ಸ್ಯಾಮ್‌ಸಂಗ್‌ನ ಹೊಸ ಗೇಮಿಂಗ್ ಅಪ್ಲಿಕೇಶನ್‌ನಿಂದ ಭರ್ಜರಿ ಮನರಂಜನೆ

ಸ್ಯಾಮ್‌ಸಂಗ್‌ನ ಹೊಸ ಗೇಮಿಂಗ್ ಅಪ್ಲಿಕೇಶನ್ ಗೇಮ್ ಲೈವ್ ಆಟವಾಡುತ್ತಿರುವಾಗಲೇ ಚಾಟ್ ಮಾಡುವ ವಿಶಿಷ್ಟ ಅನುಭೂತಿಯನ್ನು ಬಳಕೆದಾರರಿಗೆ ನೀಡಲಿದೆ. ನಿರಂತರ ಲೈವ್ ಸ್ಟ್ರೀಮ್ ಅನ್ನು ಈ ಅಪ್ಲಿಕೇಶನ್ ಮೂಲಕ ಮಾಡಬಹುದಾಗಿದೆ.

By Shwetha Ps
|

ಸ್ಯಾಮ್‌ಸಂಗ್ ಹೊಸ ಅಪ್ಲಿಕೇಶನ್ ಒಂದನ್ನು ಲಾಂಚ್ ಮಾಡಿದ್ದು ಇದನ್ನು ಗೇಮ್ ಲೈವ್ ಎಂದಾಗಿ ಹೆಸರು ನೀಡಿದೆ. ಗೇಮ್‌ಗಳನ್ನು ಆಡುವವರಿಗೆ ಈ ಅಪ್ಲಿಕೇಶನ್ ನೆರವು ನೀಡಲಿದ್ದು ನಿಮ್ಮ ಪ್ಲೇಯಿಂಗ್ ಸಮಯವನ್ನು ಫೇಸ್‌ಬುಕ್, ಯೂಟ್ಯೂಬ್ ಅಥವಾ ಟ್ವಿಚ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುವ ಸೌಲಭ್ಯವನ್ನು ಒದಗಿಸಲಿದೆ.

ಸ್ಯಾಮ್‌ಸಂಗ್‌ನ ಹೊಸ ಗೇಮಿಂಗ್ ಅಪ್ಲಿಕೇಶನ್‌ನಿಂದ ಭರ್ಜರಿ ಮನರಂಜನೆ

ನೀವು ಇದಕ್ಕಾಗಿ ಮಾಡಬೇಕಾಗಿರುವುದು ಇಷ್ಟೇ! ನಿಮ್ಮ ಲೈವ್ ಸ್ಟ್ರೀಮ್‌ಗೆ ಲಿಂಕ್ ಹಂಚಿಕೊಳ್ಳುವ ಆಯ್ಕೆಯನ್ನು ನೀವು ಪಡೆದುಕೊಳ್ಳಲಿದ್ದು ಇದನ್ನು ಟ್ವಿಟ್ಟರ್‌ನಲ್ಲಿ ಎಸ್‌ಎಂಎಸ್ ಸಂದೇಶದ ಮೂಲಕ ಹಂಚಿಕೊಳ್ಳಬಹುದು. ಇಷ್ಟಲ್ಲದೆ ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಉತ್ತಮ ಫೀಚರ್‌ಗಳಿದ್ದು, ಉದಾಹರಣೆಗೆ ಹೇಳುವುದಾದರೆ ನೀವು ಲೈವ್ ಸ್ಟ್ರೀಮ್ ಮಾಡುತ್ತಿರುವಾಗಲೇ ನೀವು ಮೈಕ್ರೋಫೋನ್ ಅನ್ನು ಬಳಸಬಹುದು ಇಲ್ಲವೇ ಗೇಮ್ ಆಡಿಯೋ ಇವೆರಡನ್ನೂ ಬಳಸಬಹುದಾಗಿದೆ.

ಸ್ಯಾಮ್‌ಸಂಗ್‌ನ ಹೊಸ ಗೇಮಿಂಗ್ ಅಪ್ಲಿಕೇಶನ್‌ನಿಂದ ಭರ್ಜರಿ ಮನರಂಜನೆ

ಆಟವಾಡುತ್ತಿರುವಾಗಲೇ ನಿಮ್ಮ ಸ್ನೇಹಿತರೊಂದಿಗೆ ನೀವು ಲೈವ್ ಚಾಟ್ ಮಾಡಬಹುದಾಗಿದೆ. ನಿಮ್ಮ ಡಿವೈಸ್‌ನಲ್ಲಿ ಸೆಶನ್ ಉಳಿಸುವ ಆಯ್ಕೆ ಕೂಡ ದೊರೆಯಲಿದೆ. ಅಪ್ಲಿಕೇಶನ್ ಕೆಲವೊಂದು ವಿವರಗಳನ್ನು ನಾವು ಈಗಾಗಲೇ ತಿಳಿಸಿದ್ದು, ಇದರ ಲಿಮಿಟೇಶನ್‌ಗಳನ್ನು ಕುರಿತು ಲೇಖನದಲ್ಲಿ ಮಾಹಿತಿ ಪಡೆದುಕೊಳ್ಳೋಣ. 4ಜಿಬಿ ವೀಡಿಯೊಗಳು 200 ನಿಮಿಷಗಳ ಉತ್ತಮ ಗುಣಮಟ್ಟದಲ್ಲಿ ದೊರೆಯಲಿದೆ. ಹೆಚ್ಚು ಸಮಯದವರೆಗೆ ನಿಮಗೆ ಸ್ಟ್ರೀಮಿಂಗ್ ಮಾಡಬೇಕು ಎಂದಾದಲ್ಲಿ ಆಗ ರೆಸಲ್ಯೂಶನ್ ಅನ್ನು ಹೊಂದಿಸಬಹುದಾಗಿದೆ.

ವರದಿಯು ಇನ್ನಷ್ಟು ಮಾಹಿತಿಯನ್ನು ನೀಡಿದ್ದು, ಗೇಮ್ ಲೈವ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ನೊಂದಿಗೆ ಸಂಯೋಜನೆಯನ್ನು ಹೊಂದಿದ್ದು ಇದುವರೆಗೆ ಅಪ್ಲಿಕೇಶನ್ ಇತರ ಸ್ಯಾಮ್‌ಸಂಗ್ ಫೋನ್‌ಗಳಲ್ಲೂ ಕಾರ್ಯನಿರ್ವಹಿಸಲಿದೆಯೇ ಎಂಬುದು ತಿಳಿದು ಬಂದಿಲ್ಲ. ಇನ್ನೂ ಅಧಿಕೃತವಾಗಿ ಅಪ್ಲಿಕೇಶನ್ ಬಿಡುಗಡೆಗೊಂಡಿಲ್ಲ ಆದ್ದರಿಂದ ಗೂಗಲ್ ಸ್ಟೋರ್‌ಗಳಲ್ಲಿ ಇದು ಕಂಡುಬರುವುದಿಲ್ಲ. ಆದರೆ ಗೇಮ್ ಲೈವ್ ಬಗ್ಗೆ ನೀವು ಇನ್ನಷ್ಟು ಉತ್ಸುಕರಾಗಿದ್ದೀರಿ ಎಂದಾದಲ್ಲಿ ಎಪಿಕೆ ಮಿರರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಮುಂಬರುವ ದಿನಗಳಲ್ಲಿ ಖುದ್ದು ಸ್ಯಾಮ್‌ಸಂಗ್ ಅಪ್ಲಿಕೇಶನ್ ಕುರಿತಂತೆ ಅಧಿಕೃತ ಘೋಷಣೆಯನ್ನು ಮಾಡಲಿದೆ.

Best Mobiles in India

Read more about:
English summary
A report by Sam Mobile claims that this new app from Samsung is aimed at the gaming enthusiasts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X