ಶೀಘ್ರದಲ್ಲೇ ಬರಲಿದೆ ಆನ್ಲೈನ್ ನಲ್ಲಿ ಪೆಟ್ರೋಲ್,ಡೀಸಿಲ್ ಖರೀದಿಸುವ ಸೌಲಭ್ಯ!

ಡಿಜಿಟಲೀಕರಣದ ಇನ್ನೊಂದು ಹೆಜ್ಜೆಯಾಗಿ ಸರಕಾರವು ಪೆಟ್ರೋಲ್ ಮತ್ತು ಡೀಸಿಲ್ ಅನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಚಿಂತನೆ ನಡೆಸಿದ್ದು ಸೂಕ್ತ ಸಮಾಲೋಚನೆ ನಡೆಸುತ್ತಿದ್ದಾರೆ.

By Tejaswini P G
|

ಭಾರತ ಸರಕಾರ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ಹಲವಾರು ಹೊಸ ಪ್ರಯತ್ನಗಳನ್ನು ನಡೆಸಿದೆ. ನಮ್ಮ ಸರಕಾರ ಈ ದಿಕ್ಕಿನಲ್ಲಿ ಇರಿಸ ಹೊರಟಿರುವ ಹೊಸ ಹೆಜ್ಜೆಯ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ!

ಶೀಘ್ರದಲ್ಲೇ ಬರಲಿದೆ ಆನ್ಲೈನ್ ನಲ್ಲಿ ಪೆಟ್ರೋಲ್,ಡೀಸಿಲ್ ಖರೀದಿಸುವ ಸೌಲಭ್ಯ!

ಹೌದು, ಪೆಟ್ರೋಲ್ ಮತ್ತು ಡೀಸಿಲ್ ಅನ್ನು ಅದರ ಇತರ ಉತ್ಪನ್ನಗಳೊಂದಿಗೆ ಆನ್ಲೈನ್ ನಲ್ಲಿ ಮಾರಾಟಮಾಡುವ ಯೋಜನೆ ಹಾಕುತ್ತಿದೆ ನಮ್ಮ ಸರಕಾರ. ಸರಕಾರದ ಈ ಯೋಜನೆ ಹಲವರಿಗೆ ವರವಾಗಿ ಪರಿಣಮಿಸಲಿದೆಯಾದರೂ, ಇದನ್ನು ಕಾರ್ಯರೂಪಕ್ಕೆ ತರಲು ಕಠಿಣ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಅನೇಕ ತಜ್ಞರು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತೈಲವನ್ನು ಐಟಿ ಮತ್ತು ಟೆಲಿಕಮ್ಯುನಿಕೇಶನ್ ಜೊತೆಗೆ ಬೆಸೆಯುವ ಯೋಜನೆಗಳ ಕುರಿತು ಸುಳಿವು ನೀಡಿದ್ದಾರೆ. ವರದಿಗಳ ಅನುಸಾರ ಈ ವಿಚಾರವನ್ನು ಸಚಿವರೊಬ್ಬರು ಏಪ್ರಿಲ್ 21ರಂದು ಶ್ರೀನಗರದಲ್ಲಿ ನಡೆದ ಎಂ.ಪಿ ಗಳ ಸಮಾಲೋಚನಾ ಸಭೆಯೊಂದರಲ್ಲಿ ಮೊದಲ ಬಾರಿ ಪ್ರಸ್ತಾಪಿಸಿದರು.

ಈ ಕುರಿತು ಮಾತನಾಡಿದ PricewaterhouseCoopers ಇಂಡಿಯಾ ದ ತೈಲ ಮತ್ತು ಅನಿಲ ವಿಭಾಗದ ಮುಖ್ಯಸ್ಥರಾದ ದೀಪಕ್ ಮಹುರ್ಕರ್ ಅವರು ಪೆಟ್ರೋಲ್ ಮತ್ತು ಡೀಸಿಲ್ ಅನ್ನು ಇ-ಕಾಮರ್ಸ್ ಪೋರ್ಟಲ್ ಗಳಲ್ಲಿ ಮಾರಾಟಮಡುವುದು ಮತ್ತು ಅದನ್ನು ಜನರ ಮನೆಬಾಗಿಲಿಗೆ ತಲುಪಿಸಿವುದು ತಾಂತ್ರಿಕವಾಗಿ ಸಾಧ್ಯವಿದೆ ಎಂದು ಹೇಳಿದರು.

ಗೂಗಲ್ ಕ್ರೋಮ್ ಬಳಕೆ ಮಾಡುವ ಸಂದರ್ಭದಲ್ಲಿ ಎಚ್ಚರ..!!ಗೂಗಲ್ ಕ್ರೋಮ್ ಬಳಕೆ ಮಾಡುವ ಸಂದರ್ಭದಲ್ಲಿ ಎಚ್ಚರ..!!

"ಆದರೆ ನಾವು ಇಲ್ಲಿ ವ್ಯವಹರಿಸುತ್ತಿರುವುದು ಇಂಧನದ ಜೊತೆಗೆ ಆಗಿರುವುದರಿಂದ ಕಠಿಣ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿತ್ತದೆ. ನಾವು ಮಾರಾಟಮಾಡುವ ಇಂಧನವನ್ನು ಸರಿಯಾದ ರೀತಿಯಲ್ಲಿ ಪ್ಯಾಕೇಜ್ ಮಾಡಿ ಸೀಲ್ ಮಾಡಬೇಕಲ್ಲದೆ ತುಂಬ ಜಾಗರೂಕತೆಯಿಂದ ರವಾನಿಸಬೇಕು. ತುರ್ತು ಇಂಧನದ ಅಗತ್ಯಗಳನ್ನು ಈ ಮಾಧ್ಯಮ ಪೂರೈಸಲಿದ್ದು, ಇಂಧನಕ್ಕಾಗಿ ಹಲವಾರು ಮೈಲಿ ಪ್ರಯಾಣಿಸುವ ಗ್ರಾಮೀಣ ಭಾಗದ ಜನರಿಗೆ ಇದು ತುಂಬ ಸಹಕಾರಿಯಾಗಲಿದೆ" ಎಂದು ಅವರು ಹೇಳಿದರು.

ONGC ಯ ಮಾಜಿ ಮುಖ್ಯಸ್ಥರಾದ ಆರ್.ಎಸ್.ಶರ್ಮಾ ಅವರು "ಇಂಧನವನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವ ಯೋಜನೆಯನ್ನು ಯಶಸ್ವಿಯಾಗಿ ನಿಭಾಯಿಸಬಹುದು ಆದರೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅಳವಡಿಸಿಕೊಳ್ಳಬೇಕು. ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಪಾಲಿಸಿದರೆ ಇದನ್ನು ದೊಡ್ಡ ಮಟ್ಟದಲ್ಲಿ ಉತ್ತಮವಾಗಿ ನಿರ್ವಹಿಸಬಹುದು" ಎಂದು ಹೇಳಿದ್ದಾರೆ.

ಅವರು Ficci ಹೈಡ್ರೋಕಾರ್ಬನ್ ಕಮಿಟಿಯ ಮುಖ್ಯಸ್ಥರಾಗಿದ್ದು ಇಂಧನವನ್ನು ವಾಹನಗಳಿಗೆ ತುಂಬಿಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಡೆಲಿವರಿ ನೀಡುವ ಸಿಬ್ಬಂದಿಗಳು ಪಾಲಿಸಬೇಕೆಂದು ಸಲಹೆ ನೀಡಿದ್ದಾರೆ.

ಆನ್ಲೈನ್ ನಲ್ಲಿ ಮಾರಾಟವಾಗುವ ಇಂಧನದ ಬೆಲೆ ಕುರಿತು ಉದ್ಯಮದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಇಂಧನವನ್ನು ಆನ್ಲೈನ್ ನಲ್ಲೇ ಖರೀದಿಸಿ ತಮ್ಮ ಮನೆಗೇ ಡೆಲಿವರಿ ಪಡೆಯಲು ಮಾರುಕಟ್ಟೆಯಲ್ಲಿ ಈಗಿರುವ ದರದ ಮೇಲೆ ಅಧಿಕ ಸೇವಾ ಶುಲ್ಕವನ್ನು ತೆರಬೇಕಾಗುತ್ತದೆ.

Best Mobiles in India

Read more about:
English summary
The Indian government is planning to sell petrol and diesel online in the country and delivery the same to the doorsteps of the buyers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X