪ್‌ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ ಪರದೆ/ಸ್ಕ್ರೀನ್‌ ಹಂಚಿಕೆ ಮತ್ತು ವೇಗದ ಸಂದೇಶ ಕಳುಹಿಸುವಿಕೆಯನ್ನು ಬೆಂಬಲಿಸುತ್ತದೆ. ಮೆನೆಯಿಂದ ಕೆಲಸ ಮಾಡಲು ಉತ್ತಮ ಸಪೋರ್ಟ್‌ ನೀಡಲಿದೆ. ಇನ್ನು ಈ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್, ಐಓಎಸ್‌, ಮ್ಯಾಕ್ ಓಎಸ್‌ ಗಳಲ್ಲಿಯೂ ಲಭ್ಯ.

ವೆಬ್‌ಎಕ್ಸ್‌-WebEx

ವೆಬ್‌ಎಕ್ಸ್‌-WebEx

ವೆಬ್‌ಎಕ್ಸ್‌ ಆಪ್‌ ವಿಡಿಯೊ ಕಾನ್ಫರೆನ್ಸ್‌ಗೆ ಪೂರಕ ಪ್ಲಾಟ್‌ಫಾರ್ಮ್ ಒದಗಿಸಲಿದೆ. ಇತರ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಈ ಆಪ್‌ನಲ್ಲಿ ಮೆನು ಬಾರ್ ಮತ್ತು ಕಮಾಂಡ್‌ಗಳ ಮೂಲಕ ನ್ಯಾವಿಗೇಟ್ ಮಾಡುವುದು ಸುಲಭವಾಗಿದೆ. ಹಾಗೆಯೇ ವೆಬ್‌ಎಕ್ಸ್ ಮೀಟಿಂಗ್ ಮತ್ತು ವೆಬ್‌ಎಕ್ಸ್ ಟೀಮ್‌ ಈ ಸಂಸ್ಥೆ ಇತರೆ ಆಪ್ಸ್‌ಗಳಾಗಿವೆ.

ಗೂಗಲ್ ಹ್ಯಾಂಗ್‌ಔಟ್ಸ್‌-Google Hangouts

ಗೂಗಲ್ ಹ್ಯಾಂಗ್‌ಔಟ್ಸ್‌-Google Hangouts

ಗೂಗಲ್ ಒಡೆತನಕ್ಕೆ ಸೇರಿರುವ ಈ ಆಪ್‌ ವಿಡಿಯಿ ಚಾಟ್‌ಗೆ ಹೆಚ್ಚಾಗಿ ಬಳಕೆ ಮಾಡುವ ಅಪ್ಲಿಕೇಶನ್ ಆಗಿದೆ. ಇಮೇಲ್ ಸೇವೆಯಾದ ಜಿಮೇಲ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಅಂದಹಾಗೆ ಒಂದೇ ಬಾರಿಗೆ ಸುಮಾರು ಹತ್ತು ಬಳಕೆದಾರರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮಾಡಬಹುದಾಗಿದೆ.

ಸ್ಕೈಪ್‌-Skype

ಸ್ಕೈಪ್‌-Skype

ಜನಪ್ರಿಯ ವಿಡಿಯೊ ಕರೆಗಳ ಅಪ್ಲಿಕೇಶನ್‌ಗಳಲ್ಲಿ ಸ್ಕೈಪ್‌ ಅಪ್ಲಿಕೇಶನ್ ಸಹ ಒಂದಾಗಿದೆ. ಈ ಆಪ್‌ ಅನ್ನು ವೈಯಕ್ತಿ ಹಾಗೂ ವ್ಯವಹಾರಿಕ ಸಂವಹನಗಳಲ್ಲಿ ಬಳಕೆ ಮಾಡುತ್ತಾರೆ. ಉಚಿತ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಹತ್ತು ಕರೆಗಳ ಕಾನ್ಫರೆನ್ಸ್ ಸೌಲಭ್ಯವನ್ನು ಪಡೆದಿದೆ.

Most Read Articles
Best Mobiles in India

English summary
If you didn’t know what apps you could use for easy video conferences, here are five you can take a look at.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X